ನೆಟ್‌ಫ್ಲಿಕ್ಸ್ ಪಾಸ್‌ವರ್ಡ್ ಶೇರಿಂಗ್ ಶೀಘ್ರ ಈ ದೇಶದಲ್ಲಿ ಕಾನೂನುಬಾಹಿರ!
ನೆಟ್‌ಫ್ಲಿಕ್ಸ್, ಪ್ರೈಮ್, ಹಾಟ್‌ಸ್ಟಾರ್, ವೂಟ್ ಯಾವುದೇ ಆನ್‌ಲೈನ್ ಸ್ಟ್ರೀಮಿಂಗ್ ಆಪ್‌ಗಳಲಾಗಲಿ, ಒಮ್ಮೆ ನಾವು ಲಾಗಿನ್ ಆದರೆ ನಮ್ಮ ಕುಟುಂಬಸ್ಥರೊಗೆ ಅಥವಾ ಸ್ನೇಹಿತರಿಗೆ ಅದರ ಪಾಸ್‌ವರ್ಡ್ ನೀಡುವುದು ಅಭ್ಯಾಸವಾಗಿದೆ. ಇನ್ನೂ ಕೆಲವು ಸ್ನೇಹಿತರು ಹಣವನ್ನು ಶೇರಿಂಗ್ ಮಾಡಿಕೊಂಡು ನೆಟ್‌ಫ್ಲಿಕ್ಸ್ ಪಾಸ್‌ವರ್ಡ್ ಅನ್ನು ಕೂಡಾ ಶೇರಿಂಗ್ ಮಾಡುತ್ತಾರೆ. ಆದರೆ ಈ ಒಂದು ದೇಶದಲ್ಲಿ ಶೀಘ್ರವೇ ನೆಟ್‌ಫ್ಲಿಕ್ಸ್ ಪಾಸ್‌ವರ್ಡ್ ಶೇರಿಂಗ್ ಕಾನೂನುಬಾಹಿರವಾಗಲಿದೆ.
ಇಂಟಾಲ್ಯಾಕ್ಚುವಲ್ ಪ್ರಾಪರ್ಟಿ ಆಫೀಸ್ (ಐಪಿಒ) ಪ್ರಕಾರ ನೆಟ್‌ಫ್ಲಿಕ್ಸ್ ಪಾಸ್‌ವರ್ಡ್ ಅನ್ನು ಕುಟುಂಬ ಸದಸ್ಯರೊಂದಿಗೆ ಆಗಲಿ ಅಥವಾ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದು ಯುನೈಟೆಡ್ ಕಿಂಗ್‌ಡಮ್ ಅಥವಾ ಯುಕೆಯಲ್ಲಿ ಶೀಘ್ರದಲ್ಲೇ ಕಾನೂನುಬಾಹಿರವಾಗಲಿದೆ. ಅಂದರೆ ಒಬ್ಬ ವ್ಯಕ್ತಿ ಮಾತ್ರ ನೆಟ್‌ಫ್ಲಿಕ್ಸ್‌ನ ಪಾಸ್‌ವರ್ಡ್ ಅನ್ನು ಹೊಂದಿರಬೇಕು.
ಐಪಿಒ ಪ್ರಕಾರ ನೆಟ್‌ಫ್ಲಿಕ್ಸ್ ಪಾಸ್‌ವರ್ಡ್ ಶೇರಿಂಗ್ ಕಾನೂನುಬಾಹಿರ ಮಾತ್ರವಲ್ಲದೆ ಅದನ್ನು ಕ್ರೈಮ್ ಎಂದು ಕೂಡಾ ಪರಿಗಣಿಸಲಾಗುತ್ತದೆ. ಹಾಗೆಯೇ ಇದು ಕಾಪಿರೈಟ್ ಕೇಸ್ ಕೂಡಾ ಆಗಲಿದೆ. ಸದ್ಯ ಈ ಕಾನೂನನ್ನು ಜಾರಿಗೆ ತರುವ ಬಗ್ಗೆ ಯುಕೆಯಲ್ಲಿ ಚರ್ಚೆ ನಡೆಯುತ್ತಿದೆ. ಶೀಘ್ರವೇ ಜಾರಿಗೆ ಬರುವ ಸಾಧ್ಯತೆಯಿದೆ.

ಯಾಕಾಗಿ ಈ ನಿರ್ಧಾರ?
