For Quick Alerts
ALLOW NOTIFICATIONS  
For Daily Alerts

ಸೆನ್ಸೆಕ್ಸ್ 588 ಪಾಯಿಂಟ್ ಕುಸಿತ, ನಿಫ್ಟಿ 183 ಪಾಯಿಂಟ್ ಇಳಿಕೆ

|

ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಜನವರಿ 29ನೇ ತಾರೀಕಿನ ಶುಕ್ರವಾರ ಕೂಡ ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಸೆನ್ಸೆಕ್ಸ್ 588.59 ಪಾಯಿಂಟ್ ಕುಸಿದು, 46,285.77 ಪಾಯಿಂಟ್ ನೊಂದಿಗೆ ದಿನ- ವಾರಾಂತ್ಯ ಕಂಡಿದೆ. ಇನ್ನು ನಿಫ್ಟಿ 182.90 ಪಾಯಿಂಟ್ ಕುಸಿತವಾಗಿ, 13,634.60 ಪಾಯಿಂಟ್ ನೊಂದಿಗೆ ವಹಿವಾಟು ಚುಕ್ತಾ ಮಾಡಿದೆ.

 

ಈ ದಿನದ ಷೇರು ಮಾರುಕಟ್ಟೆ ವಹಿವಾಟಿನ ಮೇಲೆ ಆರ್ಥಿಕ ಸಮೀಕ್ಷೆ 2020- 21ರ ವರದಿಯ ಪರಿಣಾಮ ಆಯಿತು. ಆರ್ಥಿಕ ವರ್ಷ 2021ಕ್ಕೆ ಆರ್ಥಿಕತೆ 7.7%ಗೆ ಹಾಗೂ FY22ಕ್ಕೆ ವಾಸ್ತವ ಜಿಡಿಪಿ 11 ಪರ್ಸೆಂಟ್ ಆಗಬಹುದು ಎಂದು ಶುಕ್ರವಾರ ಮಂಡಿಸಿದ ಆರ್ಥಿಕ ಸಮೀಕ್ಷೆ ವರದಿಯಲ್ಲಿ ಅಂದಾಜು ಮಾಡಲಾಗಿದೆ.

 

ಆರ್ಥಿಕ ಸಮೀಕ್ಷೆ: 2021- 22ನೇ ಹಣಕಾಸು ವರ್ಷಕ್ಕೆ 11% GDP ನಿರೀಕ್ಷೆಆರ್ಥಿಕ ಸಮೀಕ್ಷೆ: 2021- 22ನೇ ಹಣಕಾಸು ವರ್ಷಕ್ಕೆ 11% GDP ನಿರೀಕ್ಷೆ

ಇನ್ನು ಉತ್ಪಾದನೆ, ನಿರ್ಮಾಣ ಹಾಗೂ ಕಾಂಟ್ಯಾಕ್ಟ್ ಆಧಾರಿತ ಸೇವೆಗಳಿಗೆ ಭರ್ತಿ ಹೊಡೆತ ಬಿದ್ದಿದೆ ಎಂಬುದನ್ನು ಆರ್ಥಿಕ ಸಮೀಕ್ಷೆಯಲ್ಲಿ ತಿಳಿಸಲಾಗಿದೆ. ಸಾರ್ವಜನಿಕ ಬ್ಯಾಂಕ್ ಗಳಿಗೆ ಅಗತ್ಯ ಪ್ರಮಾಣದ ಬಂಡವಾಳ ಪೂರೈಸಬೇಕು ಎಂದು ಆರ್ಥಿಕ ಸಮೀಕ್ಷೆಯಲ್ಲಿ ಶಿಫಾರಸು ಮಾಡಿರುವುದರಿಂದ ಈ ವಲಯದಲ್ಲಿ ಗಣನೀಯ ಗಳಿಕೆ ಕಂಡುಬಂತು. ಒಂದು ವೇಳೆ ಬಂಡವಾಳ ಒದಗಿಸದಿದ್ದಲ್ಲಿ ಸಾಲ ಒದಗಿಸಿದ ಸಂಸ್ಥೆಗಳ ಅಪಾಯದ ಬಗ್ಗೆ ತಿಳಿಸಲಾಗಿದೆ.

ನಿಫ್ಟಿಯಲ್ಲಿ ಏರಿಕೆ ದಾಖಲಿಸಿದ ಟಾಪ್ ಐದು ಷೇರುಗಳು ಮತ್ತು ಪರ್ಸೆಂಟ್
ಇಂಡಸ್ ಇಂಡ್ ಬ್ಯಾಂಕ್ 5.42%

ಸನ್ ಫಾರ್ಮಾ 3.87%

ಐಸಿಐಸಿಐ ಬ್ಯಾಂಕ್ 1.66%

ಎಚ್ ಡಿಎಫ್ ಸಿ ಬ್ಯಾಂಕ್ 1.39%

ಎಚ್ ಡಿಎಫ್ ಸಿ ಲೈಫ್ 0.92%

ಸೆನ್ಸೆಕ್ಸ್ 588 ಪಾಯಿಂಟ್ ಕುಸಿತ, ನಿಫ್ಟಿ 183 ಪಾಯಿಂಟ್ ಇಳಿಕೆ

ನಿಫ್ಟಿಯಲ್ಲಿ ಏರಿಕೆ ದಾಖಲಿಸಿದ ಟಾಪ್ ಐದು ಷೇರುಗಳು ಮತ್ತು ಪರ್ಸೆಂಟ್
ಡಾ ರೆಡ್ಡೀಸ್ ಲ್ಯಾಬ್ಸ್ -5.52%

ಮಾರುತಿ ಸುಜುಕಿ -5.03%

ಹೀರೋ ಮೋಟೋಕಾರ್ಪ್ -4.16%

ಟಾಟಾ ಸ್ಟೀಲ್ -3.64%

ವಿಪ್ರೋ -3.24%

English summary

Sensex Tank 588 Points, Nifty Down By 183 Points

Indian stock market index sensex tank 588 points and nifty down by 183 points on Friday, January 28, 2021.
Story first published: Friday, January 29, 2021, 17:28 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X