For Quick Alerts
ALLOW NOTIFICATIONS  
For Daily Alerts

ಸದ್ಗುರು ಜಗ್ಗಿ ವಾಸುದೇವ್ ಕಲಾಕೃತಿ "ಭೈರವ" 5.1 ಕೋಟಿಗೆ ಹರಾಜು

|

ಇಶಾ ಫೌಂಡೇಷನ್ ಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ರಚಿಸಿದ "ಭೈರವ" ಎಂಬ ಬಸವನ ವಿಶಿಷ್ಟ ಕಲಾಕೃತಿಯು ಆನ್ ಲೈನ್ ಹರಾಜಿನಲ್ಲಿ 5.1 ಕೋಟಿ ರುಪಾಯಿ ಪಡೆದಿದೆ. ಇಶಾ ಫೌಂಡೇಷನ್ ನಲ್ಲಿ ಇದ್ದ ಬಸವವೊಂದು ಈಚೆಗೆ ಸಾವನ್ನಪ್ಪಿತ್ತು. ಅದರ ಮೇಲಿದ್ದ ಪ್ರೀತಿಯ ದ್ಯೋತಕವಾಗಿ ಜಗ್ಗಿ ವಾಸುದೇವ್ ಈ ಕಲಾಕೃತಿ ರಚಿಸಿದ್ದರು.

ಒಂದು ತಿಂಗಳ ಹಿಂದೆ ಈ ಕಲಾಕೃತಿಯನ್ನು ಆನ್ ಲೈನ್ ನಲ್ಲಿ ಹರಾಜಿಗೆ ಇಡಲಾಗಿತ್ತು. ಸೋಮವಾರದಂದು ಈ ಪ್ರಕ್ರಿಯೆ ಮುಕ್ತಾಯಗೊಂಡಿತು. ಅತಿ ಹೆಚ್ಚಿನ ಬಿಡ್ ಮೊತ್ತ ಎಂದು 5.1 ಕೋಟಿ ರುಪಾಯಿ ಬಂದಿತ್ತು. ಈ ಮೊತ್ತವು ಧಾರ್ಮಿಕ ಸಂಸ್ಥೆಯಾದ ಇಶಾ ಫೌಂಡೇಷನ್ ಕಾರ್ಯಗಳಿಗೆ ಬಳಕೆ ಆಗುತ್ತದೆ.

ಸದ್ಗುರು ಜಗ್ಗಿ ವಾಸುದೇವ್ ಕಲಾಕೃತಿ

ಇದು ಸದ್ಗುರು ಅವರ ಎರಡನೇ ಕಲಾಕೃತಿ. ಈಗ ಬಂದಿರುವ ಮೊತ್ತವನ್ನು ಕೊರೊನಾ ವಿರುದ್ಧ ಹೋರಾಟದಲ್ಲಿ ತೊಡಗಿರುವವರು ಹಾಗೂ ತಮಿಳುನಾಡಿನ ಗ್ರಾಮೀಣ ಭಾಗದ ಜನರಿಗಾಗಿ ಬಳಸಲಾಗುತ್ತದೆ ಎಂದು ಹೇಳಿಕೆಯಲ್ಲಿ ಮಂಗಳವಾರ ತಿಳಿಸಲಾಗಿದೆ. ಜಗ್ಗಿ ವಾಸುದೇವ್ ಅವರ ಈ ಹಿಂದಿನ ಕಲಾಕೃತಿಗೆ 4.14 ಕೋಟಿ ಸಂಗ್ರಹವಾಗಿತ್ತು.

English summary

Sadguru Jaggi Vasudev Painting "Bhairava" Fetched 5.1 Crore Rupees In Online Auction

Isha foundation founder Sadguru Jaggi Vasudev painting "Bhairava" fetched 5.1 crore rupees in online auction.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X