For Quick Alerts
ALLOW NOTIFICATIONS  
For Daily Alerts

ಜಾಗತಿಕ ಪ್ರಭಾವದಿಂದ ಸೆನ್ಸೆಕ್ಸ್ ಸೂಚ್ಯಂಕ 590 ಪಾಯಿಂಟ್ ಇಳಿಕೆ

|

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕ ಸೆನ್ಸೆಕ್ಸ್ ಗುರುವಾರ (ಸೆಪ್ಟೆಂಬರ್ 24, 2020) ಬೆಳಗ್ಗೆ ಆರಂಭದ ಸೆಷನ್ ನಲ್ಲಿ ಭಾರೀ ಇಳಿಕೆ ಕಂಡಿತು. ಜಾಗತಿಕ ಪ್ರಭಾವವು ದುರ್ಬಲವಾಗಿಯೇ ಮುಂದುವರಿದಿದೆ. ಒಂದು ವೇಳೆ ಇಂದು ಕೂಡ ಮಾರ್ಕೆಟ್ ಇಳಿಕೆಯೊಂದಿಗೆ ವಹಿವಾಟು ಚುಕ್ತಾ ಮಾಡಿದಲ್ಲಿ ಸತತ ಆರನೇ ದಿನ ಇಳಿಕೆ ಕಂಡಂತೆ ಆಗುತ್ತದೆ.

ಯುಎಸ್ ಮಾರ್ಕೆಟ್ ವಾಲ್ ಸ್ಟ್ರೀಟ್ ದುರ್ಬಲತೆ ಹಾಗೂ ಕೊರಿಯನ್ ಭಾಗದಲ್ಲಿನ ಉದ್ವಿಗ್ನತೆ ಕಾರಣಕ್ಕೆ ಭಾರತದ ಷೇರುಪೇಟೆ ಇಳಿಜಾರಿನ ಹಾದಿಯಲ್ಲಿ ಸಾಗಿದೆ. ಸೆನ್ಸೆಕ್ಸ್ ಗುರುವಾರದ ಬೆಳಗ್ಗೆ ವಹಿವಾಟಿನಲ್ಲಿ 590 ಪಾಯಿಂಟ್ ಕೆಳಗೆ ಇಳಿದರೆ, ನಿಫ್ಟಿ ಸೂಚ್ಯಂಕ 171 ಪಾಯಿಂಟ್ ಕುಸಿದು, 11 ಸಾವಿರ ಪಾಯಿಂಟ್ ಗೂ ಕೆಳಗೆ ವಹಿವಾಟು ನಡೆಸಿತು.

ಬ್ಯಾಂಕಿಂಗ್ ವಲಯದಲ್ಲಿ ಐಸಿಐಸಿಐ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಚ್ ಡಿಎಫ್ ಸಿ ಬ್ಯಾಂಕ್ ಹಾಗೂ ಕೊಟಕ್ ಮಹೀಂದ್ರಾ ಬ್ಯಾಂಕ್ ಷೇರುಗಳು ಭಾರೀ ಪ್ರಮಾಣದಲ್ಲಿ ನಷ್ಟ ಕಂಡವು. ಇನ್ನು ನಿಫ್ಟಿಯಲ್ಲಿ ಜೀ ಎಂಟರ್ ಟೇನ್ ಮೆಂಟ್, ಹಿಂಡಾಲ್ಕೋ, ಟಾಟಾ ಮೋಟಾರ್ಸ್ ಮತ್ತು ಒಎನ್ ಜಿಸಿ ನಷ್ಟ ಅನುಭವಿಸಿದವು.

ಜಾಗತಿಕ ಪ್ರಭಾವದಿಂದ ಸೆನ್ಸೆಕ್ಸ್ ಸೂಚ್ಯಂಕ 590 ಪಾಯಿಂಟ್ ಇಳಿಕೆ

ಕಳೆದ ಕೆಲ ದಿನದಿಂದ ಗಟ್ಟಿಯಾಗಿದ್ದು, ಮೇಲ್ಮುಖವಾಗಿ ಸಾಗುತ್ತಿದ್ದ ಐ.ಟಿ. ಕಂಪೆನಿ ಷೇರುಗಳಾದ ಇನ್ಫೋಸಿಸ್, ಟಿಸಿಎಸ್ ಕೂಡ ಗುರುವಾರದಂದು ಕುಸಿದವು. ಸೆಪ್ಟೆಂಬರ್ ತಿಂಗಳ ಫ್ಯೂಚರ್ಸ್ ಅಂಡ್ ಆಪ್ಷನ್ ಕಾಂಟ್ರ್ಯಾಕೃ ಇಂದು ಕೊನೆಯಾಗುತ್ತದೆ. ಆದ್ದರಿಂದ ಭಾರೀ ಏರಿಳಿತ ನಿರೀಕ್ಷಿಸಬಹುದಾಗಿದೆ.

English summary

Sensex Down by 590 Points On Global Cues

Indian stock market indices sensex and nifty down on Thursday, September 24, 2020. Here is the details of top losers.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X