For Quick Alerts
ALLOW NOTIFICATIONS  
For Daily Alerts

Breaking News: ಆರ್‌ಬಿಐ ಗವರ್ನರ್ ಆಗಿ ಶಕ್ತಿಕಾಂತ್ ದಾಸ್ ಮರುನೇಮಕ

|

ನವದೆಹಲಿ, ಅಕ್ಟೋಬರ್ 29: ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಸ್ಥಾನಕ್ಕೆ ಶಕ್ತಿಕಾಂತ್ ದಾಸ್ ರನ್ನು ಮರು ನೇಮಕಗೊಳಿಸಲಾಗಿದೆ. ಮೂರು ವರ್ಷಗಳ ಅವಧಿಗೆ ಮರುನೇಮಕಗೊಳಿಸಿ ಸಂಪುಟ ನೇಮಕಾತಿ ಸಮಿತಿ ಅನುಮೋದನೆ ನೀಡಿದೆ.

ಪ್ರಸ್ತುತ ಆರ್‌ಬಿಐ ಗವರ್ನರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಶಕ್ತಿಕಾಂತ್ ದಾಸ್ ಅಧಿಕಾರವಧಿ 2021ರ ಡಿಸೆಂಬರ್ 10ಕ್ಕೆ ಅಂತ್ಯಗೊಳ್ಳಲಿದೆ. ಅಲ್ಲಿಂದ ಮುಂದಿನ ಮೂರು ವರ್ಷಗಳವರೆಗೂ ಅವರೇ ಆರ್‌ಬಿಐ ಗವರ್ನರ್ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ.

ಆರ್‌ಬಿಐ ಹಣಕಾಸು ನೀತಿ: ರೆಪೋ, ರಿವರ್ಸ್ ರೆಪೋ ದರದಲ್ಲಿ ಬದಲಾವಣೆ ಇಲ್ಲ

"10.12.2021ರ ನಂತರ ಮೂರು ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ, ಶಕ್ತಿಕಾಂತ ದಾಸ್ ಅವರನ್ನು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಆಗಿ ಮರುನೇಮಕ ಮಾಡಲು ಸಂಪುಟದ ನೇಮಕಾತಿ ಸಮಿತಿಯು ಅನುಮೋದಿಸಿದೆ," ಎಂದು ಅಧಿಕೃತ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

Breaking News: ಆರ್‌ಬಿಐ ಗವರ್ನರ್ ಆಗಿ ಶಕ್ತಿಕಾಂತ್ ದಾಸ್ ಮರುನೇಮಕ

2018ರಲ್ಲಿ ಶಕ್ತಿಕಾಂತ್ ದಾಸ್ ನೇಮಕ:

ಕಳೆದ 2018ರ ಡಿಸೆಂಬರ್ 12ರಂದು ಭಾರತೀಯ ರಿಸರ್ವ್ ಬ್ಯಾಂಕಿನ 25ನೇ ಗವರ್ನರ್ ಆಗಿ ಶಕ್ತಿಕಾಂತ್ ದಾಸ್ ಅಧಿಕಾರ ವಹಿಸಿಕೊಂಡಿದ್ದರು. ಈ ಹಿಂದೆ ಹಣಕಾಸು ಸಚಿವಾಲಯದಲ್ಲಿ ಕಂದಾಯ ಇಲಾಖೆ ಮತ್ತು ಆರ್ಥಿಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದರು.

ಆಡಳಿತದ ವಿವಿಧ ಕ್ಷೇತ್ರಗಳಲ್ಲಿ ಶಕ್ತಿಕಾಂತ್ ದಾಸ್ ಅಪಾರ ಅನುಭವ ಹೊಂದಿದ್ದಾರೆ. 38 ವರ್ಷಗಳ ವೃತ್ತಿಜೀವನದಲ್ಲಿ, ಹಣಕಾಸು, ತೆರಿಗೆ, ಕೈಗಾರಿಕೆಗಳು, ಮೂಲಸೌಕರ್ಯ, ಇತ್ಯಾದಿ ಕ್ಷೇತ್ರಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನೇಕ ಪ್ರಮುಖ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ದಾಸ್ ಅಡಿಯಲ್ಲಿ, ಕೋವಿಡ್ -19 ಸಾಂಕ್ರಾಮಿಕದ ಕಾಲದಲ್ಲಿ ಹಣದ ಹರಿವಿಗೆ ಮುಖ್ಯವಾದ ರೆಪೋ ದರದ ಪ್ರಮಾಣವನ್ನು ಸರಾಗಗೊಳಿಸಲಾಗಿದೆ.

2020 ರ ಆರಂಭದಲ್ಲಿ 115 ಬೇಸಿಸ್ ಪಾಯಿಂಟ್‌ಗಳಿಂದ (ಬಿಪಿಎಸ್) ಕಡಿತಗೊಳಿಸಿದ ನಂತರ ರೆಪೊ ದರವು ಮೇ 2020 ರಿಂದ ದಾಖಲೆಯ 4 ಪ್ರತಿಶತದಷ್ಟು ಕಡಿಮೆಯಾಗಿದೆ, ಆದರೆ ರಿವರ್ಸ್ ರೆಪೊ ದರವನ್ನು 155 ಬಿಪಿಎಸ್‌ನಿಂದ ಶೇಕಡಾ 3.35 ಕ್ಕೆ ಇಳಿಸಲಾಗಿದೆ. ರೆಪೊ ದರವು RBI ಬ್ಯಾಂಕುಗಳಿಗೆ ಹಣವನ್ನು ನೀಡುವ ದರವಾಗಿದೆ; ರಿವರ್ಸ್ ರೆಪೋ ದರವು ಕೇಂದ್ರ ಬ್ಯಾಂಕ್ ಬ್ಯಾಂಕುಗಳಿಂದ ಹಣವನ್ನು ಎರವಲು ಪಡೆಯುವ ದರವಾಗಿದೆ.

English summary

Shaktikanta Das Reappointed as Reserve Bank of India Governor

Shaktikanta Das Reappointment as Reserve Bank of India Governor for Next 3 Years Period: Know More.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X