For Quick Alerts
ALLOW NOTIFICATIONS  
For Daily Alerts

ಮಹಿಳೆಯರಿಗೆ ವಾರ್ಷಿಕ ಕನಿಷ್ಠ ಒಂದು ಲಕ್ಷ ರೂಪಾಯಿ ಗಳಿಸಲು ಅವಕಾಶ

|

ನವದೆಹಲಿ, ಅಕ್ಟೋಬರ್ 31: ಮಹಿಳೆಯರನ್ನು ಉನ್ನತ ಆರ್ಥಿಕ ಕ್ರಮಕ್ಕೆ ಕೊಂಡೊಯ್ಯಲು ಗ್ರಾಮೀಣಾಭಿವೃದ್ಧಿ ಸಚಿವಾಲಯವು ಗ್ರಾಮೀಣ ಎಸ್ಎಚ್‌ಜಿ ಮಹಿಳೆಯರಿಗೆ ವಾರ್ಷಿಕ ಕನಿಷ್ಠ ರೂ.1 ಲಕ್ಷ ಗಳಿಸಲು ಅವಕಾಶ ಮಾಡಿಕೊಡುವ ಸ್ವಸಹಾಯ ಗುಂಪುಗಳ (ಎಸ್ಎಚ್‌ಜಿ ) ಮಹಿಳೆಯರನ್ನು ಲಕ್ಷಾಧಿಪತಿಯರನ್ನಾಗಿ ಮಾಡುವ ಉಪಕ್ರಮವನ್ನು ಪ್ರಾರಂಭಿಸಿದೆ.

ಈ ಮಹತ್ವಾಕಾಂಕ್ಷೆಯ ಗುರಿಯ ಸಾಕಾರಕ್ಕಾಗಿ ಸಚಿವಾಲಯವು ಮುಂದಿನ 2 ವರ್ಷಗಳಲ್ಲಿ 25 ದಶಲಕ್ಷ ಗ್ರಾಮೀಣ ಸ್ವಸಹಾಯ ಗುಂಪು ಮಹಿಳೆಯರಿಗೆ ಜೀವನೋಪಾಯದ ಬೆಂಬಲವನ್ನು ಕಲ್ಪಿಸಿದೆ. ದೇಶಾದ್ಯಂತ ಇರುವ ವಿವಿಧ ಮಾದರಿಗಳನ್ನು ಆಧರಿಸಿ, ರಾಜ್ಯ ಸರ್ಕಾರಗಳಿಗೆ ವಿವರವಾದ ಸಲಹೆಯನ್ನು ನೀಡಲಾಗಿದೆ. 28ನೇ ಅಕ್ಟೋಬರ್, 2021 ರಂದು ಈ ವಿಷಯದ ಕುರಿತು ಹೆಚ್ಚಿನ ಚರ್ಚೆಗಾಗಿ ರಾಜ್ಯಗಳು, ಬಿಎಮ್ಜಿಎಫ್ (ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್) ಮತ್ತು ಟಿಆರ್‌ಇಎಫ್ (ಟ್ರಾನ್ಫೋಮೇಷನ್ ರೂರಲ್ ಇಂಡಿಯಾ ಫೌಂಡೇಶನ್) ಜೊತೆಗೆ ಪಾಲುದಾರರ ಸಮಾಲೋಚನಾ ಕಾರ್ಯಾಗಾರವನ್ನು ನಡೆಸಲಾಯಿತು.

ಇತ್ತೀಚೆಗೆ ನಡೆದ ಸಮಾಲೋಚನೆಯಲ್ಲಿ, ಕೃಷಿ ಮತ್ತು ಅದಕ್ಕೆ ಸಂಬಂಧಿತ , ಜಾನುವಾರು, ಎನ್ಟಿಎಫ್ಪಿ (ಮರವಲ್ಲದ ಇತರ ಅರಣ್ಯ ಉತ್ಪನ್ನಗಳು) ಮತ್ತು ಒಮ್ಮುಖದ ಮೂಲಕ ಇತರ ಮಧ್ಯಸ್ಥಿಕೆಗಳಿಂದ ಹಿಡಿದು ಮನೆಯ ಮಟ್ಟದಲ್ಲಿ ಜೀವನೋಪಾಯದ ಚಟುವಟಿಕೆಗಳನ್ನು ವೈವಿಧ್ಯಗೊಳಿಸಲು ಉತ್ತಮ ಯೋಜಿತ ಮಧ್ಯಸ್ಥಿಕೆಗಳ ಪ್ರಾಮುಖ್ಯವನ್ನು ವಾರ್ಷಿಕವಾಗಿ ನಿರಂತರ ಆಧಾರದ ಮೇಲೆ 1 ಲಕ್ಷ ರೂಪಾಯಿ ಆದಾಯವನ್ನು ಸಾಕಾರಗೊಳಿಸಲು ಒತ್ತಿಹೇಳಲಾಯಿತು.

