For Quick Alerts
ALLOW NOTIFICATIONS  
For Daily Alerts

ಭಾರತದ ಬೆಳವಣಿಗೆ ದರವನ್ನ ಶೇ. 9.5ಕ್ಕೆ ತಗ್ಗಿಸಿದ ಎಸ್‌&ಪಿ

|

ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಬೆಳವಣಿಗೆಯ ಮುನ್ಸೂಚನೆಯನ್ನು ಎಸ್ & ಪಿ ಗ್ಲೋಬಲ್ ರೇಟಿಂಗ್ಸ್ ಗುರುವಾರ ಹಿಂದಿನ ಶೇಕಡಾ 11ರಿಂದ ಶೇ. 9.5ಕ್ಕೆ ಇಳಿಸಿದೆ. ಕೋವಿಡ್-19 ಎರಡನೇ ಅಲೆ ಹಿನ್ನೆಲೆಯಲ್ಲಿ ಬೆಳವಣಿಗೆ ಮೇಲೆ ಸಾಕಷ್ಟು ಅಪಾಯವನ್ನುಂಟು ಮಾಡುವ ಎಚ್ಚರಿಕೆ ನೀಡಿದೆ.

 

ಇನ್ಫೋಸಿಸ್ ಷೇರುದಾರರಿಗೆ ಸುವರ್ಣಾವಕಾಶ: ನಾಳೆಯಿಂದ ಷೇರುಗಳ ಮರುಖರೀದಿ!ಇನ್ಫೋಸಿಸ್ ಷೇರುದಾರರಿಗೆ ಸುವರ್ಣಾವಕಾಶ: ನಾಳೆಯಿಂದ ಷೇರುಗಳ ಮರುಖರೀದಿ!

ಮಾರ್ಚ್‌ನಲ್ಲಿ ಅಮೆರಿಕಾ ಮೂಲದ ರೇಟಿಂಗ್ ಏಜೆನ್ಸಿಯು 2020-21ರ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಮುನ್ಸೂಚನೆಯನ್ನು ಶೇಕಡಾ 11 ರಷ್ಟು ಎಂದು ಅಂದಾಜಿಸಿತ್ತು. ನಂತರ ಇದನ್ನು ಶೇ. 9.8ಕ್ಕೆ ತಗ್ಗಿಸಿದ ಬಳಿಕ ಇದೀಗ ಶೇಕಡಾ 9.5ರಷ್ಟು ಎಂದು ಅಂದಾಜಿಸಿದೆ.

 
ಭಾರತದ ಬೆಳವಣಿಗೆ ದರವನ್ನ ಶೇ. 9.5ಕ್ಕೆ ತಗ್ಗಿಸಿದ ಎಸ್‌&ಪಿ

ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಎರಡನೇ ಕೋವಿಡ್ ಅಲೆಯಿಂದಾಗಿ ಏಕಾಏಕಿ ರಾಜ್ಯಗಳು ಹೇರಿದ ಲಾಕ್‌ಡೌನ್‌ಗಳು ಆರ್ಥಿಕ ಚಟುವಟಿಕೆಗಳನ್ನ ತೀವ್ರ ಅಡ್ಡಿಪಡಿಸಿದ್ದಲ್ಲದೆ, ಬೆಳವಣಿಗೆ ದೃಷ್ಟಿಕೋನವನ್ನ ತಗ್ಗಿಸಿತು ಎನ್ನಲಾಗಿದೆ.

''ಈ ಹಣಕಾಸು ವರ್ಷದಲ್ಲಿ ನಮ್ಮ ಮಾರ್ಚ್ ಮುನ್ಸೂಚನೆಯನ್ನು ಶೇಕಡಾ 11 ರಷ್ಟಿಂದ ಶೇ. 9.5 ರಷ್ಟು ಬೆಳವಣಿಗೆಯನ್ನ ನಾವು ಅಂದಾಜಿಸಿದ್ದೇವೆ " ಎಂದು ಎಸ್ ಆ್ಯಂಡ್ ಪಿ ಹೇಳಿದೆ.

ಖಾಸಗಿ ಮತ್ತು ಸಾರ್ವಜನಿಕ ವಲಯದ ಬ್ಯಾಲೆನ್ಸ್ ಶೀಟ್‌ಗಳಿಗೆ ಶಾಶ್ವತ ಹಾನಿಯು ಮುಂದಿನ ಒಂದೆರಡು ವರ್ಷಗಳಲ್ಲಿ ಬೆಳವಣಿಗೆಯನ್ನು ನಿರ್ಬಂಧಿಸುತ್ತದೆ ಎಂದು ಹೇಳುವ ಮೂಲಕ, ಮಾರ್ಚ್ 31, 2023 ಕ್ಕೆ ಕೊನೆಗೊಳ್ಳುವ ಮುಂದಿನ ಹಣಕಾಸು ವರ್ಷದಲ್ಲಿ ಭಾರತದ ಬೆಳವಣಿಗೆಯನ್ನು ಶೇಕಡಾ 7.8 ಕ್ಕೆ ಹೆಚ್ಚಿಸುತ್ತದೆ ಎಂದು ಅದು ಹೇಳಿದೆ.

2020-21ರ ಆರ್ಥಿಕ ವರ್ಷದಲ್ಲಿ ಕೋವಿಡ್ ಕಾರಣದಿಂದಾಗಿ ಭಾರತದ ಆರ್ಥಿಕತೆಯು ಶೇಕಡಾ 7.3 ರಷ್ಟು ಕುಗ್ಗಿತು, 2019-20ರಲ್ಲಿ ಶೇಕಡಾ 4ರಷ್ಟು ಬೆಳವಣಿಗೆಯಾಗಿದೆ.

English summary

S&P Slashes India's GDP Growth Forecast To 9.5%

S&P Global Ratings on Thursday slashed India's GDP growth forecast for the current financial year to 9.5 per cent
Story first published: Thursday, June 24, 2021, 15:21 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X