For Quick Alerts
ALLOW NOTIFICATIONS  
For Daily Alerts

ರಿಲಯನ್ಸ್ ನಲ್ಲಿ 1500 ಕೋಟಿ USD ಹೂಡಿಕೆ ಮೇಲೆ ಈಗಲೂ ಅರಾಮ್ಕೋ ಕಣ್ಣು

|

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನ ರಿಫೈನಿಂಗ್ ನಿಂದ ಕೆಮಿಕಲ್ಸ್ ಉದ್ಯಮದ ತನಕ ಎಲ್ಲದರಲ್ಲೂ ಷೇರಿನ ಪಾಲು ಖರೀದಿಯ 1500 ಕೋಟಿ ಅಮೆರಿಕನ್ ಡಾಲರ್ ವ್ಯವಹಾರದ ಮೇಲೆ ಈಗಲೂ ಕೆಲಸ ನಡೆಯುತ್ತಿದೆ ಎಂದು ಸೌದಿ ಅರಾಮ್ಕೋ ಹೇಳಿದೆ. ತೈಲ ಬೆಲೆಯಲ್ಲಿ ಭಾರೀ ಇಳಿಕೆಯಾಗಿ ಹೂಡಿಕೆ ಮೇಲೆ ವೆಚ್ಚ ತಗ್ಗಿಸುವ ಅನಿವಾರ್ಯದಲ್ಲಿ ಇದ್ದರೂ ಈ ವ್ಯವಹಾರ ಕೈ ಬಿಟ್ಟಿಲ್ಲ ಎಂದು ತಿಳಿಸಿದೆ.

 

ಕೊರೊನಾದಿಂದಾಗಿ ಇಂಧನ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಸನ್ನಿವೇಶಗಳು ಸೃಷ್ಟಿಯಾಗಿದ್ದರಿಂದ ವ್ಯವಹಾರ ಮುಂದಕ್ಕೆ ಹೋಗಿದೆ ಎಂದು ಜುಲೈ ತಿಂಗಳ ಮಧ್ಯದಲ್ಲಿ ರಿಲಯನ್ಸ್ ಅಧ್ಯಕ್ಷ ಮುಕೇಶ್ ಅಂಬಾನಿ ಹೇಳಿದ್ದರು. ವಿಶ್ವದ ಅತಿ ದೊಡ್ಡ ತೈಲ ರಫ್ತು ಕಂಪೆನಿಯಾದ ಸೌದಿ ಅರಾಮ್ಕೋದಿಂದ ರಿಲಯನ್ಸ್ ಜತೆಗಿನ ಒಪ್ಪಂದ ಅಂತಿಮವಾದಲ್ಲಿ ಪ್ರಮುಖ ರಿಫೈನರ್ ಹಾಗೂ ರಾಸಾಯನಿಕ ಉತ್ಪಾದಕ ಆಗಿ ಹೊರಹೊಮ್ಮಲಿದೆ.

 

ವಿಶ್ವದ ದೊಡ್ಡ ತೈಲ ರಫ್ತುದಾರ ಕಂಪೆನಿ ಸೌದಿಅರಾಮ್ಕೋ ಲಾಭ 73% ಇಳಿಕೆವಿಶ್ವದ ದೊಡ್ಡ ತೈಲ ರಫ್ತುದಾರ ಕಂಪೆನಿ ಸೌದಿಅರಾಮ್ಕೋ ಲಾಭ 73% ಇಳಿಕೆ

ಸೌದಿ ಅರಾಮ್ಕೋದಿಂದ ಭಾರತಕ್ಕೆ ದೊಡ್ಡ ಪ್ರಮಾಣದಲ್ಲಿ ಕಚ್ಚಾ ತೈಲ ಬರುತ್ತದೆ. ಇನ್ನು ರಿಲಯನ್ಸ್ ನಿಂದ ಗ್ಯಾಸೋಲಿನ್ ಸೇರಿದಂತೆ ಪೆಟ್ರೋಲಿಯಂ ಉತ್ಪನ್ನಗಳನ್ನು ಸೌದಿಗೆ ಮಾರಾಟ ಮಾಡಲಾಗುತ್ತದೆ. "ನಾವು ಈಗಲೂ ರಿಲಯನ್ಸ್ ಜತೆಗೆ ಚರ್ಚೆ ನಡೆಸುತ್ತಿದ್ದೇವೆ" ಎಂದು ಅರಾಮ್ಕೋದ ಸಿಇಒ ಅಮಿನ್ ನಸೀರ್ ಭಾನುವಾರ ಹೇಳಿದ್ದಾರೆ. ರಿಲಯನ್ಸ್ ಜತೆಗಿನ ವ್ಯವಹಾರದ ಬಗ್ಗೆ ಷೇರುದಾರರಿಗೆ ಮಾಹಿತಿ ಒದಗಿಸುತ್ತೇವೆ ಎಂದು ಹೇಳಿದ್ದಾರೆ.

ರಿಲಯನ್ಸ್ ನಲ್ಲಿ 1500 ಕೋಟಿ USD ಹೂಡಿಕೆ ಮೇಲೆ ಈಗಲೂ ಅರಾಮ್ಕೋ ಕಣ್ಣು

ಅರಾಮ್ಕೋದಿಂದ ಭಾನುವಾರ ಜೂನ್ ತ್ರೈಮಾಸಿಕದ ಫಲಿತಾಂಶ ಪ್ರಕಟಿಸಲಾಗಿದ್ದು, ನಿವ್ವಳ ಆದಾಯ ಕಳೆದ ವರ್ಷಕ್ಕಿಂತ ಶೇಕಡಾ 75ರ ತನಕ ಕಡಿಮೆ ಆಗಿದೆ. 2020ರಲ್ಲಿ ತೈಲ ಬೆಲೆ ಶೇಕಡಾ 33ರಷ್ಟು ಕಡಿಮೆ ಆಗಿರುವ ಪರಿಣಾಮ ಇದು.

ಇನ್ನು ವಿಶ್ವದ ನಾಲ್ಕನೇ ಶ್ರೀಮಂತ ಆಗಿರುವ ಮುಕೇಶ್ ಅಂಬಾನಿ ಕಳೆದ ವರ್ಷ ಹೇಳಿದ ಪ್ರಕಾರ, ರಿಲಯನ್ಸ್ ಇಂಡಸ್ಟ್ರೀಸ್ ನ ರಿಫೈನಿಂಗ್ ನಿಂದ ಪೆಟ್ರೋ ಕೆಮಿಕಲ್ಸ್ ತನಕ ವ್ಯವಹಾರದ ಮೌಲ್ಯ 7500 ಕೋಟಿ ಅಮೆರಿಕನ್ ಡಾಲರ್ ಎಂದು ಮೌಲ್ಯ ಮಾಪನ ಮಾಡಿದ್ದು, ಅದರಲ್ಲಿ ಶೇಕಡಾ 20ರಷ್ಟು, ಅಂದರೆ 1500 ಕೋಟಿ ಅಮೆರಿಕನ್ ಡಾಲರ್ ಹಣವನ್ನು ಅರಾಮ್ಕೋ ಹೂಡಿಕೆ ಮಾಡಲಿದೆ.

English summary

Saudi Aramco Still Eye On Reliance Industries 15 Billion USD Deal

Saudi Aramco Sunday said that, it is still working on Reliance Industries 15 billion USD investment deal.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X