For Quick Alerts
ALLOW NOTIFICATIONS  
For Daily Alerts

ವಿಶ್ವದ ಅತ್ಯಂತ ಲಾಭದ ಕಂಪೆನಿ Saudi Aramco IPO ಅಲಿಬಾಬ ದಾಖಲೆ ಮೀರುತ್ತಾ?

|

ರಿಯಾದ್, ನವೆಂಬರ್ 4: ರಿಯಾದ್ ಷೇರು ಮಾರುಕಟ್ಟೆಯಲ್ಲಿ ವಿಶ್ವದ ಅತ್ಯಂತ ಲಾಭದಾಯಕ ಕಂಪೆನಿ ಸೌದಿ ಅರಾಮ್ಕೋ ಷೇರುಗಳನ್ನು ಲಿಸ್ಟ್ ಮಾಡುವ ಯೋಜನೆ ಬಗ್ಗೆ ಭಾನುವಾರ ಖಾತ್ರಿ ಮಾಡಲಾಗಿದೆ. ಕಂಪೆನಿ ಇತಿಹಾಸದಲ್ಲಿ ಇದೊಂದು ಮೈಲುಗಲ್ಲು ಆಗಲಿದೆ. ಅರಾಮ್ಕೋ ಮೌಲ್ಯ ಹಾಗೂ ಷೇರು ಮಾರಾಟದ ಗಾತ್ರ ಈ ಎರಡೂ ದೃಷ್ಟಿಯಿಂದಲೂ ಇದು ವಿಶ್ವದ ಅತಿ ದೊಡ್ಡ ಐಪಿಒ (ಇನಿಷಿಯಲ್ ಪಬ್ಲಿಕ್ ಆಫರಿಂಗ್) ಆಗಲಿದೆ.

ಸೌದಿ ಅರಾಮ್ಕೋ 1 ಪರ್ಸೆಂಟ್ ಷೇರು ಐಪಿಒ ಮೂಲಕ ಮಾರಾಟಕ್ಕೆ ಮುಂದಾದರೂ $ 20 ಬಿಲಿಯನ್ ಮೌಲ್ಯದ್ದಾಗುತ್ತದೆ. ಇನ್ನು 2 ಪರ್ಸೆಂಟ್ ಆದರೆ $ 40 ಬಿಲಿಯನ್ ತಲುಪುತ್ತದೆ. ಒಂದು ಬಿಲಿಯನ್ ಅಂದರೆ ನೂರು ಕೋಟಿ. ಇಲ್ಲಿ ಕೊಟ್ಟಿರುವುದು ಅಮೆರಿಕನ್ ಡಾಲರ್ ಲೆಕ್ಕಾಚಾರದಲ್ಲಿ. ಒಂದು ಡಾಲರ್ ಮೌಲ್ಯವನ್ನು ಭಾರತೀಯ ರುಪಾಯಿ ಲೆಕ್ಕದಲ್ಲಿ ಇವತ್ತಿಗೆ ಎಪ್ಪತ್ತೊಂದು ರುಪಾಯಿ ಅಂದುಕೊಳ್ಳಬಹುದು.

ಐ ಪಿ ಓ ಲಿಸ್ಟಿಂಗ್, ತ್ವರಿತ ಸಂಪಾದನೆಗೆ ದಾರಿ - ತಪ್ಪಿದರೆ ಕ್ರೂರಿಐ ಪಿ ಓ ಲಿಸ್ಟಿಂಗ್, ತ್ವರಿತ ಸಂಪಾದನೆಗೆ ದಾರಿ - ತಪ್ಪಿದರೆ ಕ್ರೂರಿ

