1986ರಿಂದ 2021 ಸೆನ್ಸೆಕ್ಸ್ ಪ್ರಮುಖ ಮೈಲುಗಲ್ಲುಗಳು: 50,000 ಪಾಯಿಂಟ್ ದಾಖಲೆ ಹಾದಿ
ಭಾರತದ ಷೇರು ಮಾರುಕಟ್ಟೆ ಸೂಚ್ಯಂಕವಾದ ಸೆನ್ಸೆಕ್ಸ್ ಗೆ ಜನವರಿ 21, 2021 ಐತಿಹಾಸಿಕ ದಿನ. ಏಕೆಂದರೆ, 50 ಸಾವಿರ ಪಾಯಿಂಟ್ ಗಳ ಗಡಿಯನ್ನು ದಾಟಿ ನಿಂತಿದೆ ಸೆನ್ಸೆಕ್ಸ್. ಬ್ಲ್ಯೂಚಿಪ್ ಕಂಪೆನಿಗಳನ್ನು ಒಳಗೊಂಡ ಬಿಎಸ್ ಇ ಸೂಚ್ಯಂಕದ ಅರಂಭ ಆದದ್ದು 1986ನೇ ಇಸವಿಯಲ್ಲಿ. ಬೇಸ್ ವರ್ಷ ಎಂದು 1978- 79 ಪರಿಗಣಿಸಿ, 100 ಎಂದು ಮೌಲ್ಯ ನೀಡಲಾಯಿತು.
ಈಗ ನಾಲ್ಕು ದಶಕ ಕಳೆದಿದೆ. ಸೂಚ್ಯಂಕ ಹೊಸ ಮೈಲುಗಲ್ಲನ್ನು ದಾಟಿದೆ. ಇದೀಗ ಮುಂದಿನ ಹಂತದ ಕಡೆಗೆ ನೋಡುವ ಸಮಯ. ಕೊರೊನಾ ಬಿಕ್ಕಟ್ಟಿನ ನಂತರ ಕಾಣಿಸಿಕೊಂಡ ಆರ್ಥಿಕ ಚೇತರಿಕೆಯ ನಿರೀಕ್ಷೆಯಲ್ಲಿ ಈಗಿನ ಓಟ ಸಾಗುತ್ತಿದೆ. ಅದರ ಜತೆಗೆ ಲಸಿಕೆ ಹಾಕುತ್ತಿರುವುದು ಸಕಾರಾತ್ಮಕ ವಿದ್ಯಮಾನ ಆಗಿದೆ.
50 ಸಾವಿರ ಪಾಯಿಂಟ್ ದಾಟಿದ ಸೆನ್ಸೆಕ್ಸ್; Nifty 14700 ಪಾಯಿಂಟ್ ಆಚೆಗೆ
ಯು.ಎಸ್. ನಲ್ಲಿ ಜೋ ಬೈಡನ್ ಅಧಿಕಾರ ಸ್ವೀಕರಿಸಿದ ಸುದ್ದಿ ಷೇರುಪೇಟೆಯ ಉತ್ಸಾಹ ಹೆಚ್ಚಿಸಿದೆ. ಕೊರೊನಾ ಬಿಕ್ಕಟ್ಟಿನಿಂದ ಉದ್ಭವಿಸಿರುವ ಆರ್ಥಿಕ ಸವಾಲು ಎದುರಿಸಲು ಜೋ ಬೈಡನ್ ದೊಡ್ಡ ಮೊತ್ತದ ಉತ್ತೇಜನ ಕ್ರಮ ಘೋಷಿಸುವ ನಿರೀಕ್ಷೆ ಇದೆ. ಭಾರತದ ವಿಚಾರಕ್ಕೆ ಬರುವುದಾದರೆ ಆರ್ಥಿಕ ಕ್ರಮಗಳು, ಆರ್ಥಿಕ ಚೇತರಿಕೆಗಾಗಿ ಖರ್ಚು ಹೆಚ್ಚಿಸುವುದು, ವಿದೇಶೀ ಸಾಂಸ್ಥಿಕ ಹೂಡಿಕೆದಾರರಿಂದ ಸ್ಥಿರವಾದ ಹೂಡಿಕೆ ಬರುತ್ತಿರುವುದು ಸಕಾರಾತ್ಮಕ ಸುದ್ದಿಯಾಗಿದೆ.
ಸೆನ್ಸೆಕ್ಸ್ ಮುಟ್ಟಿದ್ದಂಥ ಪ್ರಮುಖ ಮೈಲುಗಲ್ಲು ಹಾಗೂ ಅದರ ಪಯಣದ ವಿವರ ಹೀಗಿದೆ:
100- 1000 ಪಾಯಿಂಟ್. 1990ರ ಜುಲೈ 25
10,000 ಪಾಯಿಂಟ್ ಫೆಬ್ರವರಿ 7, 2006
20,000 ಪಾಯಿಂಟ್ 2007ರಲ್ಲಿ
30,000 ಪಾಯಿಂಟ್ 2017ರಲ್ಲಿ
40,000 ಪಾಯಿಂಟ್ 2019ರ ಜೂನ್ 3
50,000 ಪಾಯಿಂಟ್ ಆನಂತರದ 14 ತಿಂಗಳಲ್ಲಿ
ಈಚಿನ ಜಾಗತಿಕ ಮಾರಾಟದ ಒತ್ತಡವು 2020ರ ಮಾರ್ಚ್ ವೇಳೆ ಕೇವಲ 2 ತಿಂಗಳಲ್ಲಿ 15,000 ಪಾಯಿಂಟ್ ಕೊಚ್ಚಿಹೋಗುವಂತೆ ಮಾಡಿತು. ಅದನ್ನು ಕೂಡ ಮರೆಯುವಂತಿಲ್ಲ ಒಂದು ವೇಳೆ ಈಗಿನ ಟ್ರೆಂಡ್ ಮುಂದುವರಿದಲ್ಲಿ 4-5 ವರ್ಷದೊಳಗೆ 1,00,000 ಪಾಯಿಂಟ್ ಗೆ ಏರಿದರೂ ಅಚ್ಚರಿಯಿಲ್ಲ.