For Quick Alerts
ALLOW NOTIFICATIONS  
For Daily Alerts

SBIನಿಂದ ಗೃಹ ಸಾಲದ ಮೇಲಿನ ಬಡ್ಡಿ ದರ ಇನ್ನಷ್ಟು ಕಡಿಮೆ

|

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಗುರುವಾರದಂದು ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ಸ್ ಬೇಸ್ಡ್ ಲೆಂಡಿಗ್ ರೇಟ್ (MCLR) ಅನ್ನು 15 ಬೇಸಿಸ್ ಪಾಯಿಂಟ್ (bps) ಕಡಿಮೆ ಮಾಡಿದೆ. ಇದು ಎಲ್ಲ ಅವಧಿಯ ಸಾಲಕ್ಕೂ ಅನ್ವಯ ಆಗುತ್ತದೆ. ಹೀಗೆ ಎಂಸಿಎಲ್ ಆರ್ ಇಳಿಕೆ ಮಾಡಿರುವುದರಿಂದ ಸಾಲ ನೀಡುವ ದರವು ಈ ವರೆಗೆ ವಾರ್ಷಿಕ 7.40 ಪರ್ಸೆಂಟ್ ಇದ್ದದ್ದು 7.25 ಪರ್ಸೆಂಟ್ ಗೆ ಇಳಿಕೆಯಾಗುತ್ತದೆ.

 

ಮೇ 10, 2020ರಿಂದ ಇದು ಜಾರಿಗೆ ಬರುತ್ತದೆ. ಹೀಗೆ ಎಂಸಿಎಲ್ ಆರ್ ಅನ್ನು ಸತತವಾಗಿ ಹನ್ನೆರಡನೇ ಸಲ ಇಳಿಸಲಾಗುತ್ತಿದೆ ಎಂದು ಬ್ಯಾಂಕ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಯಾರು ಎಂಸಿಎಲ್ ಆರ್ ಗೆ ಜೋಡಣೆಯಾಗುವಂತೆ ಸಾಲ ಪಡೆದಿರುತ್ತಾರೋ ಅಂಥ ಗ್ರಾಹಕರಿಗೆ ಪ್ರತಿ ಸಲ ಇಳಿಕೆ ಮಾಡಿದಾಗಲೂ ಇದರಿಂದ ಅನುಕೂಲ ಆಗುತ್ತದೆ.

ಠೇವಣಿ ಮೇಲಿನ ಬಡ್ಡಿ ದರದಲ್ಲೂ ಇಳಿಕೆ

ಠೇವಣಿ ಮೇಲಿನ ಬಡ್ಡಿ ದರದಲ್ಲೂ ಇಳಿಕೆ

ಸಾಲದ ಮೇಲಿನ ಬಡ್ಡಿ ದರ ಮಾತ್ರ ಅಲ್ಲ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಮೂರು ವರ್ಷದೊಳಗಿನ ಅವಧಿಯ ಠೇವಣಿ ಮೇಲಿನ ಬಡ್ಡಿ ದರವನ್ನೂ 20 bps ಇಳಿಕೆ ಮಾಡಿದೆ. ಇದು ಮೇ 12ನೇ ತಾರೀಕಿನಿಂದ ಜಾರಿಗೆ ಬರಲಿದೆ. ಬ್ಯಾಂಕ್ ಹಾಗೂ ಜನರ ಬಳಿ ನಗದು ಹರಿದಾಡಲಿ ಎಂಬ ಕಾರಣಕ್ಕೆ ಈ ನಿರ್ಧಾರ ಮಾಡಲಾಗಿದೆ.

ಹಿರಿಯ ನಾಗರಿಕರಿಗಾಗಿ ವಿಶೇಷ ಠೇವಣಿ ಯೋಜನೆ

ಹಿರಿಯ ನಾಗರಿಕರಿಗಾಗಿ ವಿಶೇಷ ಠೇವಣಿ ಯೋಜನೆ

ಇನ್ನು ಹಿರಿಯ ನಾಗರಿಕರಿಗಾಗಿ ಎಸ್ ಬಿಐ ವಿಶೇಷ ಠೇವಣಿ ಯೋಜನೆ ಪರಿಚಯಿಸಿದ್ದು, ಹೆಚ್ಚಿನ ಬಡ್ಡಿದರ ನೀಡುತ್ತಿದೆ. ಈ ಯೋಜನೆಗೆ "SBI Wecare Deposit" ಎಂದು ಹೆಸರು ನೀಡಲಾಗಿದೆ. ಸದ್ಯಕ್ಕೆ ಕುಸಿಯುತ್ತಿರುವ ಬಡ್ಡಿ ದರದ ಸಮಯದಲ್ಲಿ ಬ್ಯಾಂಕ್ ನ ಈ ಯೋಜನೆಯಿಂದ ಹಿರಿಯ ನಾಗರಿಕರ ಹಿತಾಸಕ್ತಿಯನ್ನು ಕಾಪಾಡಲು ಸಾಧ್ಯವಾಗುತ್ತದೆ ಎಂದು ಹೇಳಲಾಗಿದೆ.

ಸೆಪ್ಟೆಂಬರ್ 30, 2020ರ ತನಕ ಠೇವಣಿ ಸ್ಕೀಮ್
 

ಸೆಪ್ಟೆಂಬರ್ 30, 2020ರ ತನಕ ಠೇವಣಿ ಸ್ಕೀಮ್

ಈ ಹೊಸ ಠೇವಣಿ ಯೋಜನೆಯಲ್ಲಿ ಹಿರಿಯ ನಾಗರಿಕರಿಗೆ 30 bps ಹೆಚ್ಚುವರಿ ಪ್ರೀಮಿಯಂ ಪಾವತಿಸಲಾಗುತ್ತದೆ. 5 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಅವಧಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಯಾರು ಹಣವನ್ನು ಠೇವಣಿ ಮಾಡುತ್ತಾರೋ ಅಂಥವರಿಗೆ ಈ ಯೋಜನೆಯ ಲಾಭ ದೊರೆಯುತ್ತದೆ. ಇದು ಸೆಪ್ಟೆಂಬರ್ 30, 2020ರ ತನಕ ಜಾರಿಯಲ್ಲಿ ಇರುತ್ತದೆ.

English summary

SBI Slashes MCLR By 15 BPS; Home Loan Become Cheaper

India's leading bank SBI slashes MCLR by 15 bps. By this home loan become further cheaper. Also introduced new deposit scheme for senior citizens.
Story first published: Thursday, May 7, 2020, 20:48 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X