For Quick Alerts
ALLOW NOTIFICATIONS  
For Daily Alerts

Sheshnag ರೈಲು: 2.8 ಕಿ.ಮೀ. ಉದ್ದದ ರೈಲು ಓಡಿಸಿ ಹೊಸ ದಾಖಲೆ

|

ಆಗ್ನೇಯ ಕೇಂದ್ರ ರೈಲ್ವೆ ವಲಯ ಹೊಸ ದಾಖಲೆ ಬರೆದಿದೆ. ಇದು ಭಾರತೀಯ ರೈಲ್ವೆಯ ಸಾಧನೆ ಅಂತಲೇ ಕರೆದುಕೊಳ್ಳುವುದಕ್ಕೆ ಅಡ್ಡಿ ಇಲ್ಲ. ಈ ರೈಲಿಗೆ (ಸಾಹಸಕ್ಕೆ) ಶೇಷನಾಗ್ ಎಂದು ಹೆಸರಿಡಲಾಗಿತ್ತು. ಆ ಮೂಲಕ 2.8 ಕಿ.ಮೀ. ಉದ್ದದ ರೈಲನ್ನು ಓಡಿಸಿತು. ಈ ಶೇಷ್ ನಾಗ್ ರೈಲಿಗೆ ನಾಲ್ಕು ಸೆಟ್ ಎಲೆಕ್ಟ್ರಿಕ್ ಲೋಕೋಮೋಟಿವ್ ಗಳಿದ್ದವು.

ಹಳಿಗಳ ಮೇಲಿನ್ನು ಖಾಸಗಿ ರೈಲುಗಳು; ಆರಂಭ ಯಾವಾಗ ಗೊತ್ತಾ?ಹಳಿಗಳ ಮೇಲಿನ್ನು ಖಾಸಗಿ ರೈಲುಗಳು; ಆರಂಭ ಯಾವಾಗ ಗೊತ್ತಾ?

ನಾಲ್ಕು ರೈಲುಗಳನ್ನು ಒಟ್ಟು ಮಾಡಿ, ಒಂದೇ ಸಲಕ್ಕೆ ಓಡಿಸಲಾಯಿತು. ಭಾರತೀಯ ರೈಲ್ವೆಯ ಇತಿಹಾಸದಲ್ಲೇ ಇದು ಮೊದಲು. 2.8 ಕಿ.ಮೀ. ಉದ್ದ ಇದ್ದ ಈ ರೈಲು ಹೊಸ ದಾಖಲೆ ಬರೆದಿದೆ ಎಂದು ರೈಲ್ವೆ ಸಚಿವಾಲಯ ಮಾಹಿತಿ ನೀಡಿದೆ. ನಾಲ್ಕು ಖಾಲಿ BOXN ರೇಕ್ ಗಳನ್ನು ಒಟ್ಟು ಮಾಡಲಾಗಿತ್ತು.

Sheshnag ರೈಲು: 2.8 ಕಿ.ಮೀ. ಉದ್ದದ ರೈಲು ಓಡಿಸಿ ಹೊಸ ದಾಖಲೆ

ಈ ರೈಲು ಸಾಗಿರುವುದರ ವಿಡಿಯೋ ಕೂಡ ರೈಲ್ವೆ ಸಚಿವಾಲಯ ಹಂಚಿಕೊಂಡಿದೆ. ಇದಕ್ಕೆ ಯಾಕೆ ಈ ಹೆಸರು ಇಡಲಾಗಿತ್ತು ಎಂಬುದು ಇದನ್ನು ನೋಡಿದರೆ ಪಕ್ಕಾ ಆಗುತ್ತದೆ. ಸಾಮಾನ್ಯವಾಗಿ ರೈಲ್ವೆ ಕ್ರಾಸಿಂಗ್ ಬಳಿ ಒಂದು ರೈಲು ಹಾದು ಹೋಗುವುದನ್ನು ನೋಡಿದ್ದರೆ, 2.8 ಕಿಲೋಮೀಟರ್ ಉದ್ದದ ರೈಲು ಸಾಗಿ ಹೋಗುವುದಕ್ಕೆ ಎಷ್ಟು ಸಮಯ ತೆಗೆದುಕೊಳ್ಳಬಹುದು ಎಂಬ ಕುತೂಹಲ ತೆರೆದುಕೊಳ್ಳುತ್ತದೆ.

ಈಚೆಗೆ ಇದೇ ವಲಯದಿಂದ ಮತ್ತೊಂದು ಸಾಧನೆ ಆಗಿತ್ತು. ಭರ್ತಿಯಾದ ಮೂರು ಸರಕು ರೈಲನ್ನು ಒಗ್ಗೂಡಿಸಿ, ಓಡಿಸಿತ್ತು. 15 ಸಾವಿರ ಟನ್ ಗೂ ಹೆಚ್ಚು ತೂಕದ ಸರಕನ್ನು ಹೊತ್ತೊಯ್ದಿತ್ತು. ಇದು ಬಿಲಾಸ್ ಪುರ್ ಮತ್ತು ಚಕ್ರಧರ್ ಪುರ್ ವಿಭಾಗದ ಮಧ್ಯೆ ಸಂಚರಿಸಿತ್ತು. ಇನ್ನು OHE ವಿಭಾಗದಲ್ಲಿ ಡಬಲ್ ಸ್ಟ್ಯಾಕ್ ಕಂಟೇನರ್ ಹೊತ್ತೊಯ್ದು ದಾಖಲೆ ಬರೆದಿದೆ. ಪಲಾನ್ ಪುರ್ ಮತ್ತು ಬೋತದ್ ರೈಲು ನಿಲ್ದಾಣದ ಮಧ್ಯೆ ಜೂನ್ 10ರಂದು ಸಂಚರಿಸಿತ್ತು.

English summary

Sheshnag: 2.8 KM Long Rail Operated By South East Central Railway Zone

Sheshnag, a train name, operated by South East Central railway zone. It is a longest (2.8 KM) train in the history of Indian Railways.
Story first published: Friday, July 3, 2020, 16:17 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X