ಕ್ಲಸ್ಟರ್ ಮಟ್ಟದ ಒಕ್ಕೂಟ

ಕ್ಲಸ್ಟರ್ ಮಟ್ಟದ ಒಕ್ಕೂಟ

ಈ ರೀತಿಯ ಮಧ್ಯಸ್ಥಿಕೆಗಳಿಗೆ ಬೆಂಬಲ ನೀಡಲು ಸ್ವಸಹಾಯ ಗುಂಪುಗಳ, ಗ್ರಾಮ ಸಂಸ್ಥೆ ಮತ್ತು ಕ್ಲಸ್ಟರ್ ಮಟ್ಟದ ಒಕ್ಕೂಟಗಳನ್ನು ಬಲಪಡಿಸುವ ಪ್ರಾಮುಖ್ಯವನ್ನು ಸಹ ಎತ್ತಿ ತೋರಿಸಲಾಯಿತು ಮತ್ತು ಒತ್ತಿಹೇಳಲಾಯಿತು. ವಿವಿಧ ಕ್ಷೇತ್ರಗಳಲ್ಲಿ ತರಬೇತಿ ಪಡೆದ ಎಸ್ ಹೆಚ್ ಜಿ ಸದಸ್ಯರ ಸಮರ್ಪಿತ ಸಮುದಾಯ ಪಡೆಗಳು ಅವರ ಗುರಿಯನ್ನು ಸಾಧಿಸುವಲ್ಲಿ ಸಹಕಾರಿಯಾಗುತ್ತವೆ. ಈ ಮಧ್ಯಸ್ಥಿಕೆಯಲ್ಲಿ ಸಿವಿಲ್ ಸೊಸೈಟಿ ಸಂಸ್ಥೆಗಳು, ಕೆವಿಕೆಗಳು (ಕೃಷಿ ವಿಜ್ಞಾನ ಕೇಂದ್ರಗಳು) ಮತ್ತು ಇತರ ಖಾಸಗಿ ಮಾರುಕಟ್ಟೆಯವರ ಪಾತ್ರ ನಿರ್ಣಾಯಕವಾಗಿದೆ. ಈ ಪಾಲುದಾರಿಕೆಗಳನ್ನು ಪ್ರೋತ್ಸಾಹಿಸಲು ಮತ್ತು ರೂಪಿಸಲು ರಾಜ್ಯಗಳಿಗೆ ಸಲಹೆ ನೀಡಲಾಯಿತು.

ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್

ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್

ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಸಂಪೂರ್ಣ ವ್ಯಾಪ್ತಿಯನ್ನು ಮುಟ್ಟುವ ವಿಧಾನದ ಮೇಲೆ ಕಾರ್ಯನಿರ್ವಹಿಸುತ್ತದೆ. ಇಂದಿನವರೆಗೆ, 6768 ಬ್ಲಾಕ್‌ಗಳನ್ನು ಕಾರ್ಯಕ್ರಮದ ಅಡಿಯಲ್ಲಿ 7.7 ಕೋಟಿ ಮಹಿಳೆಯರನ್ನು 70 ಲಕ್ಷ ಸ್ವಸಹಾಯ ಗುಂಪುಗಳಾಗಿ ಸಜ್ಜುಗೊಳಿಸಲಾಗಿದೆ. ಸ್ವಸಹಾಯ ಗುಂಪುಗಳಿಗೆ ಆರಂಭಿಕ ಬಂಡವಾಳದ ಬೆಂಬಲವನ್ನು ನೀಡುವುದರಿಂದ ವಾರ್ಷಿಕವಾಗಿ ಸುಮಾರು 80 ಸಾವಿರ ಕೋಟಿ ರೂಪಾಯಿಗಳನ್ನು ಜಮಾ ಮಾಡಲಾಗುತ್ತಿದೆ. ಈ ಮಿಷನ್ ಅಡಿಯಲ್ಲಿ, ವರ್ಗ ಮತ್ತು ಜಾತಿಯ ವಿವಿಧ ವಿಭಾಗಗಳ ಬಡ ಮಹಿಳೆಯರು ಸ್ವಸಹಾಯ ಗುಂಪುಗಳು ಮತ್ತು ಅವರ ಒಕ್ಕೂಟಗಳಾಗಿ ರೂಪುಗೊಳ್ಳುತ್ತಾರೆ, ಅವರ ಆದಾಯ ಮತ್ತು ಜೀವನದ ಗುಣಮಟ್ಟವನ್ನು ಹೆಚ್ಚಿಸಲು ತಮ್ಮ ಸದಸ್ಯರಿಗೆ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸೇವೆಗಳನ್ನು ಒದಗಿಸುತ್ತಾರೆ.

