For Quick Alerts
ALLOW NOTIFICATIONS  
For Daily Alerts

Closing Bell: ನಷ್ಟಕ್ಕೆ ಬ್ರೇಕ್, ಏರಿಕೆಯಾಗಿ ವಹಿವಾಟು ಅಂತ್ಯ

|

ಸತತ ಆರು ವಹಿವಾಟು ದಿನಗಳಲ್ಲಿ ನಷ್ಟದೊಂದಿಗೆ ವಹಿವಾಟು ಅಂತ್ಯ ಕಂಡಿದ್ದ ಷೇರು ಪೇಟೆ ಇಂದು ಚೇತರಿಕೆ ಕಂಡಿದೆ. ಸೋಮವಾರ ಭಾರತೀಯ ಷೇರುಪೇಟೆ ಶುಭಾಂತ್ಯ ಕಂಡಿದೆ. 2020ರ ಬಳಿಕ ದೇಶೀಯ ಷೇರುಗಳು ಭಾರೀ ನಷ್ಟ ಕಂಡಿದ್ದವು. ಆದರೆ ಇಂದು ಚೇತರಿಕೆ ಕಂಡಿದೆ.

30-ಷೇರು ಬಿಎಸ್‌ಇ ಸೆನ್ಸೆಕ್ಸ್ 180 ಪಾಯಿಂಟ್‌ಗಳು ಅಥವಾ 0.34 ಶೇಕಡಾ ಏರಿಕೆಯಾಗಿ 52,974 ಕ್ಕೆ ತಲುಪಿದೆ. ಈ ಸಂದರ್ಭದಲ್ಲೇ ಎನ್‌ಎಸ್‌ಇ ನಿಫ್ಟಿ 60 ಪಾಯಿಂಟ್ ಅಥವಾ 0.38 ರಷ್ಟು ಏರಿಕೆ ಕಂಡು 15,842 ಕ್ಕೆ ವಹಿವಾಟು ಅಂತ್ಯ ಮಾಡಿದೆ.

ಹೋಲ್ಸಿಮ್ ಡೀಲ್ ಬಳಿಕ ಎಸಿಸಿ, ಅಂಬುಜಾ ಸಿಮೆಂಟ್ಸ್ ಷೇರಿಗೆ ಭಾರೀ ಡಿಮ್ಯಾಂಡ್!ಹೋಲ್ಸಿಮ್ ಡೀಲ್ ಬಳಿಕ ಎಸಿಸಿ, ಅಂಬುಜಾ ಸಿಮೆಂಟ್ಸ್ ಷೇರಿಗೆ ಭಾರೀ ಡಿಮ್ಯಾಂಡ್!

ನಿಫ್ಟಿ ಮಿಡ್‌ಕ್ಯಾಪ್ 100 ಶೇಕಡಾ 1.25 ಮತ್ತು ಸ್ಮಾಲ್ ಕ್ಯಾಪ್ ಶೇಕಡಾ 1.12 ರಷ್ಟು ಜಿಗಿದಿದ್ದರಿಂದ ಮಿಡ್ ಮತ್ತು ಸ್ಮಾಲ್ ಕ್ಯಾಪ್ ಷೇರುಗಳು ಏರಿಕೆ ಕಂಡಿದೆ. ಹಲವಾರು ಷೇರುಗಳು ಕೆಂಪಿನಿಂದ ಹಸಿರು ಬಣ್ಣಕ್ಕೆ ತಿರುಗಿದೆ.

Closing Bell: ನಷ್ಟಕ್ಕೆ ಬ್ರೇಕ್, ಏರಿಕೆಯಾಗಿ ವಹಿವಾಟು ಅಂತ್ಯ

ಯಾವ ಷೇರಿಗೆ ನಷ್ಟ, ಯಾರಿಗೆ ಲಾಭ?

