ಸೆನ್ಸೆಕ್ಸ್, ನಿಫ್ಟಿ ಹೊಸ ಎತ್ತರಕ್ಕೆ; ಮಹೀಂದ್ರಾ ಅಂಡ್ ಮಹೀಂದ್ರಾ ಟಾಪ್ ಗೇಯ್ನರ್
ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಹಾಗೂ ನಿಫ್ಟಿ ಬುಧವಾರ (ನವೆಂಬರ್ 18, 2020) ಹೊಸ ದಾಖಲೆ ಬರೆದು, ವ್ಯವಹಾರ ಚುಕ್ತಾ ಮಾಡಿದೆ. ಸೆನ್ಸೆಕ್ಸ್ ಸೂಚ್ಯಂಕವು 227.34 ಪಾಯಿಂಟ್ ಗಳ ಹೆಚ್ಚಳ ದಾಖಲಿಸಿ, 44,180.05 ಪಾಯಿಂಟ್ ನೊಂದಿಗೆ ವಹಿವಾಟು ಮುಗಿಸಿದರೆ, ನಿಫ್ಟಿ ಸೂಚ್ಯಂಕವು 64.05 ಪಾಯಿಂಟ್ ಏರಿಕೆ ಕಂಡು, 12,938.25 ಪಾಯಿಂಟ್ ನೊಂದಿಗೆ ವ್ಯವಹಾರ ಪೂರ್ಣಗೊಳಿಸಿದೆ.
ಚಿನ್ನದ ಮೈನಿಂಗ್ ಸ್ಟಾಕ್ ಮೇಲೆ ಹೂಡಿಕೆ ಭಾರತದಿಂದಲೂ ಮಾಡಬಹುದಾ?
ಸೆನ್ಸೆಕ್ಸ್ ನಲ್ಲಿ ಮಹೀಂದ್ರಾ ಅಂಡ್ ಮಹೀಂದ್ರಾ, ಲಾರ್ಸನ್, ಇಂಡಸ್ ಇಂಡ್ ಬ್ಯಾಂಕ್, ಬಜಾಜ್ ಫೈನಾನ್ಸ್ ಸರ್ವೀಸ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಏರಿಕೆ ದಾಖಲಿಸಿವೆ. ಇನ್ನು ಹಿಂದೂಸ್ತಾನ್ ಯುನಿಲಿವರ್, ಐಟಿಸಿ, ಟೈಟಾನ್ ಕಂಪೆನಿ, ಟಿಸಿಎಸ್ ಮತ್ತು ಟಾಟಾ ಸ್ಟೀಲ್ ಇಳಿಕೆ ಕಂಡಿವೆ.
ನಿಫ್ಟಿ ಪಿಎಸ್ ಯು ಬ್ಯಾಂಕ್ಕ್ ಮತ್ತು ನಿಫ್ಟಿ ಬ್ಯಾಂಕ್ ಸೂಚ್ಯಂಕಗಳು 3.6 ಪರ್ಸೆಂಟ್ ಹಾಗೂ 2 ಪರ್ಸೆಂಟ್ ಏರಿಕೆ ಕಂಡವು. ಬುಧವಾರದ ವಹಿವಾಟಿನಲ್ಲಿ 11% ಏರಿಕೆ ಕಂಡ ಮಹೀಂದ್ರಾ ಅಂಡ್ ಮಹೀಂದ್ರಾ ಷೇರು ಹೊಸ ಎತ್ತರಕ್ಕೆ ಏರಿತು. ವಂಡರ್ ಲಾ ಹಾಲಿಡೇಸ್ ನಿಂದ ಬೆಂಗಳೂರಿನಲ್ಲಿನ ಅಮ್ಯೂಸ್ ಮೆಂಟ್ ಪಾರ್ಕ್ ಅನ್ನು ನವೆಂಬರ್ 20ರಿಂದ ಶುರು ಮಾಡಲಾಗುತ್ತದೆ ಎಂಬ ಸುದ್ದಿ ಹಿನ್ನೆಲೆಯಲ್ಲಿ ಆ ಷೇರು 8 ಪರ್ಸೆಂಟ್ ಗೂ ಹೆಚ್ಚು ಏರಿಕೆ ದಾಖಲಿಸಿತು.