For Quick Alerts
ALLOW NOTIFICATIONS  
For Daily Alerts

ಸೆನ್ಸೆಕ್ಸ್, ನಿಫ್ಟಿ ಶುಭಾಂತ್ಯ: ಮೊದಲ ದಿನವೇ ಎಲ್‌ಐಸಿ ಹೂಡಿಕೆದಾರರಿಗೆ ಶಾಕ್

|

ಲೋಹ ಮತ್ತು ಇಂಧನ ಸ್ಟಾಕ್‌ಗಳ ಲಾಭದ ಮೂಲಕ ಭಾರತೀಯ ಷೇರುಗಳ ಮಾನದಂಡಗಳು ಮಂಗಳವಾರ ಸತತ ಎರಡನೇ ವಹಿವಾಟಿನಲ್ಲಿ ಏರಿಕೆ ಕಂಡಿವೆ. ಆದರೆ ಈ ಸಂದರ್ಭದಲ್ಲೇ ಲೈಫ್ ಇನ್ಶೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಲ್‌ಐಸಿ) ದ ಆರಂಭಿಕ ಮಾರುಕಟ್ಟೆಯಲ್ಲೇ ಕಡಿಮೆ ಬೆಲೆ ಪಟ್ಟಿ ಮಾಡಲ್ಪಟ್ಟಿದೆ.

 

ಎಲ್‌ಐಸಿ ಷೇರಿನ ವಿತರಣಾ ದರ 949 ರೂ.ಗೆ ಹೋಲಿಸಿದರೆ ಶೇ. 7.75ರಷ್ಟು ರಿಯಾಯಿತಿ ದರದಲ್ಲಿ ಅಂದರೆ 875.45ರೂ.ನಲ್ಲಿ ಬಿಎಸ್‌ಇನಲ್ಲಿ ಪಟ್ಟಿ ಮಾಡಲ್ಪಟ್ಟವು. ರಾಷ್ಟ್ರೀಯ ಷೇರು ವಿನಿಮಯ ಮಾರುಕಟ್ಟೆ (ಎನ್ಎಸ್ಇ)ನಲ್ಲಿ ಷೇರು ಶೇ. 8.01ರಷ್ಟು ರಿಯಾಯಿತಿ ದರದಲ್ಲಿ ಅಂದರೆ 873 ರೂಪಾಯಿಗೆ ಪಟ್ಟಿ ಮಾಡಲ್ಪಟ್ಟಿತು.

 

ಸೆನ್ಸೆಕ್ಸ್, ನಿಫ್ಟಿ ಏರಿಕೆ: ಎಲ್‌ಐಸಿ ಲೀಸ್ಟಿಂಗ್ ಮೇಲೆ ಚಿತ್ತಸೆನ್ಸೆಕ್ಸ್, ನಿಫ್ಟಿ ಏರಿಕೆ: ಎಲ್‌ಐಸಿ ಲೀಸ್ಟಿಂಗ್ ಮೇಲೆ ಚಿತ್ತ

ಕಂಪನಿಯು ತನ್ನ ಷೇರುಗಳಿಗೆ 902-949 ರೂ. ವ್ಯಾಪ್ತಿಯಲ್ಲಿ ಬಿಡ್ ಮಾಡಲು ಅವಕಾಶ ನೀಡಿತ್ತು. ಮೇ 4 ರಿಂದ ಮೇ 9 ರ ನಡುವೆ ಚಂದಾದಾರಿಕೆಗೆ ಐಪಿಒ ತೆರೆದಿತ್ತು. ಉದ್ಯೋಗಿಗಳು ಮತ್ತು ಪಾಲಿಸಿದಾರರಿಂದ ಬಲವಾದ ಬೇಡಿಕೆಯಿಂದಾಗಿ ಒಟ್ಟಾರೆಯಾಗಿ 2.95 ಪಟ್ಟು ಚಂದಾದಾರಿಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

ಷೇರು ಮಾರುಕಟ್ಟೆ: ಮೊದಲ ದಿನವೇ ಎಲ್‌ಐಸಿ ಹೂಡಿಕೆದಾರರಿಗೆ ಶಾಕ್

30-ಷೇರು ಬಿಎಸ್‌ಇ ಸೆನ್ಸೆಕ್ಸ್ 1,345 ಪಾಯಿಂಟ್‌ಗಳು ಅಥವಾ ಶೇಕಡಾ 2.54 ರಷ್ಟು ಏರಿಕೆ ಕಂಡು 54,318 ಕ್ಕೆ ತಲುಪಿತು. ಎನ್‌ಎಸ್‌ಇ ನಿಫ್ಟಿ 417 ಪಾಯಿಂಟ್ ಅಥವಾ 2.63 ರಷ್ಟು ಏರಿಕೆ ಕಂಡು 16,259 ಕ್ಕೆ ವಹಿವಾಟು ಅಂತ್ಯ ಮಾಡಿದೆ.