ಗೌರವಯುತ ಜೀವನ ಖಾತ್ರಿ

ಗೌರವಯುತ ಜೀವನ ಖಾತ್ರಿ

ಕೆಲವು ವರ್ಷಗಳಲ್ಲಿ ಬ್ಯಾಂಕಿನ ಬಂಡವಾಳದ ಬೆಂಬಲದ ಮೂಲಕ ಗುಂಪುಗಳಿಂದ ಎರವಲು ಪಡೆದ ಈ ಹಣವನ್ನು ಈಗ ವೈವಿಧ್ಯಮಯ ಜೀವನೋಪಾಯದ ಅವಕಾಶಗಳನ್ನು ಸೃಷ್ಟಿಸಲು ಬಳಸಲಾಗುತ್ತಿದೆ. ಈ ಎಲ್ಲಾ ಪ್ರಯತ್ನಗಳು ಸಕಾರಾತ್ಮಕ ಫಲಿತಾಂಶವನ್ನು ಪಡೆಯುತ್ತಿರುವಾಗ, ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರ ಸುಸ್ಥಿರ ಜೀವನೋಪಾಯ ಮತ್ತು ಗೌರವಯುತ ಜೀವನವನ್ನು ಖಾತ್ರಿಪಡಿಸಿಕೊಳ್ಳಲು, ಕುಟುಂಬಕ್ಕೆ ವಾರ್ಷಿಕ ಕನಿಷ್ಠ 1,00,000 ರೂಪಾಯಿಗಳ ಆದಾಯವನ್ನು ಅಂದರ ಲಕ್ಷಾಧಿಪತಿಯಾವುಗುದನ್ನು ಖಾತ್ರಿಪಡಿಸಿಕೊಳ್ಳಲು ಸಂಘಟಿತ ಪ್ರಯತ್ನಗಳನ್ನು ಮಾಡಬೇಕಾಗಿದೆ. ರೂ. 1 ಲಕ್ಷದ ಸಂಖ್ಯೆಯು ಗ್ರಾಮೀಣ ಸ್ವಸಹಾಯ ಗುಂಪು ಮಹಿಳೆಯರಿಗೆ ಮಹತ್ವಾಕಾಂಕ್ಷೆ ಮತ್ತು ಸ್ಫೂರ್ತಿದಾಯಕವಾಗಿದೆ.

ಉನ್ನತ ಮಟ್ಟದ ಆರ್ಥಿಕ ಚಟುವಟಿಕೆ

ಉನ್ನತ ಮಟ್ಟದ ಆರ್ಥಿಕ ಚಟುವಟಿಕೆ

ದೀನದಯಾಳ್ ಅಂತ್ಯೋದಯ ಯೋಜನೆಯು ಗ್ರಾಮೀಣಾಭಿವೃದ್ಧಿ ಸಚಿವಾಲಯದ ಪ್ರಮುಖ ಯೋಜನೆಯಾಗಿದ್ದು, ಗ್ರಾಮೀಣ ಬಡ ಮಹಿಳೆಯರಿಗೆ ಸಾಮರ್ಥ್ಯ ವೃದ್ಧಿಸುವ ಮತ್ತು ವೈವಿಧ್ಯಮಯ ಜೀವನೋಪಾಯದ ಅವಕಾಶಗಳನ್ನು ಸೃಷ್ಟಿಸುವ ಉದ್ದೇಶದಿಂದ ಗ್ರಾಮೀಣ ಬಡವರನ್ನು ಸ್ವ-ಆಡಳಿತ ಸಂಸ್ಥೆಗಳಾಗಿ ಸಂಘಟಿಸುತ್ತದೆ. ಮಹಿಳಾ ಕಿಸಾನ್ ಸಶಕ್ತೀಕರಣ ಪರಿಯೋಜನಾ ಮೂಲಕ ರೈತರಾಗಿ ಮಹಿಳೆಯರ ಪಾತ್ರದ ಮೇಲೆ ಕೇಂದ್ರೀಕರಿಸುವ ಮೂಲಕ ಮಿಷನ್ ಯಶಸ್ವಿ ಪ್ರಗತಿ ಸಾಧಿಸಿದೆ. ಸಮುದಾಯ ಕ್ರೋಢಿಕರಣ ಮತ್ತು ಮಹಿಳೆಯರ ಸಂಸ್ಥೆಗಳನ್ನು ನಿರ್ಮಿಸುವ ಹಂತದಿಂದ, ಈಗ ಉತ್ಪಾದಕ ಗುಂಪುಗಳು, ಎಫ್ಪಿಒ ಗಳು ಮತ್ತು ಉತ್ಪಾದಕ ಕಂಪನಿಗಳ ಮೂಲಕ ಉನ್ನತ ಮಟ್ಟದ ಆರ್ಥಿಕ ಚಟುವಟಿಕೆಗಳಲ್ಲಿ ಸ್ವ ಸಹಾಯ ಗುಂಪಿನ ಮಹಿಳೆಯರನ್ನು ತೊಡಗಿಸುವುದರತ್ತ ಗಮನ ಹರಿಸಲಾಗಿದೆ.(ಗ್ರಾಮೀಣಾಭಿವೃದ್ಧಿ ಸಚಿವಾಲಯ)

English summary

SHG women on the path of becoming Lakhpatis, earn at least Rs.1 lakh per annum

SHG women on the path of becoming Lakhpatis. Ministry of Rural Development launches an initiative to enable rural SHG women to earn at least Rs.1 lakh per annum.
Story first published: Sunday, October 31, 2021, 11:23 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X