For Quick Alerts
ALLOW NOTIFICATIONS  
For Daily Alerts

ಕಂಪನಿಗಳಿಂದ 1 ಲಕ್ಷ ಕೋಟಿ ರು ಮೌಲ್ಯ ಏರಿಕೆ; RIL, TCSಗೆ ಭಾರಿ ಲಾಭ

|

ಭಾರತದ ಷೇರು ಮಾರುಕಟ್ಟೆಯ ಅತ್ಯಂತ ಮೌಲ್ಯಯುತ ಹತ್ತು ಕಂಪೆನಿಗಳ ಪೈಕಿ ಕಳೆದ ವಾರ(ಅ.09ರ ತನಕ) ಕಂಪನಿಗಳ ಮೌಲ್ಯ ಭಾರಿ ಹೆಚ್ಚಳ ಕಂಡಿದ್ದು, 3 ಕಂಪನಿಗಳು ಮೌಲ್ಯ ಹೆಚ್ಚಿಸಿಕೊಂಡಿವೆ. 10 ಕಂಪನಿಗಳು 1,01,043.69 ಕೋಟಿ ರು ಏರಿಕೆ ಕಂಡಿವೆ. ದೇಶದ ಅತಿದೊಡ್ಡ ಸಂಸ್ಥೆ ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಕಳೆದ ವಾರ ಭಾರಿ ಲಾಭ ಅನುಭವಿಸಿದ ಸಂಸ್ಥೆ ಎನಿಸಿಕೊಂಡಿದೆ.

ಕಳೆದ ವಾರ, ಬೆಂಚ್‌ಮಾರ್ಕ್ 30 ಷೇರು ಬಿಎಸ್‌ಇ ಸೆನ್ಸೆಕ್ಸ್ 764.37 ಪಾಯಿಂಟ್‌ಗಳು ಅಥವಾ ಶೇಕಡಾ 1.33 ಏರಿಕೆ ಕಂಡಿದೆ. ಬುಧವಾರದಂದು ದಸರಾ ಅಂಗವಾಗಿ ಮಾರುಕಟ್ಟೆ ಮುಚ್ಚಲಾಗಿತ್ತು. 10 ಪಟ್ಟಿಯಲ್ಲಿರುವ ಮಿಕ್ಕ ಎಲ್ಲಾ ಸಂಸ್ಥೆಗಳ ಮಾರುಕಟ್ಟೆ ಮೌಲ್ಯ ಭಾರಿ ಹೆಚ್ಚಳ ಕಂಡಿವೆ.

ಈ 5 ಷೇರು ಖರೀದಿಸಿ ಶೇ50ಕ್ಕೂ ಅಧಿಕ ಲಾಭ ಗಳಿಸಿ: ಐಸಿಐಸಿಐಈ 5 ಷೇರು ಖರೀದಿಸಿ ಶೇ50ಕ್ಕೂ ಅಧಿಕ ಲಾಭ ಗಳಿಸಿ: ಐಸಿಐಸಿಐ

ರಷ್ಯಾ- ಉಕ್ರೇನ್ ಯುದ್ಧದ ನಡುವೆ ಜಾಗತಿಕ ಮಾರುಕಟ್ಟೆ ಏರಿಳಿತ ಕಾಣುತ್ತಿದ್ದು, ಜಾಗತಿಕವಾಗಿ ಅನೇಕ ದೇಶಗಳಲ್ಲಿನ ಬ್ಯಾಂಕ್ ಬಡ್ಡಿದರ ಏರಿಕೆ, ಆಮದು -ರಫ್ತು ನಿರ್ಬಂಧ ಮುಂತಾದ ವಿದ್ಯಮಾನ ಎಲ್ಲದರ ಪರಿಣಾಮ ಸ್ಥಳೀಯ ಮಾರುಕಟ್ಟೆಯಲ್ಲಿ ಭಾರಿ ವ್ಯತ್ಯಾಸ ಕಂಡಿವೆ.

ಕಳೆದ ವಾರದಲ್ಲಿ ಹೂಡಿಕೆದಾರರು ಸುರಕ್ಷೆಯ ವಿಧಾನ ಅನುಸರಿಸಿ, ಹೆಚ್ಚಿನ ಹೂಡಿಕೆಗೆ ಮುಂದಾದ ಕಾರಣ 10 ಕಂಪನಿಗಳು ಲಾಭದ ಅನುಭವಿಸಿವೆ. ಯಾವ ಕಂಪನಿ ಮೌಲ್ಯ ಎಷ್ಟಾಗಿದೆ ಎಂಬ ವಿವರ ಮುಂದೆ ಓದಿ..