ನಿಫ್ಟಿ ಪಿಎಸ್‌ಯು ಬ್ಯಾಂಕ್, ನಿಫ್ಟಿ ಆಟೋ ಮತ್ತು ನಿಫ್ಟಿ ಫೈನಾನ್ಶಿಯಲ್ ಸರ್ವಿಸಸ್ ಕ್ರಮವಾಗಿ ಶೇಕಡಾ 2.91, 2.27 ಮತ್ತು ಶೇಕಡಾ 1.32 ರಷ್ಟು ಏರಿಕೆಯನ್ನು ಕಂಡಿದೆ. ಇನ್ನು ಐಷರ್ ಮೋಟಾರ್ಸ್ ಟಾಪ್ ಗೇನರ್ ಆಗಿದೆ. ಐಷರ್ ಮೋಟಾರ್ಸ್ ಷೇರುಗಳು ಶೇಕಡಾ 7.95 ರಷ್ಟು ಏರಿಕೆಯಾಗಿ 2,626 ರೂಪಾಯಿಗೆ ತಲುಪಿದೆ. ಇನ್ನು ಅಪೊಲೊ ಆಸ್ಪತ್ರೆಗಳು, ಯುಪಿಎಲ್, ಎನ್‌ಟಿಪಿಸಿ ಮತ್ತು ಎಸ್‌ಬಿಐ ಸಹ ಲಾಭ ಗಳಿಸಿದೆ.

Opening Bell: ಷೇರು ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್, ನಿಫ್ಟಿ ಶುಭಾರಂಭOpening Bell: ಷೇರು ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್, ನಿಫ್ಟಿ ಶುಭಾರಂಭ

2,236 ಷೇರುಗಳು ಮುನ್ನಡೆ ಸಾಧಿಸಿದ್ದು, ಒಟ್ಟಾರೆ ಮಾರುಕಟ್ಟೆ ಏರಿಕೆ ಕಂಡಿದೆ. ಈ ನಡುವೆ ಬಿಎಸ್‌ಇಯಲ್ಲಿ 1,159 ಷೇರುಗಳು ಕುಸಿತ ಕಂಡಿದೆ. 30-ಷೇರುಗಳ ಬಿಎಸ್‌ಇ ಸೂಚ್ಯಂಕದಲ್ಲಿ, ಎನ್‌ಟಿಪಿಸಿ, ಬಜಾಜ್ ಫೈನಾನ್ಸ್, ಮಾರುತಿ, ಎಸ್‌ಬಿಐ, ಎಚ್‌ಡಿಎಫ್‌ಸಿ, ಕೋಟಕ್ ಮಹೀಂದ್ರಾ ಬ್ಯಾಂಕ್, ಎಂ & ಎಂ, ಇಂಡಸ್‌ಇಂಡ್ ಬ್ಯಾಂಕ್ ಮತ್ತು ಎಲ್ & ಟಿ ಷೇರುಗಳು ಏರಿಕೆ ಕಂಡಿದೆ.

ಇನ್ನು ಹೋಲ್ಸಿಂಗ್‌ನ ಪಾಲನ್ನು ಖರೀದಿ ಮಾಡುವ ಬಗ್ಗೆ ಅದಾನಿ ಗ್ರೂಪ್ ಘೋಷಣೆ ಮಾಡಿದ ಬೆನ್ನಲ್ಲೇ ಅಂಬುಜಾ ಸಿಮೆಂಟ್ಸ್ ಮತ್ತು ಎಸಿಸಿ ಷೇರುಗಳಿಗೆ ಭಾರೀ ಡಿಮ್ಯಾಂಡ್ ಕಂಡು ಬಂದಿದೆ. ಈ ನಡುವೆ ಅಲ್ಟ್ರಾಟೆಕ್ ಸಿಮೆಂಟ್, ಏಷ್ಯನ್ ಪೇಂಟ್ಸ್, ಐಟಿಸಿ, ಟಿಸಿಎಸ್, ಡಾ ರೆಡ್ಡೀಸ್, ಎಚ್‌ಸಿಎಲ್ ಟೆಕ್, ನೆಸ್ಲೆ ಇಂಡಿಯಾ, ಇನ್ಫೋಸಿಸ್ ಮತ್ತು ಟೆಕ್ ಮಹೀಂದ್ರಾ ಭಾರೀ ನಷ್ಟವನ್ನು ಕಂಡಿದೆ.

English summary

Sensex breaks 6-day losing run, Nifty tops 15,800

Indian equity benchmarks on Monday managed to finish in the green, pausing a sharp six-day plunge, amid volatile trade. The domestic indices had marked their longest weekly losing streak since 2020 on Friday.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X