ಒಂದೇ ದಿನದಲ್ಲಿ 17,000 ಎಲ್‌ಐಸಿ ಪಾಲಿಸಿ ಮಾರಾಟ ಮಾಡಿದ್ದ ರಿತು ನಂದಾ

ಚಿತ್ರನಟ, ಬಾಲಿವುಡ್‌ನ ಖ್ಯಾತ ಸಿನಿಮಾ ನಿರ್ದೇಶಕ ದಿವಂಗತ ರಾಜ್ ಕಪೂರ್ ಮಗಳು ರಿತು ನಂದಾ ಮಂಗಳವಾರ (ಡಿಸೆಂಬರ್ 14ರಂದು) ಇಹಲೋಕ ತ್ಯಜಿಸಿದರು. ರಕ್ತ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಇವರು ತಮ್ಮ ಜೀವನದಲ್ಲಿ ಕಡಿಮೆ ಸಮಯದಲ್ಲಿ ಎಲ್‌ಐಸಿ ಪಾಲಿಸಿ ಮಾಡಿಸಿ ಗಿನ್ನಿಸ್ ರೆಕಾರ್ಡ್ ಮಾಡಿದ್ದರು.

ಉದ್ಯಮಿ ರಾಜನ್ ನಂದಾರವರ ಮಾಜಿ ಪತ್ನಿಯಾದ ರಿತು ನಂದಾ, ಒಂದೇ ದಿನದಲ್ಲಿ 17,000 ಎಲ್‌ಐಸಿ ಪಿಂಚಣಿ ಯೋಜನೆಗಳನ್ನು ಮಾರಾಟ ಮಾಡುವ ಮೂಲಕ ಗಿನ್ನಿಸ್ ದಾಖಲೆ ಮಾಡಿದ್ದರು. ರಿತು ನಂದಾ ಆರಂಭದಲ್ಲಿ ಗೃಹೋಪಯೋಗಿ ಉಪಕರಣಗಳ ವ್ಯವಹಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಆದರೆ ಆ ಬಿಜಿನೆಸ್‌ನಲ್ಲಿ ನಷ್ಟವುಂಟಾದ ಹಿನ್ನೆಲೆಯಲ್ಲಿ ವಿಮಾ ಕ್ಷೇತ್ರದಲ್ಲಿ ತಮ್ಮ ಪಯಣ ಮುಂದುವರಿಸಿದರು.

ಒಂದೇ ದಿನದಲ್ಲಿ 17,000 ಎಲ್‌ಐಸಿ ಪಾಲಿಸಿ ಮಾರಾಟ ಮಾಡಿದ್ದ ರಿತು ನಂದಾ

ವಿಮಾ ಕ್ಷೇತ್ರದಲ್ಲಿ ಹೊಸ ದಾಖಲೆಯನ್ನೇ ಸೃಷ್ಠಿಸಿದ ರಿತು ನಂದಾ ಅವರ ಅದೃಷ್ಟವೇ ಬದಲಾಗಿ ಹೋಯಿತು. ಎಲ್‌ಐಸಿ ಪಾಲಿಸಿಗಳನ್ನು ಮಾಡಿಸಿ ದಾಖಲೆ ಮಾಡಿದರ ಜೊತೆಗೆ ತಮ್ಮದೇ ಆದ ವಿಮಾ ಸೇವಾ ಕಂಪನಿ ನಂದಾ ವಿಮಾ ಸೇವೆಗಳನ್ನು(ಆರ್‌ಎನ್‌ಐಎಸ್) ಸ್ಥಾಪಿಸಿದರು.

ಕಳೆದ ನಾಲ್ಕು ದಶಕಗಳಲ್ಲಿ ಬಾಲಿವುಡ್‌ನಲ್ಲಿ ಖ್ಯಾತ ನಟ-ನಟಿಯರಿಗೆ ವಿಮಾ ಸಲಹೆಗಾರರಾಗಿದ್ದು, ನೂರಾರು ಕೋಟಿ ರುಪಾಯಿಗಳಷ್ಟು ದೊಡ್ಡ ಮೊತ್ತದ ಪಾಲಿಸಿಗಳನ್ನು ಮಾಡಿಸಿದ್ದಾರೆ. ಹಲವಾರು ವಿಮಾ ದಾಖಲೆಗಳನ್ನು ಸೃಷ್ಟಿಸಿದ್ದ ಇವರಿಗೆ ಎಲ್‌ಐಸಿಯಿಂದ 'ದಶಕದ ಅತ್ಯುತ್ತಮ ವಿಮಾ ಸಲಹೆಗಾರ' ಸೇರಿದಂತೆ ಅನೇಕ ಪ್ರಶಸ್ತಿಗಳು ಸಂದಿವೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+