For Quick Alerts
ALLOW NOTIFICATIONS  
For Daily Alerts

'ಕರಡಿ ಹಿಡಿತ'ದಲ್ಲಿ ಷೇರು ಮಾರುಕಟ್ಟೆ: 1448 ಪಾಯಿಂಟ್ ಕುಸಿದ ಸೆನ್ಸೆಕ್ಸ್

|

ಜಾಗತಿಕ ಮಾರುಕಟ್ಟೆಯ ಪ್ರಭಾವ ಶುಕ್ರವಾರದಂದು ಭಾರತೀಯ ಷೇರು ಮಾರುಕಟ್ಟೆ ಮೇಲೂ ಆಯಿತು. ಅದರ ಪರಿಣಾಮವಾಗಿ ಸತತ ಆರನೇ ದಿನ ಕೂಡ ಇಳಿಕೆ ದಾಖಲಿಸಿತು. ಬರೀ ಇಳಿಕೆಯಲ್ಲ, ಭಾರೀ ಕುಸಿತವನ್ನೇ ದಾಖಲಿಸಿತು. ಬಿಎಸ್ ಇ ಸೆನ್ಸೆಕ್ಸ್ 1448.37 ಪಾಯಿಂಟ್ ಇಳಿದು, 38,297.29 ಪಾಯಿಂಟ್ ಗಳಿಗೆ ದಿನದ ಹಾಗೂ ಫೆಬ್ರವರಿ ತಿಂಗಳ ವಹಿವಾಟು ಚುಕ್ತಾ ಮಾಡಿತು.

 

ಷೇರು ಮಾರ್ಕೆಟ್ ನಲ್ಲಿ ರಕ್ತದೋಕುಳಿ; ಕ್ಷಣದಲ್ಲಿ ಕರಗಿತು 3.5 ಲಕ್ಷ ಕೋಟಿಷೇರು ಮಾರ್ಕೆಟ್ ನಲ್ಲಿ ರಕ್ತದೋಕುಳಿ; ಕ್ಷಣದಲ್ಲಿ ಕರಗಿತು 3.5 ಲಕ್ಷ ಕೋಟಿ

ಇನ್ನು ನಿಫ್ಟಿ 50 ಸೂಚ್ಯಂಕವು 431.55 ಅಂಶಗಳಷ್ಟು ಕುಸಿದು, 11,201.75 ಪಾಯಿಂಟ್ ನೊಂದಿಗೆ ವಹಿವಾಟು ಕೊನೆಗೊಳಿಸಿತು. 2015ರ ಆಗಸ್ಟ್ ನಂತರ ಒಂದು ದಿನದಲ್ಲಿ ಕಂಡ ಅತಿ ದೊಡ್ಡ ಕುಸಿತ ಇದಾಗಿದೆ. 2008ರ ಆರ್ಥಿಕ ಕುಸಿತದ ನಂತರ ಜಾಗತಿಕ ಷೇರು ಮಾರುಕಟ್ಟೆಯು ಕಂಡ ತುಂಬ ನಷ್ಟದ ವಾರ ಇದಾಗಿದೆ.

 
'ಕರಡಿ ಹಿಡಿತ'ದಲ್ಲಿ ಷೇರು ಮಾರುಕಟ್ಟೆ: 1448 ಅಂಶ ಕುಸಿದ ಸೆನ್ಸೆಕ್ಸ್

ಕೊರೊನಾ ವೈರಾಣು ವಿಶ್ವದಾದ್ಯಂತ ಹಬ್ಬುತ್ತಿರುವುದು ಆತಂಕ ಸೃಷ್ಟಿಸಿದೆ. ಪ್ರಮುಖ ಸೂಚ್ಯಂಕಗಳು ನಷ್ಟ ದಾಖಲಿಸಿದ್ದು, ಗರಿಷ್ಠ ಮಟ್ಟದಿಂದ 10 ಪರ್ಸೆಂಟ್ ಇಳಿದಿದೆ. ಜಪಾನ್, ಚೀನಾ, ಹಾಂಕಾಂಗ್, ದಕ್ಷಿಣ ಕೊರಿಯಾ ಮಾತ್ರ ಅಲ್ಲದೆ, ಆಸ್ಟ್ರೇಲಿಯಾ, ಯುರೋಪ್ ಮತ್ತು ಯು.ಎಸ್. ಷೇರು ಮಾರ್ಕೆಟ್ ಕೂಡ ಕುಸಿದಿವೆ.

English summary

Sensex Down by 1448 Points, Nifty By 431 Points

Due to global factors and Corona fear on Friday Sensex down by 1448 points and Nifty down by 431 points. Here is the complete details.
Story first published: Friday, February 28, 2020, 16:35 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X