For Quick Alerts
ALLOW NOTIFICATIONS  
For Daily Alerts

ಎಸ್‌ಬಿಐ Q4: ನಿವ್ವಳ ಲಾಭ ರೂ 9,113 ಕೋಟಿಗೆ ಹೆಚ್ಚಳ

|

ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಶುಕ್ರವಾರ ತನ್ನ ಗಳಿಕೆಯನ್ನು ವರದಿ ಮಾಡಿದೆ. ಎಸ್‌ಬಿಐ Q4 ನಿವ್ವಳ ಲಾಭ ರೂ 9,113 ಕೋಟಿಗೆ ಹೆಚ್ಚಳವಾಗಿದೆ.

 

ಹಣಕಾಸು ವರ್ಷ 2022ರ ಮಾರ್ಚ್ ಅಂತ್ಯದ ತ್ರೈಮಾಸಿಕದಲ್ಲಿ ಸ್ವತಂತ್ರ ನಿವ್ವಳ ಲಾಭವು ರೂ. 9113.53 ಕೋಟಿಗೆ ಏರಿದೆ. ಶೇಕಡ 41.2ರಷ್ಟು ಹೆಚ್ಚಳವಾಗಿದೆ. Q4 ಹಣಕಾಸು ವರ್ಷ 2021 ಅವಧಿಯಲ್ಲಿ 6450.75 ಕೋಟಿ ವರದಿಯಾಗಿದೆ.

ಪರಿಶೀಲನೆಯ ತ್ರೈಮಾಸಿಕದಲ್ಲಿ ಬ್ಯಾಂಕ್‌ನಲ್ಲಿನ ನಿವ್ವಳ ಬಡ್ಡಿ ಆದಾಯವು ಶೇಕಡ 15.3ರಷ್ಟು ಏರಿಕೆ ದಾಖಲಿಸಿ ರೂ. 31,198 ಕೋಟಿ ಆಗಿದೆ. ಈ ಹಿಂದೆ ರೂ. 27,067 ಕೋಟಿ ಆಗಿತ್ತು. ಹಿಂದಿನ ತ್ರೈಮಾಸಿಕದಲ್ಲಿ ಶೇಕಡ 4.5ರಿಂದ ಒಟ್ಟು ಎನ್‌ಪಿಎ ಅನುಪಾತವು ಶೇಕಡ 3.97ಕ್ಕೆ ಇಳಿಕೆಯಾಗಿದೆ.

ಎಸ್‌ಬಿಐ Q4: ನಿವ್ವಳ ಲಾಭ ರೂ 9,113 ಕೋಟಿಗೆ ಹೆಚ್ಚಳ

ಬ್ಯಾಂಕ್‌ನಲ್ಲಿ ನಿವ್ವಳ ಎನ್‌ಪಿಎ ಅನುಪಾತವು ಡಿಸೆಂಬರ್ ಅಂತ್ಯದ ತ್ರೈಮಾಸಿಕದಲ್ಲಿ ಶೇಕಡ 1.34ರಿಂದ ಶೇಕಡ 1.02ಕ್ಕೆ ಇಳಿದಿದೆ. ಮಾರ್ಚ್ 31, 2022 ರಂತೆ ಪ್ರಾವಿಷನ್ ಕವರೇಜ್ ಅನುಪಾತ (ಪಿಸಿಆರ್) ಶೇಕಡ 90.20 ರಷ್ಟಿದೆ.

ಎಸ್‌ಬಿಐ ಲಾಭಾಂಶ ಘೋಷಣೆ

"ಬ್ಯಾಂಕ್‌ನ ಕೇಂದ್ರ ಮಂಡಳಿಯು 13 ಮೇ, 2022 ರಂದು ನಡೆದ ತನ್ನ ಸಭೆಯಲ್ಲಿ, 31 ನೇ ಹಣಕಾಸು ವರ್ಷದಲ್ಲಿ ಕೊನೆಗೊಂಡ ಹಣಕಾಸು ವರ್ಷದಲ್ಲಿ ಪ್ರತಿ ಈಕ್ವಿಟಿ ಷೇರಿಗೆ (710%) ರೂ. 7.10 ರಷ್ಟು ಲಾಭಾಂಶವನ್ನು ಘೋಷಿಸಿದೆ.

ಡಿವಿಡೆಂಡ್ ಪಾವತಿಯ ದಿನಾಂಕವನ್ನು ಜೂನ್ 1, 2022 ರಂದು ನಿಗದಿಪಡಿಸಲಾಗಿದೆ ಮತ್ತು ಡಿವಿಡೆಂಡ್ ವಾರಂಟ್‌ಗಳನ್ನು ಪಾವತಿಯ ದಿನಾಂಕದ ಮೊದಲು ಕಳುಹಿಸಲಾಗುತ್ತದೆ. ಇದು ಭಾರತದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎಲ್ಲಾ ಶಾಖೆಗಳಲ್ಲಿ ಮೊತ್ತವನ್ನು ಲೆಕ್ಕಿಸದೆ ಪಾವತಿಸಲಾಗುವುದು. ಫಲಿತಾಂಶಗಳ ಪ್ರಕಟಣೆಯ ನಂತರ, ಷೇರುಗಳು ಶೇಕಡ 0.68ರಷ್ಟು ಕಡಿಮೆಯಾಗಿ ರೂಪಾಯಿ 459.65 ಆಗಿದೆ.

English summary

SBI Q4 results: Net profit Increase To Rs 9,113 cr., 710% Dividend Declared

SBI Q4 results: Net profit Increase To Rs 9,113 cr., 710% Dividend Declare.
Story first published: Friday, May 13, 2022, 16:12 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X