ಹಾಗೆ ಲೆಕ್ಕ ಹಾಕಿದರೆ ಒಂದು ಪರ್ಸೆಂಟ್ ಷೇರು ಮಾರಾಟಕ್ಕೆ ಒಂದು ಲಕ್ಷದ ನಲವತ್ತು ಸಾವಿರ ಕೋಟಿ ಆಗುತ್ತದೆ. ಇನ್ನು ಎರಡು ಪರ್ಸೆಂಟ್ ಅಂದರೆ ಎರಡು ಲಕ್ಷದ ಎಂಬತ್ತು ಸಾವಿರ ಕೋಟಿ ತಲುಪುತ್ತದೆ. ಈ ಹಣವನ್ನು ಸೌದಿ ಸಾಮ್ರಾಜ್ಯದ ಆರ್ಥಿಕ ಪ್ರಗತಿ, ಹೂಡಿಕೆ ಮತ್ತಿತರ ಬೆಳವಣಿಗೆಗೆ ಬಳಸಬೇಕು ಎಂಬುದು ರಾಜ ಮೊಹ್ಮದ್ ಬಿನ್ ಸಲ್ಮಾನ್ ಉದ್ದೇಶ.

ವಿಶ್ವದ ಅತ್ಯಂತ ಲಾಭದ Saudi Aramco IPO ಅಲಿಬಾಬ ದಾಖಲೆ ಮೀರುತ್ತಾ?

ಸದ್ಯಕ್ಕಂತೂ ವಿಶ್ವದ ಅತಿ ದೊಡ್ಡ ಐಪಿಒ ಎಂಬ ದಾಖಲೆ ಚೀನಾದ ಅತಿ ದೊಡ್ಡ ಇ ಕಾಮರ್ಸ್ ಕಂಪೆನಿ ಅಲಿಬಾಬ ಹೆಸರಿನಲ್ಲಿದೆ. 2014ರಲ್ಲಿ ನ್ಯೂಯಾರ್ಕ್ ನಲ್ಲಿ 25 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಐಪಿಒ ಬಿಡುಗಡೆ ಮಾಡಿತ್ತು. ಅಂದ ಹಾಗೆ ಅಲಿಬಾಬ ಕಂಪೆನಿಯು ಮತ್ತೆ ಹಾಂಕಾಂಗ್ ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಮಾಡಿ, 20 ಬಿಲಿಯನ್ ಅಮೆರಿಕನ್ ಡಾಲರ್ ಸಂಗ್ರಹದ ಗುರಿ ಹೊಂದಿದೆ.

ಈ ವರೆಗಿನ ಅತಿ ದೊಡ್ಡ ಐಪಿಒಗಳ ಪಟ್ಟಿ ಹೀಗಿದೆ:
ಮಲ್ಟಿನ್ಯಾಷನಲ್ ಕಾಂಗ್ಲೊಮೆರೇಟ್ ಸಾಫ್ಟ್ ಬ್ಯಾಂಕ್ $ 23.5 ಬಿಲಿಯನ್

ಅಗ್ರಿಕಲ್ಚರ್ ಬ್ಯಾಂಕ್ ಆಫ್ ಚೀನಾ $ 22.1 ಬಿಲಿಯನ್

ಇಂಡಸ್ಟ್ರಿಯಲ್ ಅಂಡ್ ಕಮರ್ಷಿಯಲ್ ಬ್ಯಾಂಕ್ ಆಫ್ ಚೀನಾ $ 21.9 ಬಿಲಿಯನ್

ಎಐಎ ಗ್ರೂಪ್ $ 20.5 ಬಿಲಿಯನ್

ವೀಸಾ ಇಂಕ್. $ 19.6 ಬಿಲಿಯನ್

ಎನ್ ಟಿಟಿ ಡೊಕೊಮೊ $ 18.4 ಬಿಲಿಯನ್

ಜನರಲ್ ಮೋಟಾರ್ಸ್ $ 18.1 ಬಿಲಿಯನ್

ಎನೆಲ್ $ 17.4 ಬಿಲಿಯನ್

ಫೇಸ್ ಬುಕ್ $ 16 ಬಿಲಿಯನ್

ಎನ್ ಟಿಟಿ $ 13.6 ಬಿಲಿಯನ್

ಡಾಯಿಷ್ ಟೆಲಿಕಾಮ್ $ 13 ಬಿಲಿಯನ್

English summary

Saudi Aramco Company May Break World's Biggest IPO Record

Saudi Aramco world's most profitable company confirmed about it's IPO. It may break all previous records. Here is the reason.
Story first published: Monday, November 4, 2019, 12:50 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X