For Quick Alerts
ALLOW NOTIFICATIONS  
For Daily Alerts

ಯುಎಸ್ ಡಾಲರ್ ವಿರುದ್ಧ ಭಾರತದ ರುಪಾಯಿ ಮೌಲ್ಯ 11 ಪೈಸೆ ಏರಿಕೆ

By ಅನಿಲ್ ಆಚಾರ್
|

ಯುಎಸ್ ಡಾಲರ್ ವಿರುದ್ಧ ಭಾರತದ ರುಪಾಯಿ ಮೌಲ್ಯ 11 ಪೈಸೆ ಏರಿಕೆ ಆಗಿದ್ದು, 73.49ರಲ್ಲಿ ಬುಧವಾರ ವಹಿವಾಟು ಆರಂಭವಾಯಿತು. ಇದಕ್ಕೆ ಫಾರಿನ್ ಪೋರ್ಟ್ ಫೋಲಿಯೋ ಹರಿವು ಹಾಗೂ ದೇಶೀಯ ಈಕ್ವಿಟಿಯಲ್ಲಿನ ಪ್ರಬಲ ಏರಿಕೆ ಬೆಂಬಲ ಸಿಕ್ಕಿತು. ಟ್ರೇಡರ್ಸ್ ಹೇಳುವಂತೆ, ವಿದೇಶಿ ಮಾರುಕಟ್ಟೆಯಲ್ಲಿ ಅಮೆರಿಕನ್ ಡಾಲರ್ ದುರ್ಬಲವಾಗಿದೆ.

ಇಂಟರ್ ಬ್ಯಾಂಕ್ ವಿದೇಶಿ ವಿನಿಮಯ ಮಾರ್ಕೆಟ್ ನಲ್ಲಿ ದೇಶೀಯ ಯೂನಿಟ್ ಯುಎಸ್ ಡಾಲರ್ ವಿರುದ್ಧ 73.58ನೊಂದಿಗೆ ಆರಂಭವಾಯಿತು. ಆ ನಂತರ 73.49ರೊಂದಿಗೆ ನೆಲೆ ಕಂಡು, ಈ ಹಿಂದಿನ ದಿನದ ಮುಕ್ತಾಯಕ್ಕಿಂತ 11 ಪೈಸೆ ಏರಿಕೆ ಕಂಡಿದೆ. ಮಂಗಳವಾರದಂದು ಯುಎಸ್ ಡಾಲರ್ ವಿರುದ್ಧ ರುಪಾಯಿ 30 ಪೈಸೆ ಏರಿಕೆ ಕಂಡು, ಹದಿನೈದು ದಿನಗಳಲ್ಲೇ ಗರಿಷ್ಠ ಮಟ್ಟವಾದ 73.60 ತಲುಪಿತು.

Gold Rate Today: ಗರಿಷ್ಠ ಮಟ್ಟದಿಂದ ಎಷ್ಟು ಇಳಿದಿದೆ ಗೊತ್ತಾ ಚಿನ್ನ?Gold Rate Today: ಗರಿಷ್ಠ ಮಟ್ಟದಿಂದ ಎಷ್ಟು ಇಳಿದಿದೆ ಗೊತ್ತಾ ಚಿನ್ನ?

ಪ್ರಮುಖ ಘಟನೆಗಳ ಕಾರಣಕ್ಕೆ ಜಾಗತಿಕವಾಗಿಯೇ ಹೂಡಿಕೆದಾರರು ಎಚ್ಚರಿಕೆಯಿಂದ ಇದ್ದಾರೆ. ಬ್ರೆಕ್ಸಿಟ್ ಸುತ್ತಮುತ್ತಲ ಅನಿಶ್ಚಿತತೆ, ಯುಎಸ್ ಕಾಂಗ್ರೆಸ್ ಮೂಲಕ ಹಣಕಾಸು ವೆಚ್ಚದ ಪ್ಯಾಕೇಜ್, ಇಸಿಬಿ ಸಭೆಯು ಟ್ರೇಡರ್ಸ್ ಗಳನ್ನು ತಾತ್ಕಾಲಿಕವಾಗಿ ಎಚ್ಚರಿಕೆಯಿಂದ ಇರುವಂತೆ ಮಾಡಿದೆ ಎಂದು ವರದಿ ತಿಳಿಸಿದೆ.

ಯುಎಸ್ ಡಾಲರ್ ವಿರುದ್ಧ ಭಾರತದ ರುಪಾಯಿ ಮೌಲ್ಯ 11 ಪೈಸೆ ಏರಿಕೆ

ಈ ಮಧ್ಯೆ ಡಾಲರ್ ಸೂಚ್ಯಂಕವು ಆರು ಕರೆನ್ಸಿಗಳ ಬ್ಯಾಸ್ಕೆಟ್ ವಿರುದ್ಧ 0.17 ಪರ್ಸೆಂಟ್ ಇಳಿಕೆ ಕಂಡು, 90.81ರಲ್ಲಿದೆ. ಇನ್ನು ದೇಶೀಯ ಷೇರು ಮಾರ್ಕೆಟ್ ನಲ್ಲಿ ಸೆನ್ಸೆಕ್ಸ್ 322.07 ಪಾಯಿಂಟ್ ಏರಿಕೆ ಕಂಡು, 45,930.58ರಲ್ಲಿ ವಹಿವಾಟು ನಡೆಸಿತು. ನಿಫ್ಟಿ ಸೂಚ್ಯಂಕವು 96.60 ಪಾಯಿಂಟ್ ಹೆಚ್ಚಳವಾಗಿ, 13,489.55 ಪಾಯಿಂಟ್ ನೊಂದಿಗೆ ವ್ಯವಹಾರ ನಡೆಸಿತು.

ತಾತ್ಕಾಲಿಕ ದತ್ತಾಂಶಗಳ ಮಾಹಿತಿ ಪ್ರಕಾರ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಬಂಡವಾಳ ಮಾರುಕಟ್ಟೆಯಲ್ಲಿ ಖರೀದಿದಾರರಾಗಿದ್ದು, ಮಂಗಳವಾರ 2909.60 ಕೋಟಿ ರುಪಾಯಿ ಖರೀದಿ ಮಾಡಿದ್ದಾರೆ. ಬ್ರೆಂಟ್ ಕಚ್ಚಾ ಫ್ಯೂಚರ್ಸ್, ಜಾಗತಿಕ ತೈಲ ಸೂಚ್ಯಂಕ 0.33 ಪರ್ಸೆಂಟ್ ಕುಸಿದು, ಪ್ರತಿ ಬ್ಯಾರೆಲ್ ಗೆ 48.68 USD ಇದೆ.

English summary

Rupee Surge 11 Paise Against US Dollar On December 12, 2020

Indian Rupee value surge 11 paise against US Dollar on December 9, 2020.
Story first published: Wednesday, December 9, 2020, 12:12 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X