For Quick Alerts
ALLOW NOTIFICATIONS  
For Daily Alerts

ಈ ನೈಟ್ ಕ್ಲಬ್ ನಲ್ಲಿ ಸಂಸ್ಕೃತ ಹಾಡು, ವೆಜ್ ಫುಡ್, ಸಿಗರೇಟ್- ಲಿಕ್ಕರ್ ನಾಟ್ ಅಲೋಡ್

|

ಭಾರತದ ನೈಟ್ ಕ್ಲಬ್ ಗಳು ಹೇಗಿರುತ್ತದೆ ಎಂಬ ಬಗ್ಗೆ ನಿಮಗೇನಾದರೂ ಗೊತ್ತಿದೆಯಾ? ನೀವೇನಾದರೂ ಹೋಗಿದ್ದರೆ ಅಥವಾ ಸಿನಿಮಾಗಳಲ್ಲಿ ನೋಡಿದ್ದರೆ ಗೊತ್ತಿರಬಹುದು. ಅಲ್ಲಿ ಹಿಂದಿ, ಪಂಜಾಬಿ ಅಥವಾ ಇಂಗ್ಲಿಷ್ ಹಾಡುಗಳನ್ನು ಹಾಕಲಾಗುತ್ತದೆ. ಅಲ್ಲಿ ಇಡೀ ರಾತ್ರಿ ಆ ಹಾಡುಗಳಿಗೆ ಹೆಜ್ಜೆ ಹಾಕಲಾಗುತ್ತದೆ. ಆದರೆ ಭಾರತದಿಂದ ದೂರದಲ್ಲಿ ಇರುವ ದೇಶವೊಂದರಲ್ಲಿ ವಿಶಿಷ್ಟವಾದ ನೈಟ್ ಕ್ಲಬ್ ವೊಂದಿದೆ. ಇಲ್ಲಿ ಜನರು ಸಂಸ್ಕೃತ ಹಾಡಿಗೆ ಕುಣಿಯುತ್ತಾರೆ, ಸಸ್ಯಾಹಾರ ಮಾತ್ರ ಸೇವಿಸುತ್ತಾರೆ.

ಅಂಥ ದೇಶ ಯಾವುದಪ್ಪ ಅಂತೀರಾ? ಆ ದೇಶದ ಹೆಸರು ಅರ್ಜೆಂಟಿನಾ. ಆ ನೈಟ್ ಕ್ಲಬ್ ನ ಹೆಸರು ಗ್ರೋವ್. ಆ ಕ್ಲಬ್ ಇರುವುದು ಅರ್ಜೆಂಟಿನಾದ ರಾಜಧಾನಿ ಬ್ಯೂನಸ್ ಐರಸ್ ನಲ್ಲಿ. ಇಲ್ಲಿ ಗಣೇಶ ಶರಣಂ, ಗೋವಿಂದ- ಗೋವಿಂದ, ಜೈ ಜೈ ರಾಧಾ ರಮಣ್ ಹರಿ ಬೋಲ್ ಮತ್ತು ಜೈ ಕೃಷ್ಣ ಹರೇ (ಎಲ್ಲವೂ ಭಕ್ತಿ ಗೀತೆಗಳು) ಹಾಕಲಾಗುತ್ತದೆ. ಜನರು ಈ ಹಾಡುಗಳಿಗೇ ಡ್ಯಾನ್ಸ್ ಮಾಡುತ್ತಾರೆ.

ಯಾವುದೇ ದಿನದಲ್ಲೂ ಬ್ಯೂನಸ್ ಐರಸ್ ನ ಈ ಕ್ಲಬ್ ನಲ್ಲಿ ರಾತ್ರಿ ವೇಳೆ 800 ಜನರಷ್ಟು ಸಂಖ್ಯೆ ಇರುತ್ತದೆ. ಭಾರತದ ರಾಜತಾಂತ್ರಿಕ ಅಧಿಕಾರಿ ವಿಶ್ವನಾಥನ್ ಅವರು ಈ ಕ್ಲಬ್ ಗೆ 2012ರಲ್ಲಿ ಭೇಟಿ ನೀಡಿ, ತಮ್ಮ ಅನುಭವ ಹಂಚಿಕೊಂಡಿದ್ದರು. ಈ ನೈಟ್ ಕ್ಲಬ್ ನಲ್ಲಿ ಜನರು ಮದ್ಯ- ತಂಬಾಕು ಸೇವನೆ ಕೂಡ ಮಾಡುವ ಹಾಗಿಲ್ಲ.

ಸಂಸ್ಕೃತ ಹಾಡು, ವೆಜ್ ಫುಡ್, ಸಿಗರೇಟ್- ಲಿಕ್ಕರ್ ನಾಟ್ ಅಲೋಡ್

ಅಷ್ಟೇ ಅಲ್ಲ, ಇಲ್ಲಿ ಮಾದಕ ವಸ್ತುಗಳನ್ನು ನಿಷೇಧಿಸಲಾಗಿದೆ. ಮಾಂಸ ಹಾಗೂ ಮೀನು ಕೂಡ ತಿನ್ನುವಂತಿಲ್ಲ. ಸಾಫ್ಟ್ ಡ್ರಿಂಕ್ಸ್, ಹಣ್ಣಿನ ರಸ ಮತ್ತು ಸಸ್ಯಾಹಾರ ಮಾತ್ರ ದೊರೆಯುತ್ತದೆ.

English summary

Sanskrit Song Plays In This Night Club

Grove, night club in Argentina. Sanskrit song plays in this club. Only veg food served, liquor- tobacco not allowed.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X