For Quick Alerts
ALLOW NOTIFICATIONS  
For Daily Alerts

ಸಾಲ ವಸೂಲಿಗಾಗಿ ಅನಿಲ್ ಅಂಬಾನಿ ವಿರುದ್ಧ NCLT ಮೆಟ್ಟಿಲೇರಿದ SBI

|

ಅನಿಲ್ ಅಂಬಾನಿ ನೇತೃತ್ವದ ಕಂಪೆನಿಗಳ ಸಮೂಹಕ್ಕೆ ಅವರ ವೈಯಕ್ತಿಕ ಗ್ಯಾರಂಟಿ ಮೇಲೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಾಲ ನೀಡಿತ್ತು. ಅದನ್ನು ವಸೂಲಿ ಮಾಡಿಕೊಳ್ಳುವ ನಿಟ್ಟಿನಲ್ಲಿ ರಾಷ್ಟ್ರೀಯ ಕಂಪೆನಿ ಕಾನೂನು ನ್ಯಾಯಮಂಡಳಿ (ಎನ್ ಸಿಎಲ್ ಟಿ) ಮೆಟ್ಟಿಲೇರಿದೆ. ಎಸ್ ಬಿಐನಿಂದ ಸೆಕ್ಷನ್ 95 (1) ಅಡಿಯಲ್ಲಿ ಎರಡು ಅರ್ಜಿ ಹಾಕಲಾಗಿದೆ.

6 ವಾರದಲ್ಲಿ 715 ಕೋಟಿ ರು. ಪಾವತಿಸಲು ಅನಿಲ್ ಅಂಬಾನಿಗೆ ಇಂಗ್ಲೆಂಡ್ ಕೋರ್ಟ್ ಆದೇಶ6 ವಾರದಲ್ಲಿ 715 ಕೋಟಿ ರು. ಪಾವತಿಸಲು ಅನಿಲ್ ಅಂಬಾನಿಗೆ ಇಂಗ್ಲೆಂಡ್ ಕೋರ್ಟ್ ಆದೇಶ

ಈ ವ್ಯಾಜ್ಯ ಬಗೆಹರಿಸಲು ವೃತ್ತಿಪರರೊಬ್ಬರನ್ನು ನಿಯೋಜಿಸಬೇಕು ಎಂದು ಕೇಳಿಕೊಳ್ಳಲಾಗಿದೆ. ಈ ಪ್ರಕರಣದ ಪಟ್ಟಿಯು ಎನ್ ಸಿಎಲ್ ಟಿ ನವದೆಹಲಿಯ ಮುಖ್ಯಪೀಠದ ವೆಬ್ ಸೈಟ್ ನಲ್ಲಿದೆ. ತುರ್ತು ಅಹವಾಲಿಗೆ ಕೇಳಿಕೊಂಡು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎರಡು ಪ್ರಕರಣ ದಾಖಲಿಸಿದೆ.

ಮೂರು ಚೈನೀಸ್ ಬ್ಯಾಂಕ್ ಗಳಿಗೆ ಸಾಲ ಪಾವತಿಗೆ ಸೂಚನೆ

ಮೂರು ಚೈನೀಸ್ ಬ್ಯಾಂಕ್ ಗಳಿಗೆ ಸಾಲ ಪಾವತಿಗೆ ಸೂಚನೆ

ಅನಿಲ್ ಅಂಬಾನಿಗೆ ಸೇರಿದ ಆಸ್ತಿಗಳನ್ನು ಅಂತರರಾಷ್ಟ್ರೀಯ ಸಾಲಗಾರರು ವಶಕ್ಕೆ ಪಡೆಯುವ ಮೊದಲು ಅದರಲ್ಲಿ ತನ್ನ ಪಾಲನ್ನು ಪಡೆಯಬೇಕು ಎಂಬ ಗುರಿ ಹೊಂದಿದೆ ಎಂದು ಬ್ಯಾಂಕಿಂಗ್ ಮೂಲಗಳು ತಿಳಿಸಿವೆ. ಕಳೆದ ತಿಂಗಳು ಯು.ಕೆ. ಕೋರ್ಟ್ 717 ಮಿಲಿಯನ್ ಅಮೆರಿಕನ್ ಡಾಲರ್ ಅನ್ನು ಮೂರು ಚೈನೀಸ್ ಬ್ಯಾಂಕ್ ಗಳಿಗೆ ಪಾವತಿಸುವಂತೆ ಸೂಚಿಸಿತ್ತು. ಭಾರತದ ರುಪಾಯಿ ಲೆಕ್ಕದಲ್ಲಿ 5,400 ಕೋಟಿಗೂ ಹೆಚ್ಚು ಮೊತ್ತವಾಗುತ್ತದೆ. ಇದು ಆ ಬ್ಯಾಂಕ್ ಗಳಿಗೆ ವಸೂಲಾಗಬೇಕಾದ ಮೊತ್ತ. ಆದರೆ ಈ ಸಾಲದಲ್ಲಿ ಅನಿಲ್ ಅಂಬಾನಿ ಗ್ಯಾರಂಟಿ ಅಂತ ಇರುವುದು 1200ರಿಂದ 1300 ಕೋಟಿ ರುಪಾಯಿಗೆ ಎಂದು ಹೇಳಲಾಗುತ್ತಿದೆ.

