For Quick Alerts
ALLOW NOTIFICATIONS  
For Daily Alerts

ರೂಪಾಯಿ ಮತ್ತೆ ಚೇತರಿಕೆ; ಷೇರು ಮಾರುಕಟ್ಟೆ ಏರಿಳಿತದ ಆಟ

|

ಮುಂಬೈ, ನ. 15: ಡಾಲರ್ ಎದುರು ನಿನ್ನೆ ಸೋಮವಾರ 48 ಪೈಸೆಯಷ್ಟು ಇಳಿಕೆ ಕಂಡಿದ್ದ ರೂಪಾಯಿ ಇಂದು ಮಂಗಳವಾರ ತುಸು ಚೇತರಿಸಿಕೊಂಡಿದೆ. ಇಂದಿನ ಫೋರೆಕ್ಸ್ ಮಾರುಕಟ್ಟೆಯಲ್ಲಿ ಪ್ರತೀ ಡಾಲರ್‌ಗೆ 80.53 ರೂಪಾಯಿಯಂತೆ ವಹಿವಾಟಾಗುತ್ತಿತ್ತು. ನಿನ್ನೆ ದಿನಾಂತ್ಯದಲ್ಲಿ 81.26 ರೂಪಾಯಿ ದರ ಇತ್ತು. ಇಂದು ಬೆಳಗಿನ ವಹಿವಾಟಿನಲ್ಲಿ ರೂಪಾಯಿ ಬಹುತೇಕ 70 ಪೈಸೆಗೂ ಅಧಿಕವಾಗಿ ಮೌಲ್ಯ ಹೆಚ್ಚಿಸಿಕೊಂಡಿದೆ. ಇಂದು ಸಂಜೆಯವರೆಗೂ ರೂಪಾಯಿ ಇದೇ ಬೇಡಿಕೆ ಉಳಿಸಿಕೊಳ್ಳುತ್ತಾ ಎಂಬುದು ಪ್ರಶ್ನೆ.

ಯಾಕೆಂದರೆ, ನಿನ್ನೆ ಸೋಮವಾರ ಕೂಡ ರೂಪಾಯಿ 80.52 ದರದಲ್ಲಿ ಬೆಳಗ್ಗೆ ಆರಂಭ ಕಂಡಿತ್ತು. ಆದರೆ, ಸಂಜೆಯ ವೇಳೆ ಮತ್ತೆ 81 ರೂ ಗಡಿ ಆಚೆ ಕುಸಿದು ಹೋಗಿತ್ತು. ಇಂದು ಕೂಡ ಬೆಳಗಿನ ಹೆಚ್ಚಳದ ಬಳಿಕ ರೂಪಾಯಿ ಮೌಲ್ಯ ತುಸು ಕುಂದುತ್ತಾ ಹೋಗುತ್ತಿರುವ ಟ್ರೆಂಡ್ ಇದೆ. ಸಂಜೆಯ ಅಂತ್ಯದಲ್ಲಿ ಡಾಲರ್ ಎದುರು ರೂಪಾಯಿ ಎಲ್ಲಿಗೆ ಹೋಗಿ ನಿಲ್ಲುತ್ತದೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ.

ಅಮೇಜಾನ್‌ನಿಂದ 10 ಸಾವಿರ ಉದ್ಯೋಗ ಕಡಿತ? ಎಲ್ಲೆಲ್ಲಿ ಎಷ್ಟು ಲೇ ಆಫ್?ಅಮೇಜಾನ್‌ನಿಂದ 10 ಸಾವಿರ ಉದ್ಯೋಗ ಕಡಿತ? ಎಲ್ಲೆಲ್ಲಿ ಎಷ್ಟು ಲೇ ಆಫ್?

ಅಮೆರಿಕದಲ್ಲಿ ಹಣದುಬ್ಬರ ನಿರೀಕ್ಷಿಸಿದಷ್ಟು ತೀವ್ರ ಮಟ್ಟದಲ್ಲಿಲ್ಲ. ಅಲ್ಲಿನ ಫೆಡರಲ್ ಬ್ಯಾಂಕ್ ತನ್ನ ಬಡ್ಡಿ ದರಗಳನ್ನು ಕಡಿಮೆ ಮಾಡದಿದ್ದರೂ ಕನಿಷ್ಠ ತೀವ್ರ ಮಟ್ಟದಲ್ಲಿ ಏರಿಕೆ ಮಾಡುವುದಿಲ್ಲ ಎಂಬುದು ಬಹುತೇಕ ಖಾತ್ರಿ ಇದೆ. ಈ ಹಿನ್ನೆಲೆಯಲ್ಲಿ ಡಾಲರ್ ಹಿಂದೆ ಮುಗಿಬೀಳುವವರ ಸಂಖ್ಯೆ ಕಡಿಮೆ ಆಗುತ್ತಿದೆ. ಪರಿಣಾಮವಾಗಿ ರೂಪಾಯಿ ಸೇರಿದಂತೆ ವಿವಿಧ ಕರೆನ್ಸಿಗಳು ಡಾಲರ್ ಎದುರು ಬಲವೃದ್ಧಿಸಿಕೊಳ್ಳುತ್ತಿವೆ. ಮುಂದೆಯೂ ಇದೇ ಟ್ರೆಂಡ್ ಮುಂದುವರಿಯಬಹುದು. ಇನ್ನೊಂದು ವಾರದೊಳಗೆ ರೂಪಾಯಿ ಮೌಲ್ಯ 80ರ ಮಟ್ಟಕ್ಕಿಂತ ಕೆಳಗೆ ಇಳಿಯುವ ನಿರೀಕ್ಷೆ ಇದೆ.