ನೆಟ್‌ಫ್ಲಿಕ್ಸ್‌ನ ಪಾಸ್‌ವರ್ಡ್ ಅನ್ನು ಶೇರಿಂಗ್ ಮಾಡಿಕೊಳ್ಳುವ ಕಾರಣದಿಂದಾಗಿ ನೆಟ್‌ಫ್ಲಿಕ್ಸ್ ಚಂದಾದಾರಿಕೆ ಸಂಖ್ಯೆಯು ಕಡಿಮೆಯಾಗುತ್ತಿದೆ. ಇದನ್ನು ಗಮನಿಸಿದ ನೆಟ್‌ಫ್ಲಿಕ್ಸ್ ಪಾಸ್‌ವರ್ಡ್ ಅನ್ನು ಶೇರಿಂಗ್ ಮಾಡುವುದಕ್ಕೆ ಹೆಚ್ಚುವರಿ ಶುಲ್ಕವನ್ನು ವಿಧಿಸಲಾಗುತ್ತದೆ ಎಂದು ಹೇಳಿತ್ತು.
"ನಿಮ್ಮ ಆಪ್‌ನ ಗೌಪ್ಯ ಮಾಹಿತಿಯನ್ನು ಇಂಟರ್‌ನೆಟ್ ಮೂಲಕ ಶೇರ್ ಮಾಡುವುದು, ಟಿವಿ ಸಿರೀಸ್ ಅಥವಾ ಲೈವ್ ಸ್ಪೋರ್ಟ್ಸ್, ಸಿನಿಮಾ ನೋಡಲು ಅವಕಾಶ ನೀಡುವುದು ಕಾಪಿರೈಟ್ ಆಗಿದೆ. ನೀವು ಕ್ರೈಮ್ ಮಾಡಿದಂತೆ ಆಗುತ್ತದೆ," ಎಂದು ಐಪಿಒ ಕಳೆದ ವಾರ ಹೇಳಿದೆ.
ಈ ಹಿಂದೆ ಪಾಸ್‌ವರ್ಡ್ ಶೇರಿಂಗ್ ಎಂದು ಉಲ್ಲೇಖ ಮಾಡಲಾಗಿತ್ತು. ಆದರೆ ಐಪಿಒ ಕೂಡಲೇ ಇದನ್ನು ಡಿಲೀಟ್ ಮಾಡಿದೆ. ಅದಾದ ಬಳಿಕ ವಕ್ತಾರರು ಕಾನೂನು ಹಾಗೆಯೇ ಇರಲಿದೆ ಎಂದು ತಿಳಿಸಿದ್ದಾರೆ. ಹಾಗೆಯೇ ಸ್ಟ್ರೀಮಿಂಗ್ ಸಂಸ್ಥೆಯು ಕಾನೂನು ಕ್ರಮಕ್ಕೆ ಮುಂದಾಗಲೂ ಅರ್ಹವಾಗಿದೆ ಎಂದು ಕೂಡಾ ತಿಳಿಸಿದೆ.
ಯುಕೆಯಲ್ಲಿ ನೆಟ್‌ಫ್ಲಿಕ್ಸ್ ಪಾಸ್‌ವರ್ಡ್ ಅನ್ನು ಬೇರೆಯವರೊಂದಿಗೆ ಹಂಚಿಕೊಂಡರೆ ಅದಕ್ಕೆ ದಂಡವನ್ನು ಕೂಡಾ ತೆರಬೇಕಾಗಬಹುದು. ಇನ್ನು ನೆಟ್‌ಫ್ಲಿಕ್ಸ್ ಮೊದಲ ತ್ರೈಮಾಸಿಕದಲ್ಲಿ ವರದಿ ಸಲ್ಲಿಸುತ್ತಾ ವಿಶ್ವದಾದ್ಯಂತ ಸುಮಾರು 100 ಮಿಲಿಯನ್‌ಗೂ ಅಧಿಕ ಮಂದಿ ಪಾಸ್‌ವರ್ಡ್ ಅನ್ನು ಶೇರ್ ಮಾಡಿಕೊಂಡು ಬಳಸುತ್ತಿದ್ದಾರೆ. ಇದು ನಮ್ಮ ಆದಾಯದ ಮೇಲೆ ತೀವ್ರ ಪರಿಣಾಮ ಉಂಟು ಮಾಡುತ್ತಿದೆ ಎಂದು ಹೇಳಿದೆ.