ಅನಿಲ್ ಅಂಬಾನಿ ವೈಯಕ್ತಿಕ ಸಾಲ ಅಲ್ಲ

ಅನಿಲ್ ಅಂಬಾನಿ ವೈಯಕ್ತಿಕ ಸಾಲ ಅಲ್ಲ

ಅನಿಲ್ ವಕ್ತಾರ ಮಾತನಾಡಿ, ಇದು ರಿಲಯನ್ಸ್ ಕಮ್ಯುನಿಕೇಷನ್ಸ್ ಹಾಗೂ ರಿಲಯನ್ಸ್ ಇನ್ ಫ್ರಾಟೆಲ್ ನಿಂದ ಪಡೆದ ಕಾರ್ಪೊರೇಟ್ ಸಾಲ. ಇದು ಅಂಬಾನಿ ಅವರ ವೈಯಕ್ತಿಕ ಸಾಲ ಅಲ್ಲ ಎಂದಿದ್ದಾರೆ. ಇನ್ನು ಈ ಸಂಬಂಧ ವ್ಯಾಜ್ಯ ಪರಿಹಾರಕ್ಕೆ ಮುಂದಿಟ್ಟಿರುವ ಯೋಜನೆಗೆ ಶೇಕಡಾ ನೂರರಷ್ಟು ಸಾಲಗಾರರಿಂದ ಒಪ್ಪಿಗೆ ಸಿಕ್ಕಿದೆ. ಈ ಪರಿಹಾರಕ್ಕೆ ಎನ್ ಸಿಎಲ್ ಟಿ ಮುಂಬೈ ಅನುಮತಿಗೆ ಎದುರು ನೋಡಲಾಗುತ್ತಿದೆ. ಅನಿಲ್ ಅಂಬಾನಿ ಸೂಕ್ತ ಪ್ರತಿಕ್ರಿಯೆ ನೀಡಲಿದ್ದಾರೆ. ಎನ್ ಸಿಎಲ್ ಟಿಯು ಅರ್ಜಿದಾರರಿಗೆ ಯಾವುದೇ ಪರಿಹಾರ ನೀಡಿಲ್ಲ ಎಂದಿದ್ದಾರೆ.

ರಿಲಯನ್ಸ್ ಇನ್ ಫ್ರಾಟೆಲ್ ಗೆ ಮುಕೇಶ್ ಬಿಡ್ಡಿಂಗ್

ರಿಲಯನ್ಸ್ ಇನ್ ಫ್ರಾಟೆಲ್ ಗೆ ಮುಕೇಶ್ ಬಿಡ್ಡಿಂಗ್

ಈ ವರ್ಷದ ಜನವರಿಯಲ್ಲಿ ಆರ್ ಕಾಮ್, ರಿಲಯನ್ಸ್ ಟೆಲಿಕಾಂ ಹಾಗೂ ರಿಲಯನ್ಸ್ ಇನ್ ಫ್ರಾಟೆಲ್ ಗೆ ಸಾಲಗಾರರಿಗೆ ಬಿಡ್ ಬಂದಿತ್ತು. ಈ ಪೈಕಿ ಆರ್ ಕಾಮ್, ರಿಲಯನ್ಸ್ ಟೆಲಿಕಾಂಗೆ ಅತಿ ಹೆಚ್ಚಿನ, ಅಂದರೆ 16,000 ಕೋಟಿ ರುಪಾಯಿಗೂ ಹೆಚ್ಚು ಮೊತ್ತದ ಬಿಡ್ ಮಾಡಿದ್ದು ಯು.ವಿ. ಅಸೆಟ್ ರೀಕನ್ ಸ್ಟಕ್ಷನ್ ಕಂಪೆನಿ. ಅದರಲ್ಲಿ ರಿಯಲ್ ಎಸ್ಟೇಟ್ ಆಸ್ತಿಗಳು, ಎಂಟರ್ ಪ್ರೈಸ್ ಹಾಗೂ ಡೇಟಾ ಸೆಂಟರ್ ಬಿಜಿನೆಸ್ ಎಲ್ಲವೂ ಸೇರಿತ್ತು. ರಿಲಯನ್ಸ್ ಇನ್ ಫ್ರಾಟೆಲ್ ಗೆ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಹೆಚ್ಚಿನ ಬಿಡ್ಡರ್ ಆಗಿತ್ತು. 3609 ಕೋಟಿ ಬಿಡ್ ಮಾಡಿತ್ತು. ಇನ್ ಫ್ರಾಟೆಲ್ ಗೆ 43 ಸಾವಿರ ಟೆಲಿಕಾಂ ಟವರ್ ಗಳು, ಆಪ್ಟಿಕಲ್ ಫೈಬರ್ ಲೈನ್ಸ್ ಹಾಗೂ ಡೇಟಾ ಸೆಂಟರ್ ಗಳಿವೆ.

English summary

SBI Moves To NCLT To Recover Anil Ambani's Personal Guarantee Loan

State Bank Of India moves to NCLT to recover Anil Ambani personal guaranty loan. Which took for Anil led Reliance group.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X