ರೂಪಾಯಿ ಮತ್ತೆ ಚೇತರಿಕೆ; ಷೇರು ಮಾರುಕಟ್ಟೆ ಏರಿಳಿತದ ಆಟ

ಸೆನ್ಸೆಕ್ಸ್ ಏರಿಕೆ, ಇಳಿಕೆ
ಇದೇ ವೇಳೆ ಷೇರುಪೇಟೆಯ ಇಂದಿನ ವಹಿವಾಟು ತೂಗುಯ್ಯಾಲೆಯಂತೆ ಹೊಯ್ದಾಡುತ್ತಿದೆ. ಮಂಗಳವಾರ ಬೆಳಗ್ಗೆ ಉತ್ತಮ ಆರಂಭ ಪಡೆದಿದ್ದ ಸೆನ್ಸೆಕ್ಸ್ ಮತ್ತು ನಿಫ್ಟಿ ನಂತರ ಕುಸಿತ ಕಂಡಿತು.

ಷೇರುಪೇಟೆಯಲ್ಲಿ ಎಲ್‌ಐಸಿ ಮಿಂಚು; ಈಗ ಕೊಂಡರೆ ಲಾಭವಾ?ಷೇರುಪೇಟೆಯಲ್ಲಿ ಎಲ್‌ಐಸಿ ಮಿಂಚು; ಈಗ ಕೊಂಡರೆ ಲಾಭವಾ?

ಬೆಳಗ್ಗೆ ಸೆನ್ಸೆಕ್ಸ್ ಸುಮಾರು 100 ಅಂಕಗಳವರೆಗೆ ಲಾಭ ಮಾಡಿಕೊಂಡಿತು. ನಿಫ್ಟಿ ಸೂಚ್ಯಂಕ 45 ಅಂಕಗಳಷ್ಟು ವೃದ್ಧಿ ಕಂಡಿತು. ಎಲ್‌ಐಸಿ ಸೇರಿದಂತೆ ಕೆಲ ಪ್ರಮುಖ ಷೇರುಗಳು ನಿರೀಕ್ಷೆಯಂತೆ ಬೆಳವಣಿಗೆ ಸಾಧಿಸಿವೆ. ಎಲ್‌ಐಸಿಗೆ ಎರಡನೇ ತ್ರೈಮಾಸಿಕದಲ್ಲಿ ಭಾರೀ ಲಾಭ ಸಿಕ್ಕಿದ್ದು ಷೇರುಪೇಟೆಯಲ್ಲೂ ಪ್ರತಿಫಲಿಸುತ್ತಿದೆ. ನಿನ್ನೆ ಷೇರು ಮಾರುಕಟ್ಟೆಯಲ್ಲಿ ಸಾಕಷ್ಟು ಏರಿಕೆ ಕಂಡಿದ್ದ ಎಲ್‌ಐಸಿ ಷೇರು ಇಂದು ಶೇ. 8ರಷ್ಟು ಹೆಚ್ಚಳ ಕಂಡಿತು.

ರೂಪಾಯಿ ಮತ್ತೆ ಚೇತರಿಕೆ; ಷೇರು ಮಾರುಕಟ್ಟೆ ಏರಿಳಿತದ ಆಟ

ಎಲ್‌ಐಸಿ ಜೊತೆಗೆ ಟಾಟಾ ಸ್ಟೀಲ್, ಪವರ್‌ಗ್ರಿಡ್, ಮಹೀಂದ್ರ ಅಂಡ್ ಮಹೀಂದ್ರ, ಇಂಡಸ್‌ಇಂಡ್ ಬ್ಯಾಂಕ್, ಹಿಂಡಾಲ್ಕೋ, ಅಪೋಲೋ ಹಾಸ್ಪಿಟಲ್ಸ್, ಜೆಎಸ್‌ಡಬ್ಲ್ಯೂ ಸ್ಟೀಲ್ ಮೊದಲಾದ ಕಂಪನಿಗಳ ಷೇರು ವೃದ್ಧಿಸಿವೆ.

ಆದರೆ, ಬೆಳಗ್ಗೆ 11:15ರ ವೇಳೆಗೆ ಸೆನ್ಸೆಕ್ಸ್ 169.02 ಅಂಕಗಳನಷ್ಟು ಕುಸಿತ ಕಂಡು 61,464.80 ಮಟ್ಟ ತಲುಪಿದೆ. ನಿಫ್ಟಿ ಕೂಡ 40 ಅಂಕಗಳಿಗೂ ಹೆಚ್ಚು ಕುಸಿತ ಕಂಡು 18,288.25 ಮಟ್ಟದಲ್ಲಿದೆ.

English summary

Rupee Regains Ground Against Dollar, Stock Market See Rise and Fall On Tuesday

Rupee which lost 48 paise to Dollar yesterday has seen appreciation today. Against dollar, rupee has raised from 81.26 to 80.53. Meanwhile, sensex and nifty have seen rise and fall since morning.
Story first published: Tuesday, November 15, 2022, 11:50 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X