For Quick Alerts
ALLOW NOTIFICATIONS  
For Daily Alerts

ಸೆನ್ಸೆಕ್ಸ್ 835 ಪಾಯಿಂಟ್ ಏರಿಕೆ; ಷೇರು ಮಾರ್ಕೆಟ್ ಗಳಿಕೆಗೆ 4 ಕಾರಣಗಳು

|

ಸತತವಾಗಿ ಆರು ದಿನಗಳಿಂದ ಇಳಿಯುತ್ತಾ ಸಾಗಿದ್ದ ಷೇರು ಮಾರ್ಕೆಟ್ ಸೂಚ್ಯಂಕಗಳಾದ ಸೆನ್ಸೆಕ್ಸ್ ಹಾಗೂ ನಿಫ್ಟಿ ಶುಕ್ರವಾರ (ಸೆಪ್ಟೆಂಬರ್ 25, 2020) ಭರ್ಜರಿ ಏರಿಕೆ ಕಂಡವು. ಬೆಳಗ್ಗೆ ಆರಂಭದ ವಹಿವಾಟಿನಲ್ಲೇ ಉತ್ತಮ ಏರಿಕೆ ಕಂಡಿದ್ದ ಸೂಚ್ಯಂಕಗಳು ಮಧ್ಯಾಹ್ನ ಅದನ್ನು ವಿಸ್ತರಿಸಿಕೊಂಡು, ಮುಂದುವರಿದವು. ಗುರುವಾರದ ಸೆಷನ್ ನಲ್ಲಿ ಆಗಿದ್ದ ನಷ್ಟವು ಬಹುತೇಕ ವಾಪಸಾದವು.

 

ಬಿಎಸ್ ಇ ಸೆನ್ಸೆಕ್ಸ್ ಸೂಚ್ಯಕವು 835.06 ಪಾಯಿಂಟ್ ಗಳ ಏರಿಕೆ ಕಂಡು, ದಿನಾಂತ್ಯಕ್ಕೆ 37,388.66 ಪಾಯಿಂಟ್ ನೊಂದಿಗೆ ವ್ಯವಹಾರ ಮುಗಿಸಿತು. ಇನ್ನು ನಿಫ್ಟಿ 244.80 ಪಾಯಿಂಟ್ ಗಳ ಏರಿಕೆ ಕಂಡು, 11,050.30 ಅಂಶಗಳೊಂದಿಗೆ ದಿನ- ವಾರಾಂತ್ಯದ ವಹಿವಾಟನ್ನು ಚುಕ್ತಾ ಮಾಡಿತು. ಹಾಗಿದ್ದರೆ ಭಾರತದ ಷೇರು ಮಾರುಕಟ್ಟೆ ಇಂಥದ್ದೊಂದು ಅದ್ಭುತ ಗಳಿಕೆ ಕಾಣಲು ಕಾರಣವಾದ ನಾಲ್ಕು ಅಂಶಗಳು ಯಾವುವು ಎಂಬ ಮಾಹಿತಿ ಇಲ್ಲಿದೆ.

ಜಾಗತಿಕ ಮಾರುಕಟ್ಟೆಯಲ್ಲಿನ ಚೇತರಿಕೆ

ಜಾಗತಿಕ ಮಾರುಕಟ್ಟೆಯಲ್ಲಿನ ಚೇತರಿಕೆ

ಯುರೋಪಿಯನ್ ಷೇರು ಮಾರುಕಟ್ಟೆಯು ಆರಂಭದ ವಹಿವಾಟಿನಲ್ಲೇ 0.1% ಏರಿಕೆ ಕಂಡಿತು. ಆಸ್ಟ್ರೇಲಿಯಾದ "ಬಿಗ್ ಫೋರ್" ಬ್ಯಾಂಕ್ ಗಳು ಪ್ರಬಲವಾದ ಗಳಿಕೆ ಕಂಡವು. ಏಷ್ಯಾ ಪೆಸಿಫಿಕ್ ಟ್ರೇಡಿಂಗ್ ಮಿಶ್ರವಾಗಿತ್ತು ಹಾಗೂ ಅಮೆರಿಕದ ತಂತ್ರಜ್ಞಾನ ಷೇರುಗಳು ಭರ್ಜರಿ ಏರಿಕೆ ಕಂಡವು. ಯುಎಸ್ ನಲ್ಲಿ ಡೌ ಫ್ಯೂಚರ್ಸ್ ಶುಕ್ರವಾರ ಪಾಸಿಟಿವ್ ಆಗಿ ಶುರುವಾಗುವಂತೆ ಕಾಣುತ್ತಿದೆ.

ಬ್ಲೂ ಚಿಪ್ಸ್ ಗಳಿಕೆ

ಬ್ಲೂ ಚಿಪ್ಸ್ ಗಳಿಕೆ

ಸೂಚ್ಯಂಕದ ಏರಿಕೆಯಲ್ಲಿ ಎಚ್ ಸಿಎಲ್ ಟೆಕ್ನಾಲಜೀಸ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಭಾರ್ತಿ ಏರ್ ಟೆಲ್, ಅದಾನಿ ಪೋರ್ಟ್ಸ್, ಬಜಾಜ್ ಫೈನಾನ್ಸ್ ಷೇರುಗಳು ಭಾರೀ ಕೊಡುಗೆ ನೀಡಿದವು. ನಿಫ್ಟಿಯಲ್ಲಿ ಟಾಪ್ ಗೇಯ್ನರ್ ಆದ ಭಾರ್ತಿ ಏರ್ ಟೆಲ್ 6 ಪರ್ಸೆಂಟ್ ಹೆಚ್ಚಳ ಕಂಡಿತು. ನಿಪ್ಟಿ 50ಯಲ್ಲಿ ಇರುವ ಒಟ್ಟು 50 ಷೇರುಗಳ ಪೈಕಿ 47 ಷೇರುಗಳು ಗಳಿಕೆ ಕಂಡವು.

ಖರೀದಿದಾರರ ಮಾರ್ಕೆಟ್
 

ಖರೀದಿದಾರರ ಮಾರ್ಕೆಟ್

ಈ ವಾರದಲ್ಲಿ ಭಾರೀ ಪ್ರಮಾಣದಲ್ಲಿ ಷೇರುಗಳ ಬೆಲೆಯಲ್ಲಿ ಇಳಿಕೆ ಕಂಡ ಮೇಲೆ ಮಾರ್ಕೆಟ್ ನಲ್ಲಿ ಗುಣಮಟ್ಟದ ಷೇರುಗಳ ಖರೀದಿಗೆ ತಾನಾಗಿಯೇ ಅವಕಾಶ ಸಿಕ್ಕಂತಾಯಿತು. ಈ ಕಾರಣಕ್ಕೆ ಹೂಡಿಕೆದಾರರಿಗೆ ಈಗಿನ ಷೇರಿನ ಮಾರ್ಕೆಟ್ ನಲ್ಲಿ ಗುಣಮಟ್ಟದ ಷೇರಿನ ಖರೀದಿಗೆ ಮುಂದಾದರು.

ಹೆಚ್ಚುವರಿ ಉತ್ತೇಜನಾ ಕ್ರಮಗಳ ನಿರೀಕ್ಷೆ

ಹೆಚ್ಚುವರಿ ಉತ್ತೇಜನಾ ಕ್ರಮಗಳ ನಿರೀಕ್ಷೆ

ಮನಿಕಂಟ್ರೋಲ್ ವೆಬ್ ಸೈಟ್ ವರದಿ ಪ್ರಕಾರ, ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮತ್ತೊಂದು ಸುತ್ತು ಆರ್ಥಿಕ ಉತ್ತೇಜನಾ ಕ್ರಮಗಳನ್ನು ಘೋಷಿಸಿ, ಬೇಡಿಕೆ ಹೆಚ್ಚಲು ಕಾರಣವಾಗಲಿದೆ ಹಾಗೂ ಉದ್ಯೋಗ ಸೃಷ್ಟಿಸಲಿದೆ. ಮುಂದಿನ ಹಬ್ಬಗಳ ಋತುವಿನ ಆರಂಭಕ್ಕೂ ಮುನ್ನವೇ ಘೋಷಣೆ ಮಾಡಲಾಗುತ್ತದೆ ಎಂಬ ನಿರೀಕ್ಷೆ ಇದೆ. ಯುಎಸ್ ನಲ್ಲಿ ಮುಂದಿನ ವಾರಗಳಲ್ಲಿ 2.2 ಲಕ್ಷ ಕೋಟಿ ಅಮೆರಿಕನ್ ಡಾಲರ್ ಆರ್ಥಿಕ ಉತ್ತೇಜನಾ ಪ್ಯಾಕೇಜ್ ಬಿಡುಗಡೆಗೆ ಪ್ರಯತ್ನ ನಡೆಸಲಾಗುತ್ತದೆ. ಅದಕ್ಕಾಗಿ ಮುಂದಿನ ವಾರ ಮತಕ್ಕೆ ಹಾಕಲಾಗುವುದು ಎಂಬ ಅಂದಾಜು ಇರುವುದರ ಬಗ್ಗೆ ಹೂಡಿಕೆದಾರರಿಗೆ ಭರವಸೆ ಹೆಚ್ಚಾಗಿದೆ.

English summary

Sensex Up 835 Points; Factors Behind Stock Market Rally

Sensex and nifty up on September 25, 2020. Here is the 4 factors behind this rally.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X