For Quick Alerts
ALLOW NOTIFICATIONS  
For Daily Alerts

SBI ನಲ್ಲಿ ಫಿಕ್ಸೆಡ್ ಡೆಪಾಸಿಟ್ ಇಟ್ಟಿದ್ದೀರಾ? : ಕಡಿಮೆಯಾಗಿದೆ ಬಡ್ಡಿ ದರ

|

ದೇಶದ ಬಹುದೊಡ್ಡ ಬ್ಯಾಂಕ್ ಎಸ್‌ಬಿಐ ಸ್ಥಿರ ಠೇವಣಿ (ಫಿಕ್ಸೆಡ್ ಡೆಪಾಸಿಟ್) ಮೇಲಿನ ಬಡ್ಡಿ ದರಗಳನ್ನು ಕಡಿತಗೊಳಿಸಿದೆ. ಈ ಹೊಸ ಬಡ್ಡಿ ದರಗಳು ಜನವರಿ 10ರಿಂದಲೇ ಅನ್ವಯವಾಗಲಿವೆ.

ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತನ್ನ ಕೆಲ ನಿರ್ದಿಷ್ಟ ಅವಧಿಯ ಠೇವಣಿಯ ಮೇಲಿನ ಬಡ್ಡಿ ದರಗಳನ್ನು 0.15 ಪರ್ಸೆಂಟ್ ಕಡಿಮೆ ಮಾಡಿದೆ. 2 ಕೋಟಿಗಿಂತ ಕಡಿಮೆ ಮೊತ್ತದ ಸ್ಥಿರ ಠೇವಣಿಗಳಿಗೆ ಹೊಸ ಬಡ್ಡಿ ದರಗಳು ಅನ್ವಯವಾಗಲಿದೆ. 1 ವರ್ಷದಿಂದ 10 ವರ್ಷದವರೆಗೆ ಇಟ್ಟಿರುವ ಸ್ಥಿರ ಠೇವಣಿ ಬಡ್ಡಿ ದರವನ್ನು 6.25 ಪರ್ಸೆಂಟ್‌ನಿಂದ 6.10 ಪರ್ಸೆಂಟ್‌ಗೆ ಇಳಿಸಲಾಗಿದೆ. ಆದರೆ 7 ದಿನಗಳಿಂದ 1 ವರ್ಷದೊಳಗಿನ ಸ್ಥಿರ ಠೇವಣಿಯ ಬಡ್ಡಿ ದರಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

SBIನಲ್ಲಿ ಫಿಕ್ಸೆಡ್ ಡೆಪಾಸಿಟ್ ಇಟ್ಟಿದ್ದೀರಾ? : ಕಡಿಮೆಯಾಗಿದೆ ಬಡ್ಡಿ

ಜನವರಿ 10ರಿಂದ ಅನ್ವಯವಾಗಲಿರುವ ಸ್ಥಿರ ಠೇವಣಿಯ ಮೇಲಿನ ಹೊಸ ಹೊಸ ಬಡ್ಡಿ ದರಗಳು ಈ ಕೆಳಗಿನಂತಿವೆ:

7 ರಿಂದ 45 ದಿನಗಳಿಗೆ 4.50%

46 ರಿಂದ 179 ದಿನಗಳವರೆಗೆ 5.50%

180 ದಿನಗಳಿಂದ 210 ದಿನಗಳವರೆಗೆ 5.80%

1 ವರ್ಷದಿಂದ 2 ವರ್ಷದವರೆಗೆ 6.10%

2 ವರ್ಷದಿಂದ 3 ವರ್ಷದೊಳಗೆ 6.10%

3 ವರ್ಷದಿಂದ 5 ವರ್ಷದೊಳಗೆ 6.10%

5 ವರ್ಷದಿಂದ 10 ವರ್ಷದೊಳಗೆ 6.10%

ಸ್ಥಿರ ಠೇವಣಿಯ ಮೇಲೆ ಹಿರಿಯ ನಾಗರೀಕರಿಗೆ ನೀಡುವ ಹೊಸ ಬಡ್ಡಿ ದರಗಳು:

7 ರಿಂದ 45 ದಿನಗಳಿಗೆ 5.00%

46 ರಿಂದ 179 ದಿನಗಳವರೆಗೆ 6.00%

180 ದಿನಗಳಿಂದ 210 ದಿನಗಳವರೆಗೆ 6.30%

211 ದಿನಗಳಿಂದ 1 ವರ್ಷದೊಳಗೆ 6.30%

1 ವರ್ಷದಿಂದ 2 ವರ್ಷದವರೆಗೆ 6.60%

2 ವರ್ಷದಿಂದ 3 ವರ್ಷದೊಳಗೆ 6.60%

3 ವರ್ಷದಿಂದ 5 ವರ್ಷದೊಳಗೆ 6.60%

5 ವರ್ಷದಿಂದ 10 ವರ್ಷದೊಳಗೆ 6.60%

English summary

SBI Cuts Fixed Deposit Interest Rates

SBI announced a cut in fixed deposit or FD rates. The latest FD rates on SBI deposits its effective from 10th january.
Story first published: Thursday, January 16, 2020, 9:35 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X