ಎಲ್‌ಐಸಿ ಷೇರು ಲೀಸ್ಟಿಂಗ್: ಈ ಮಾಹಿತಿ ತಿಳಿದಿರಿಎಲ್‌ಐಸಿ ಷೇರು ಲೀಸ್ಟಿಂಗ್: ಈ ಮಾಹಿತಿ ತಿಳಿದಿರಿ

ನಿಫ್ಟಿ ಮಿಡ್‌ಕ್ಯಾಪ್ 100 ಶೇಕಡಾ 2.73 ಜಿಗಿತ ಮತ್ತು ಸ್ಮಾಲ್ ಕ್ಯಾಪ್ ಶೇಕಡಾ 3.36 ರಷ್ಟು ಏರಿದ್ದರಿಂದ ಮಿಡ್ ಮತ್ತು ಸ್ಮಾಲ್ ಕ್ಯಾಪ್ ಷೇರುಗಳು ಲಾಭಗಳಿಸಿದೆ. ನಿಫ್ಟಿ ಮೆಟಲ್ ಮತ್ತು ನಿಫ್ಟಿ ಆಯಿಲ್ ಮತ್ತು ಗ್ಯಾಸ್ ಕ್ರಮವಾಗಿ ಶೇಕಡಾ 6.86 ಮತ್ತು 3.68 ರಷ್ಟು ಏರಿಕೆಯಾಗಿದೆ.

ಯಾವ ಷೇರಿಗೆ ನಷ್ಟ, ಯಾವ ಷೇರಿಗೆ ಲಾಭ?

ಹಿಂಡಾಲ್ಕೊ ತನ್ನ ಲಾಭವನ್ನು ಉಳಿಸಿಕೊಂಡಿದೆ. ಹಿಂಡಾಲ್ಕೊ ಷೇರುಗಳು ಶೇಕಡಾ 9.80 ರಷ್ಟು ಏರಿಕೆಯಾಗಿ ರೂಪಾಯಿ 429.25 ಕ್ಕೆ ತಲುಪಿದೆ. ಟಾಟಾ ಸ್ಟೀಲ್, ಕೋಲ್ ಇಂಡಿಯಾ, ಜೆಎಸ್‌ಡಬ್ಲ್ಯೂ ಸ್ಟೀಲ್ ಮತ್ತು ಒಎನ್‌ಜಿಸಿ ಷೇರುಗಳು ಕೂಡ ಲಾಭ ಗಳಿಸಿದೆ. ಇನ್ನು 2,627 ಷೇರುಗಳು ಮುನ್ನಡೆ ಸಾಧಿಸಿದ್ದರೆ, ಬಿಎಸ್‌ಇಯಲ್ಲಿ 713 ಷೇರುಗಳು ಕುಸಿತ ಕಂಡಿದೆ.

ಎಲ್ಲಾ ಸೆನ್ಸೆಕ್ಸ್ ಲಾಭದೊಂದಿಗೆ ವಹಿವಾಟು ಅಂತ್ಯ ಮಾಡಿದೆ. ಟಾಟಾ ಸ್ಟೀಲ್, ರಿಲಯನ್ಸ್ ಇಂಡಸ್ಟ್ರೀಸ್, ಐಟಿಸಿ, ವಿಪ್ರೋ, ಐಸಿಐಸಿಐ ಬ್ಯಾಂಕ್, ಎಚ್‌ಸಿಎಲ್ ಟೆಕ್, ಎಲ್ & ಟಿ, ಮಾರುತಿ, ಬಜಾಜ್ ಫೈನಾನ್ಸ್, ಟೈಟಾನ್, ಎಸ್‌ಬಿಐ ಮತ್ತು ಟಿಸಿಎಸ್ ಲಾಭ ಗಳಿಸಿದೆ. ಈ ನಡುವೆ ಭಾರ್ತಿ ಏರ್‌ಟೆಲ್ ಮತ್ತು ಇಂಡಿಯನ್ ಆಯಿಲ್ ಕಾರ್ಪೊರೇಷನ್ ತಮ್ಮ ತ್ರೈಮಾಸಿಕ ಗಳಿಕೆ ಫಲಿತಾಂಶಗಳಿಗಿಂತ ಕ್ರಮವಾಗಿ ಶೇ.1.79 ಮತ್ತು ಶೇ.1.80ರಷ್ಟು ಏರಿಕೆ ಕಂಡಿವೆ.

English summary

Sensex Soars 1345 Pts, Nifty Ends Above 16250; LIC Shares Fall On Market Debut

Sensex Soars 1345 Pts, Nifty Ends Above 16250; LIC shares were listed at a discount of 8.62 per cent fall on market debut.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X