ಸೆಕ್ಯೂರಿಟೀಸ್ ಅಂಡ್ ಎಕ್ಸ್ ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI)ಯಿಂದ ಶುಕ್ರವಾರದಂದು ರಿಲಯನ್ಸ್ ಇಂಡಸ್ಟ್ರೀಸ್, ಅದರ ಮುಖ್ಯಸ್ಥ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಮುಕೇಶ್ ಅಂಬಾನಿ ಹಾಗೂ ಇತರ ಎರಡು ಸಂಸ್ಥೆಗಳಿಗೆ ದಂಡ ವಿಧಿಸಲಾಗಿದೆ. 2007ರ ನವೆಂಬರ್ ನಲ್ಲಿ ಆಗಿನ ರಿಲಯನ್ಸ್ ಪೆಟ್ರೋಲಿಯಂ (RPL) ಷೇರುಗಳಲ್ಲಿ ದುರುದ್ದೇಶಪೂರ್ವಕ ವ್ಯವಹಾರ ನಡೆಸಿದ ಆರೋಪದಲ್ಲಿ ಈ ದಂಡ ಹಾಕಲಾಗಿದೆ.
ರಿಲಯನ್ಸ್ ಗೆ 25 ಕೋಟಿ ರುಪಾಯಿ ಮತ್ತು ಮುಕೇಶ್ ಅಂಬಾನಿಗೆ 15 ಕೋಟಿ ರುಪಾಯಿ ದಂಡ ವಿಧಿಸಲಾಗಿದೆ. ಇದರ ಹೊರತಾಗಿ ನವೀ ಮುಂಬೈ SEZನಿಂದ 20 ಕೋಟಿ ರುಪಾಯಿ ಮತ್ತು ಮುಂಬೈ SEZನಿಂದ 10 ಕೋಟಿ ರುಪಾಯಿ ಪಾವತಿಸುವಂತೆ ನಿರ್ದೇಶಿಸಲಾಗಿದೆ.
ಆರ್ ಪಿಎಲ್ ಷೇರುಗಳನ್ನು ಕ್ಯಾಶ್ ಮತ್ತು ಫ್ಯೂಚರ್ ಸೆಗ್ಮೆಂಟ್ ನಲ್ಲಿ ನವೆಂಬರ್ 2007ರಲ್ಲಿ ಖರೀದಿ ಮತ್ತು ಮಾರಾಟಕ್ಕೆ ಸಂಬಂಧಿಸಿದಂಥ ಪ್ರಕರಣ ಇದು. ಮಾರ್ಚ್ 2007ರಲ್ಲಿ ರಿಲಯನ್ಸ್ ನಿಂದ ಆರ್ ಪಿಎಲ್ ನ 4.1% ಷೇರಿನ ಪಾಲು ಮಾರಾಟ ಮಾಡಲು ಮುಂದಾಗಿತ್ತು. ಆರ್ ಪಿಎಲ್ ಎಂಬುದು ಲಿಸ್ಟೆಡ್ ಅಂಗಸಂಸ್ಥೆಯಾಗಿತ್ತು. 2009ರಲ್ಲಿ ರಿಲಯನ್ಸ್ ನಲ್ಲಿ ವಿಲೀನ ಆಗಿತ್ತು.

ಮಾರ್ಚ್ 24, 2017ರಂದು ಸೆಬಿ ಆದೇಶ ನೀಡಿ, ಆರ್ ಪಿಎಲ್ ಪ್ರಕರಣದಲ್ಲಿ ರಿಲಯನ್ಸ್ ಮತ್ತು ಇತರ ಕೆಲವು ಸಂಸ್ಥೆಗಳು 447 ಕೋಟಿ ರುಪಾಯಿಗೂ ಹೆಚ್ಚು ಮೊತ್ತವನ್ನು ನೀಡುವಂತೆ ತಿಳಿಸಿತ್ತು. ಈ ಆದೇಶದ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿಯನ್ನು 2020ರ ನವೆಂಬರ್ ನಲ್ಲಿ ಸೆಕ್ಯೂರಿಟೀಸ್ ಅಪಿಲೇಟ್ ಟ್ರಿಬ್ಯುನಲ್ (SAT) ವಜಾ ಮಾಡಿತ್ತು.
ಆ ಸಮಯದಲ್ಲಿ, ಟ್ರಿಬ್ಯುನಲ್ ಆದೇಶವನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನೆ ಮಾಡುವುದಾಗಿ ರಿಲಯನ್ಸ್ ಹೇಳಿತ್ತು.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications