For Quick Alerts
ALLOW NOTIFICATIONS  
For Daily Alerts

ಷೇರುಪೇಟೆಯಲ್ಲಿ ಧಮಾಕ, ಸೆನ್ಸೆಕ್ಸ್ 917 ಪಾಯಿಂಟ್‌ಗಳ ಏರಿಕೆ

|

ಮಂಗಳವಾರ ಹೂಡಿಕೆದಾರರಿಗೆ ಖುಷಿಯೋ ಖುಷಿ.. ಇದಕ್ಕೆ ಕಾರಣ ಷೇರು ಮಾರುಕಟ್ಟೆಯಲ್ಲಿ ಗೂಳಿಯ ಓಟ ಜೋರಾಗಿದೆ. ಕಳೆದ ವೀಕೆಂಡ್‌ನಲ್ಲಿ ಭಾರೀ ಕುಸಿತ ಕಂಡಿದ್ದ ಸೆನ್ಸೆಕ್ಸ್ ಮಂಗಳವಾರ ದಾಖಲೆಯ ಓಟ ಕಂಡಿದ್ದು 2.3 ಪರ್ಸೆಂಟ್‌ನಷ್ಟು ಹೆಚ್ಚಳವಾಗಿದೆ. ನಿಫ್ಟಿ ಕೂಡ 2.34 ಪರ್ಸೆಂಟ್ ಏರಿಕೆ ದಾಖಲಿಸಿದ್ದು 12,000 ಗಡಿ ಸಮೀಪಿಸಿದೆ.

 

ರಾಷ್ಟ್ರೀಯ ಷೇರುಪೇಟೆ(ಎನ್‌ಎಸ್ಇ) ಸೂಚ್ಯಂಕ ನಿಫ್ಟಿ ಮಂಗಳವಾರ ಭರ್ಜರಿ ವಹಿವಾಟು ಕಂಡಿತು. 2.35 ಪರ್ಸೆಂಟ್ ಏರಿಕೆಯಾಗಿ 11,982.60 ಅಂಶಗಳಿಗೆ ತಲುಪಿದೆ. ಸೆನ್ಸೆಕ್ಸ್ 917.07 ಅಂಶಗಳು ಏರಿಕೆಗೊಂಡು 40,789.38 ಅಂಶಗಳನ್ನು ಮುಟ್ಟಿದೆ.

ಲಾಭ ಗಳಿಸಿದ ಕಂಪನಿಗಳ ಷೇರುಗಳು

ಟೈಟಾನ್ , ಐಒಸಿ, ಬಜಾಜ್ ಫಿನ್‌ಸರ್ವ್, ಐಟಿಸಿ, ಹೀರೋ ಮೋಟೊಕಾರ್ಪ್, ಭಾರತಿ ಇನ್ಫ್ರಾಟೆಲ್, ಹೆಚ್‌ಡಿಎಫ್‌ಸಿ, ಬಜಾಜ್ ಫಿನಾನ್ಸ್‌, ಹೆಚ್ಚು ಲಾಭ ಗಳಿಸಿದ ಕಂಪನಿಯ ಷೇರುಗಳಾಗಿವೆ.

ನಷ್ಟ ಅನುಭವಿಸಿದ ಷೇರುಗಳು
ಬಜಾಜ್ ಆಟೋ, ಯೆಸ್‌ ಬ್ಯಾಂಕ್, ಇಚರ್ ಮೋಟಾರ್ಸ್, ಹೆಚ್‌ಯುಎಲ್, ಜೀ ಎಂಟರ್‌ಟೈನ್‌ಮೆಂಟ್

ಷೇರು ಮಾರುಕಟ್ಟೆಯಲ್ಲಿನ ಈ ಭರ್ಜರಿ ಏರಿಕೆಗೆ ಕಾರಣಗಳೇನು ಎಂಬುದನ್ನು ಈ ಕೆಳಗೆ ನೀಡಲಾಗಿದೆ.

1. ಜಾಗತಿಕ ಚೇತರಿಕೆ

1. ಜಾಗತಿಕ ಚೇತರಿಕೆ

ಕಳೆದ ಒಂದು ವಾರದಲ್ಲಿ ಏಷ್ಯಾದ ಸಹವರ್ತಿಗಳಲ್ಲಿ ಏಕಾಏಕಿ ಕೊರೊನಾ ವೈರಸ್‌ ಭಯ ಹೆಚ್ಚಾಗಿತ್ತು. ಬೇರೆ ದೇಶಗಳಲ್ಲೂ ಹೆಚ್ಚಾಗಿ ಹರಡುವಿಕೆಯ ಭಯವು ಷೇರು ಮಾರುಕಟ್ಟೆಯ ಮೇಲೂ ಪ್ರಭಾವ ಬೀರಿತ್ತು. ಈಗಾಗಲೇ ಚೀನಾದಲ್ಲಿ 400 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು 20,000 ಜನರು ಸೋಂಕಿಗೆ ಒಳಗಾಗಿದ್ದಾರೆ. ಈ ಭಯ ಸ್ವಲ್ಪ ಮಟ್ಟಗೆ ತಗ್ಗಿದೆ.

ಕಳೆದ ಸೆಷನ್‌ನಲ್ಲಿ ೭ ಪರ್ಸೆಂಟ್‌ನಷ್ಟು ಕುಸಿತದ ನಂತರ ಚೀನಾದ ಶಾಂಘೈ ಕಾಂಪೊಸಿಟ್ ಶಾರ್ಟ್ ಕವರಿಂಗ್ ನಡುವೆ 0.5 ಪರ್ಸೆಂಟ್‌ನಷ್ಟು ಚೇತರಿಕೆ ಕಂಡಿತು. ಈ ಸಮಯದಲ್ಲಿ ಜಪಾನ್‌ನ ನಿಕ್ಕಿ, ಹಾಂಗ್‌ಕಾಂಗ್‌ನ ಹ್ಯಾಂಗ್ ಸೆಂಗ್ ಮತ್ತು ದಕ್ಷಿಣ ಕೊರಿಯಾದ ಕೋಸ್ಪಿ 0.5 ರಿಂದ 1.8 ಪರ್ಸೆಂಟ್‌ರಷ್ಟು ಏರಿಕೆಯಾಗಿದೆ.

 

2. ದೊಡ್ಡ ಅದ್ಧೂರಿ ಬಜೆಟ್ ಅಲ್ಲದಿದ್ದರೂ ನಕಾರಾತ್ಮಕತೆಯನ್ನು ಹೊಂದಿಲ್ಲ
 

2. ದೊಡ್ಡ ಅದ್ಧೂರಿ ಬಜೆಟ್ ಅಲ್ಲದಿದ್ದರೂ ನಕಾರಾತ್ಮಕತೆಯನ್ನು ಹೊಂದಿಲ್ಲ

ಫೆಬ್ರವರಿ 1ರಂದು ಕೇಂದ್ರ ಬಜೆಟ್ ಮಂಡಿಸಲಾಯಿತು. ಜನರು ದುಪ್ಪಟ್ಟು ನಿರೀಕ್ಷೆಗಳನ್ನು ಇಟ್ಟುಕೊಂಡು ಬಜೆಟ್ ಎದುರು ನೋಡುತ್ತಿದ್ದರು. ಅದರಲ್ಲೂ ಹೂಡಿಕೆದಾರರು, ಷೇರುಪೇಟೆ ವಹಿವಾಟುದಾರು ದೊಡ್ಡ ಮಟ್ಟಿನ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ಆದರೆ ಹೆಚ್ಚಿನ ನಿರೀಕ್ಷೆಗಳನ್ನು ಪೂರೈಸಲು ಬಜೆಟ್ ವಿಫಲವಾಗಿದೆ. ಆದರೆ ಯಾವುದೇ ಪ್ರಮುಖ ನಕಾರಾತ್ಮಕದಿಂದ ಕೂಡಿಲ್ಲ.

ಬಜೆಟ್ ನಲ್ಲಿ ದೀರ್ಘಾವಧಿಯ ಬಂಡವಾಳ ಲಾಭಗಳ (ಎಲ್‌ಟಿಸಿಜಿ) ತೆರಿಗೆಯನ್ನು ಉಲ್ಲೇಖಿಸಲಿಲ್ಲ, ಆದರೆ ಅದನ್ನೇ ಹೆಚ್ಚಾಗಿ ನಿರೀಕ್ಷಿಸಲಾಗಿತ್ತು ಆದರೆ ಇದು ಹೊಸ ವೈಯಕ್ತಿಕ ಆದಾಯ ತೆರಿಗೆ ನಿಯಮವನ್ನು ಪರಿಚಯಿಸಿತು, ಲಾಭಾಂಶ ವಿತರಣಾ ತೆರಿಗೆಯನ್ನು ರದ್ದುಗೊಳಿಸಿತು ಮತ್ತು ಕಾರ್ಪೊರೇಟ್ ಬಾಂಡ್‌ಗಳಲ್ಲಿ ಎಫ್‌ಐಐ ಹೂಡಿಕೆ ಮಿತಿಯನ್ನು ಹೆಚ್ಚಿಸಿತು. ಹಣಕಾಸಿನ ಕೊರತೆಯನ್ನು ನಿರೀಕ್ಷೆಯಂತೆ 3.3 ಪರ್ಸೆಂಟ್‌ನಿಂದ 3.8 ಕ್ಕೆ ಪರಿಷ್ಕರಿಸಲಾಯಿತು ಇದೇ ರೀತಿಯಾಗಿ ಕೆಲವು ವೈಶಿಷ್ಟತೆಯೂ ಬಜೆಟ್‌ನಲ್ಲಿ ಕೂಡಿದೆ.

 

ಬಜೆಟ್‌ ಎಫೆಕ್ಟ್‌: ಷೇರು ಮಾರುಕಟ್ಟೆ ಸೂಚ್ಯಂಕದಲ್ಲಿ ಇಳಿಕೆಬಜೆಟ್‌ ಎಫೆಕ್ಟ್‌: ಷೇರು ಮಾರುಕಟ್ಟೆ ಸೂಚ್ಯಂಕದಲ್ಲಿ ಇಳಿಕೆ

3. ಎಲ್ಲಾ ಕ್ಷೇತ್ರಗಳಲ್ಲಿ ಷೇರುಗಳ ಖರೀದಿ

3. ಎಲ್ಲಾ ಕ್ಷೇತ್ರಗಳಲ್ಲಿ ಷೇರುಗಳ ಖರೀದಿ

ಎಲ್ಲಾ ವಲಯ ಸೂಚ್ಯಂಕಗಳು ಹಸಿರು ಬಣ್ಣದಲ್ಲಿ ವಹಿವಾಟು ನಡೆಸಿದ್ದು, ನಿಫ್ಟಿ ಯಲ್ಲಿ ಬ್ಯಾಂಕ್ ಮತ್ತು ಲೋಹವು ಅತಿ ಹೆಚ್ಚು ಏರಿಕೆಯಾಗಿದೆ (ಶೇಕಡಾ 2.4 ರಷ್ಟು), ನಂತರ ಆಟೋ, ಎಫ್‌ಎಂಸಿಜಿ, ಐಟಿ ಮತ್ತು ಫಾರ್ಮಾಗಳು 1 ಪರ್ಸೆಂಟ್‌ಗಿಂತ ಹೆಚ್ಚು ಗಳಿಸಿವೆ. 

ಹೀರೋ ಮೊಟೊಕಾರ್ಪ್, ಹಿಂಡಾಲ್ಕೊ, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಬಜಾಜ್ ಫಿನ್‌ಸರ್ವ್, ರಿಲಯನ್ಸ್ ಇಂಡಸ್ಟ್ರೀಸ್, ಐಟಿಸಿ, ಎಸ್‌ಬಿಐ, ಐಒಸಿ, ಭಾರತಿ ಇನ್ಫ್ರಾಟೆಲ್, ಟಾಟಾ ಸ್ಟೀಲ್, ಎಚ್‌ಡಿಎಫ್‌ಸಿ, ವೇದಾಂತ ಮತ್ತು ಅಲ್ಟ್ರಾಟೆಕ್ ಸಿಮೆಂಟ್ ಪ್ರಮುಖ ಕಂಪನಿಗಳ ಷೇರುಗಳು 2 ರಿಂದ 3.6 ಪರ್ಸೆಂಟ್ರಷ್ಟು ಗಳಿಸಿವೆ.

 

4. ತೈಲ ಬೆಲೆಯಲ್ಲಿ ಸ್ಥಿರತೆ

4. ತೈಲ ಬೆಲೆಯಲ್ಲಿ ಸ್ಥಿರತೆ

ಕೊರೊನಾ ವೈರಸ್ ಕಾರಣದಿಂದಾಗಿ ಹಲವಾರು ದೇಶಗಳು ಚೀನಾಕ್ಕೆ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಿದ ನಂತರ ಬೇಡಿಕೆ ಕಡಿಮೆಯಾಗುವ ಭೀತಿಯ ನಡುವೆ ತೈಲ ಬೆಲೆ ತೀವ್ರವಾಗಿ ಕುಸಿದಿದೆ. 85 ರಷ್ಟು ತೈಲ ಅಗತ್ಯವನ್ನು ಆಮದು ಮಾಡಿಕೊಳ್ಳುವ ಭಾರತದಂತಹ ದೇಶಕ್ಕೆ ಅನುಕೂಲಕರ ಅಭಿವೃದ್ಧಿಯಂತೆ ಬ್ರೆಂಟ್ ಕಚ್ಚಾ ತೈಲ ದರವನ್ನು ಬ್ಯಾರೆಲ್‌ಗೆ 55 ಡಾಲರ್‌ಗೆ ಇಳಿಸಿದೆ. ಇದು ಕೂಡ ಷೇರು ಮಾರುಕಟ್ಟೆ ಮೇಲೆ ಪ್ರಭಾವ ಬೀರಿದೆ.

English summary

Sensex Up Over 900 Points, Nifty Near 12,000 Mark

Indian markets hit record highs today with benchmark indices Sensex and Nifty rising in early trade
Story first published: Tuesday, February 4, 2020, 15:57 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X