For Quick Alerts
ALLOW NOTIFICATIONS  
For Daily Alerts

ಸ್ಯಾಮ್ ಸಂಗ್ ಸಂಸ್ಥೆ ದಿಗ್ಗಜ ಲೀ ಕುನ್ ಹೀ ವಿಧಿವಶ

|

ಟಿವಿ ಮಾರುಕಟ್ಟೆಯಿಂದ ಅತ್ಯಾಧುನಿಕ ಎಲೆಕ್ಟ್ರಾನಿಕ್ ಉಪಕರಣ ತನಕ ಸ್ಯಾಮ್ ಸಂಗ್ ಸಂಸ್ಥೆ ಬೆಳೆಯಲು ಲೀ ಕುನ್ ಕಾರಣರಾಗಿದ್ದ ಲೀ ಕುನ್ ಹೀ(78) ವಿಧಿವಶರಾಗಿದ್ದಾರೆ.

ದಕ್ಷಿಣ ಕೊರಿಯಾ ಮೂಲದ ಸ್ಯಾಮ್ ಸಂಗ್ ಎಲೆಕ್ಟ್ರಾನಿಕ್ಸ್ ಸಂಸ್ಥೆಯ ಚೇರ್ಮನ್ ಲೀ ಕುನ್ ಹೀ ಆಧುನಿಕ ಬ್ರ್ಯಾಂಡ್ ಅಭಿವೃದ್ಧಿಗಾರರಾಗಿ ಗುರುತಿಸಿಕೊಂಡವರು. ಒಂದು ಕಾಲದಲ್ಲಿ ಚೀನಾ ಹಾಗೂ ಅಮೆರಿಕದ ಸ್ಮಾರ್ಟ್ ಫೋನ್ ಮಾರುಕಟ್ಟೆಗೆ ಸವಾಲೊಡ್ಡೆ ಕೊರಿಯಾದ ಸ್ಯಾಮ್ ಸಂಗ್ ಉನ್ನತ ಸ್ಥಾನಕ್ಕೇರಿತ್ತು.

2014ರ ಮೇ ತಿಂಗಳಿನಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದ ಲೀ ಅವರು ಬಹುಕಾಲದಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು.

''ಲೀ ಅವರ ಕೊಡುಗೆ ಹಾಗೂ ಶ್ರೇಷ್ಠ ಜೀವನ ಪಥವನ್ನು ಸ್ಯಾಮ್ ಸಂಗ್ ಹಂಚಿಕೊಂಡಿದೆ. ಅವರ ಆಶಯ, ಘನತೆಗೆ ತಕ್ಕಂತೆ ಸಂಸ್ಥೆ ಮುಂದುವರೆಯಲಿದೆ'' ಎಂದು ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ.

 

ಸ್ಯಾಮ್ ಸಂಗ್ ಎಲೆಕ್ಟ್ರಾನಿಕ್ಸ್ ಕೋ ಸಂಸ್ಥೆಯನ್ನು 30 ವರ್ಷಗಳ ಹಿಂದೆ ತಮ್ಮ ತಂದೆಯಿಂದ ಪಡೆದ ಲೀ ಕುನ್, ಜಾಗತಿಕ ಬ್ರ್ಯಾಂಡ್ ಆಗಿ ಬೆಳೆಸಿದರು. ಸ್ಮಾರ್ಟ್ ಫೋನ್, ಟಿವಿ, ಮೆಮೋರಿ ಚಿಪ್, ಹಾರ್ಡ್ ಡಿಸ್ಕ್ ಹೀಗೆ ಅನೇಕ ಮಾರುಕಟ್ಟೆಗಳಲ್ಲಿ ಸ್ಯಾಮ್ ಸಂಗ್ ತನ್ನ ಛಾಪು ಮೂಡಿಸಿದೆ.

ಸ್ಯಾಮ್ ಸಂಗ್ ಸಂಸ್ಥೆ ದಿಗ್ಗಜ ಲೀ ಕುನ್ ಹೀ ವಿಧಿವಶ

ಸ್ಯಾಮ್ ಸಂಗ್ ಪ್ರಮುಖ ಪಾತ್ರವಹಿಸಿದೆ. ಜೀವ ವಿಮೆ, ಹೋಟೆಲ್, ಅಮ್ಯೂಸ್ ಮೆಂಟ್ ಪಾರ್ಕ್ ಹೀಗೆ ದೇಶದ ವ್ಯಾಪಾರ ವಹಿವಾಟಿನ ಶೇ 20ರಷ್ಟು ಪಾಲು ಸ್ಯಾಮ್ ಸಂಗ್ ಹೊಂದಿದ್ದು, ಏಷ್ಯಾದ ನಾಲ್ಕನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ದಕ್ಷಿಣ ಕೊರಿಯಾದ ಆರ್ಥಿಕ ಬೆಳವಣಿಗೆಗೂ ಸ್ಯಾಮ್ ಸಂಗ್ ಕಾರಣವಾಗಿದೆ.

ಲೀ ಕುನ್ ಅವರು ತಮ್ಮ ತಂದೆ ಕೈಗಾರಿಕಾ ಹರಿಕಾರ ಬೈಯುಂಗ್ ಚುಲ್ ಅವರ ಮಾರ್ಗದರ್ಶನದಲ್ಲೇ ನಡೆದರೂ, 2008ರಲ್ಲಿ ತೆರಿಗೆ ವಂಚನೆ ಆರೋಪ ಹೊತ್ತು ಜೈಲು ಸೇರಿದ್ದರು. 2009ರಲ್ಲಿ ಕ್ಷಮಾದಾನ ಪಡೆದು 2010ರಲ್ಲಿ ಮತ್ತೆ ಸ್ಯಾಮ್ ಸಂಗ್ ಬೋರ್ಡ್ ಸೇರಿದರು. ಆದರೆ, 2014ರಿಂದ ಬಹುತೇಕ ಅವರ ಪುತ್ರ ಲೀ ಜಿ ಯಂಗ್ ಅವರೇ ಸಂಸ್ಥೆಯನ್ನು ನಿಭಾಯಿಸುತ್ತಾ ಬಂದಿದ್ದಾರೆ. ಸ್ಯಾಮ್ ಸಂಗ್ ತನ್ನ ಈ ಹಿಂದಿನ ಪ್ರಭುತ್ವ ಕಳೆದುಕೊಂಡಿದ್ದರೂ ಇನ್ನೂ ಜೀವಂತವಾಗಿದೆ.

ಆರಂಭದಲ್ಲಿ ಜಪಾನ್ ತಂತ್ರಜ್ಞಾನ ಬಳಸುತ್ತಿದ್ದ ಸಂಸ್ಥೆಯಲ್ಲಿ ಸ್ವಂತ ತಂತ್ರಜ್ಞಾನ ಅಭಿವೃದ್ಧಿ ಪಡಿಸಲು ಲೀ ಕುನ್ ಕಾರಣರಾದರು. ಸ್ಯಾಮ್ ಸಂಗ್ ಮೋಟರ್ಸ್ ನಿರ್ಮಿಸಿ ಕೈಸುಟ್ಟುಕೊಂಡ ಲೀಕುನ್ ವಿವಾದಿತ ಉದ್ಯಮಿ.

English summary

Samsung Electronics Chairman Lee Kun-hee passes away at 78

Samsung Electronics chairman Lee Kun-Hee, who transformed the small television maker into a global giant of consumer electronics, has died. He was 78.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X