ಇನ್ಫೋಸಿಸ್ ಮೌಲ್ಯ

ಇನ್ಫೋಸಿಸ್ ಮೌಲ್ಯ

ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆ ಮೌಲ್ಯ 37,581.61 ಕೋಟಿ ರು ಏರಿಕೆ ಕಂಡು 16,46,182.66 ಕೋಟಿ ರು ತಲುಪಿದೆ. ದೇಶದ ಅತಿದೊಡ್ಡ ಸಾಫ್ಟ್ ವೇರ್ ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಮೌಲ್ಯ 22,082.37 ಕೋಟಿ ರು ಹೆಚ್ಚಳ ಕಂಡು 11,21,480.95 ಕೋಟಿ ರು ಮುಟ್ಟಿದೆ. ದೇಶದ ಎರಡನೇ ಅತಿದೊಡ್ಡ ಐಟಿ ಸಂಸ್ಥೆ ಇನ್ಫೋಸಿಸ್ ಮೌಲ್ಯ 16,263.25 ಕೋಟಿ ರು ಏರಿಕೆ ಕಂಡು 6,10,871.36 ಕೋಟಿ ರು ಮುಟ್ಟಿದೆ. ಐಸಿಐಸಿಐ ಬ್ಯಾಂಕ್ 13,433.27 ಕೋಟಿ ರು ಕುಸಿತ ಕಂಡು 6,14,589.87 ಕೋಟಿ ರು ತಲುಪಿದೆ

ಎಚ್ ಡಿ ಎಫ್ ಸಿ ಬ್ಯಾಂಕ್

ಎಚ್ ಡಿ ಎಫ್ ಸಿ ಬ್ಯಾಂಕ್

ಎಚ್ ಡಿ ಎಫ್ ಸಿ 6,733.19 ಕೋಟಿ ರು ಏರಿಕೆ ಕಂಡು 4,22,810.22 ಕೋಟಿ ರು ತಲುಪಿದೆ. ಎಚ್ ಡಿ ಎಫ್ ಸಿ ಬ್ಯಾಂಕ್ 4,623.07 ಕೋಟಿ ರು ಇಳಿಕೆ ಕಂಡು 7,96,894.04 ಕೋಟಿ ರು ತಲುಪಿದೆ.

ಹಿಂದೂಸ್ತಾನ್ ಯೂನಿಲಿವರ್
 

ಹಿಂದೂಸ್ತಾನ್ ಯೂನಿಲಿವರ್

ಹಿಂದೂಸ್ತಾನ್ ಯೂನಿಲಿವರ್ ಸಂಸ್ಥೆ ಮೌಲ್ಯ 23,025.99 ಕೋಟಿ ರು ಇಳಿಕೆ ಕಂಡು 6,10,623.53 ಕೋಟಿ ರು ತಲುಪಿದೆ. ಆಗಸ್ಟ್ 30ರಂದು ಷೇರುಪೇಟೆಗೆ ಎಂಟ್ರಿ ಕೊಟ್ಟ ಅದಾನಿ ಟ್ರಾನ್ಸ್ ಮಿಷನ್ ಟಾಪ್ 10 ಅತಿ ಹೆಚ್ಚು ಮೌಲ್ಯಯುತ ಕಂಪನಿಗಳ ಪಟ್ಟಿಯಿಂದ ಹೊರಗುಳಿದಿದೆ.

ಭಾರ್ತಿ ಏರ್ ಟೆಲ್

ಭಾರ್ತಿ ಏರ್ ಟೆಲ್

ಬಜಾಜ್ ಫೈನಾನ್ಸ್ ಸಂಸ್ಥೆ 326.93 ಕೋಟಿ ರು ಸೇರಿಸಿ ಕಂಡು 4,44,563.66 ಕೋಟಿ ರು ಮುಟ್ಟಿದೆ. ಭಾರ್ತಿ ಏರ್ ಟೆಲ್ ಮೌಲ್ಯ3,532.65 ಕೋಟಿ ರು ಕುಸಿತ ಕಂಡು 4,41,386.80 ಕೋಟಿ ರು ಆಗಿದೆ. ಇದೇ ವೇಳೆ ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ ಬಿಐ) 624.73 ಕೋಟಿ ರು ವ್ಯತ್ಯಾಸ ಕಂಡು 4,73,316.78 ಕೋಟಿ ರು ತಲುಪಿದೆ.

ಟಾಪ್ 10 ಕಂಪನಿಗಳು

ಟಾಪ್ 10 ಕಂಪನಿಗಳು

ಟಾಪ್ 10 ಕಂಪನಿಗಳು: ರಿಲಯನ್ಸ್ ಇಂಡಸ್ಟ್ರೀಸ್ ಮತ್ತೊಮ್ಮೆ ಅಗ್ರಸ್ಥಾನದಲ್ಲಿ ಮುಂದುವರೆದಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಎಚ್ ಡಿ ಎಫ್ ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಇನ್ಫೋಸಿಸ್, ಹಿಂದೂಸ್ತಾನ್ ಯೂನಿಲಿವರ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ,ಬಜಾಜ್ ಫೈನಾನ್ಸ್, ಭಾರ್ತಿ ಏರ್ ಟೆಲ್ ಹಾಗೂ ಎಚ್ ಡಿ ಎಫ್ ಸಿ.

English summary

Seven of top-10 firms add Rs 1 lakh-crore in M-cap; RIL, TCS biggest gainers

Mcap of 7 of top-10 firms: Reliance Industries Ltd climbs Rs 37,581.61 crore to reach Rs 16,46,182.66 crore, while Tata Consultancy Services adds Rs 22,082.37 crore, taking its valuation to Rs 11,21,480.95 crore
Story first published: Sunday, October 9, 2022, 14:41 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X