ತಕ್ಷಣವೇ 62,600 ಕೋಟಿ ರುಪಾಯಿ ಪಾವತಿ ಮಾಡುವಂತೆ ಉದ್ಯಮಿ ಸುಬ್ರತಾ ರಾಯ್ ಅವರಿಗೆ ನಿರ್ದೇಶನ ನೀಡಬೇಕು ಅಥವಾ ಆ ಮೊತ್ತ ಪಾವತಿಸದಿದ್ದಲ್ಲಿ ಪರೋಲ್ ರದ್ದು ಮಾಡಬೇಕು ಎಂದು ಸೆಕ್ಯೂರಿಟೀಸ್ ಅಂಡ್ ಎಕ್ಸ್ ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಹಾಕಿಕೊಂಡಿದೆ.
ಸಹಾರಾ ಇಂಡಿಯಾ ಪರಿವಾರ್ ಸಮೂಹದ ಎರಡು ಕಂಪೆನಿಗಳು ಹಾಗೂ ಸಮೂಹದ ಮುಖ್ಯಸ್ಥ ಸುಬ್ರತಾ ರಾಯ್ ಬಡ್ಡಿ ಸಹಿತವಾಗಿ 62,600 ಕೋಟಿ ರುಪಾಯಿ ಸಾಲ ಉಳಿಸಿಕೊಂಡಿದ್ದಾರೆ ಎಂದು ಕೋರ್ಟ್ ಗೆ ಹಾಕಿರುವ ಅರ್ಜಿಯಲ್ಲಿ ತಿಳಿಸಲಾಗಿದೆ ಎಂದು ಬ್ಲೂಮ್ ಬರ್ಗ್ ವರದಿ ಮಾಡಿದೆ.
ಎಂಟು ವರ್ಷದ ಹಿಂದೆ ಹಣ ಕಟ್ಟಲು ಹೇಳಿದಾಗ ಆ ಮೊತ್ತ 25,700 ಕೋಟಿ ರುಪಾಯಿ ಇತ್ತು. ಅಲ್ಲಿಂದ ಬೆಳೆಯುತ್ತಾ ಬಂದಿದೆ. 2012ರಲ್ಲಿ ಭಾರತದ ಸುಪ್ರೀಂ ಕೋರ್ಟ್ ಆದೇಶ ನೀಡಿದ ಪ್ರಕಾರ, ಸಹಾರಾ ಸಮೂಹದ ಕಂಪೆನಿಗಳು ಸೆಕ್ಯೂರಿಟೀಸ್ ಕಾನೂನು ಉಲ್ಲಂಘಿಸಿದ್ದು, ಕಾನೂನು ಬಾಹಿರವಾಗಿ 350 ಕೋಟಿ ಅಮೆರಿಕನ್ ಡಾಲರ್ ಸಂಗ್ರಹಿಸಿವೆ.

ಬ್ಯಾಂಕಿಂಗ್ ವ್ಯವಸ್ಥೆಯಿಂದ ಪಡೆಯಲು ಸಾಧ್ಯವಾಗದ ಭಾರತದ ಹತ್ತಾರು ಲಕ್ಷ ಮಂದಿಯಿಂದ ನಗದು ರೂಪದಲ್ಲಿ ಹಣ ಸಂಗ್ರಹಿಸಿದೆ. ಸೆಬಿಯಿಂದ ಹೂಡಿಕೆದಾರರನ್ನು ಪತ್ತೆ ಹಚ್ಚುವುದಕ್ಕೆ ಆಗಿಲ್ಲ ಮತ್ತು ಸಹಾರಾದಿಂದ ಹಣ ಪಾವತಿಸಲು ಆಗದಿದ್ದಾಗ ಕೋರ್ಟ್ ನಿಂದ ರಾಯ್ ನನ್ನು ಜೈಲಿಗೆ ಕಳುಹಿಸಲಾಯಿತು.
ಸೆಬಿಯಿಂದ ತಪ್ಪಾದ ಬೇಡಿಕೆ ಬಂದಿದೆ ಎಂದು ಗುರುವಾರ ಸಹಾರಾ ಸಮೂಗ ಇಮೇಲ್ ನಲ್ಲಿ ಪ್ರತಿಕ್ರಿಯಿಸಿದೆ. ಸೆಬಿಯಿಂದ ಹದಿನೈದು ಪರ್ಸೆಂಟ್ ಬಡ್ಡಿ ಸೇರಿಸುವುದು 'ಅನುಚಿತವಾದದ್ದು' ಎನ್ನಲಾಗಿದೆ. ಹಾಗೊಂದು ವೇಳೆ ಆದಲ್ಲಿ ಎರಡು ಬಾರಿ ಕಟ್ಟಿದಂತಾಗುತ್ತದೆ. ಈಗಾಗಲೇ ಹೂಡಿಕೆದಾರರಿಗೆ ಹಣ ಹಿಂತಿರುಗಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಸಹಾರಾ ಅಂದರೆ ಒಂದು ಸಮಯದಲ್ಲಿ ಭಾರತದಲ್ಲಿ ಎಲ್ಲೆಲ್ಲೂ ಕಾಣಲು ಸಿಗುತ್ತಿದ್ದ ಉದ್ಯಮ ಸಂಸ್ಥೆ. ಏರ್ ಲೈನ್ಸ್, ಫಾರ್ಮುಲಾ ಒನ್ ತಂಡ, ಭಾರತ ಕ್ರಿಕೆಟ್ ತಂಡದ ಪ್ರಾಯೋಜಕತ್ವ, ಲಂಡನ್- ನ್ಯೂಯಾರ್ಕ್ ನಲ್ಲಿ ಹೋಟೆಲ್ ಗಳು ಹೀಗೆ ಎಲ್ಲೆಲ್ಲೂ ವ್ಯಾಪಿಸಿತ್ತು. ಆ ನಂತರ ಎರಡು ವರ್ಷಗಳ ಕಾಲ ಜೈಲಿನಲ್ಲಿದ್ದ ರಾಯ್, ಪೆರೋಲ್ ಮೇಲೆ ಹೊರಗೆ ಬಂದಿದ್ದಾರೆ.
ಈ ತನಕ ಹದಿನೈದು ಸಾವಿರ ಕೋಟಿ ರುಪಾಯಿಯನ್ನು ರಾಯ್ ಠೇವಣಿ ಮಾಡಿದ್ದಾರೆ ಎಂದು ಸೆಬಿ ತಿಳಿಸಿದೆ. ಮುಂದಿನ ವಿಚಾರಣೆ ಯಾವಾಗ ಎಂಬುದನ್ನು ಕೋರ್ಟ್ ತಿಳಿಸಿಲ್ಲ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?



Click it and Unblock the Notifications