For Quick Alerts
ALLOW NOTIFICATIONS  
For Daily Alerts

ಸವರನ್ ಗೋಲ್ಡ್ ಬಾಂಡ್: ಜುಲೈ 12ಕ್ಕೆ ಚಂದಾದಾರಿಕೆ ಶುರು, ಪ್ರತಿ ಗ್ರಾಂಗೆ 4,807 ರೂಪಾಯಿ

|

ಸವರನ್ ಗೋಲ್ಡ್ ಬಾಂಡ್ ಯೋಜನೆ (2021) ನಾಲ್ಕನೇ ಸೀರಿಸ್ ಚಂದಾದಾರಿಕೆಯು ಜುಲೈ 12ಕ್ಕೆ ಶುರುವಾಗಲಿದೆ. ಈ ಯೋಜನೆಯಡಿ ಜನರಿಗೆ ಚಿನ್ನ ಖರೀದಿಗೆ ಅವಕಾಶ ಸಿಗಲಿದೆ.

 

ಒಟ್ಟು ಆರು ಕಂತುಗಳಲ್ಲಿ ನೀಡಲಾಗುವ ಚಂದಾದಾರಿಕೆಯು ಮೇ 17 ರಿಂದ ಮೊದಲ ಕಂತು ಪ್ರಾರಂಭವಾಯಿತು. ಈಗಾಗಲೇ ಮೂರು ಕಂತು ಮುಗಿದಿದ್ದು, ನಾಲ್ಕನೇ ಹೂಡಿಕೆಯ ಅವಕಾಶ ಜುಲೈ 12ರಂದು ಪ್ರಾರಂಭವಾಗಿ 16ರವರೆಗೆ ನಿಗದಿಯಾಗಿದೆ.

ಜುಲೈ 12 ರಿಂದ ಐದು ದಿನಗಳವರೆಗೆ ಚಂದಾದಾರಿಕೆಗಾಗಿ ತೆರೆಯುವ ಸವರನ್ ಗೋಲ್ಡ್ ಬಾಂಡ್ ಯೋಜನೆ 2021-22ರ ವಿತರಣಾ ದರವನ್ನು ಪ್ರತಿ ಗ್ರಾಂಗೆ, 4,807 ಎಂದು ನಿಗದಿಪಡಿಸಲಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ.

ರಿಸರ್ವ್‌ ಬ್ಯಾಂಕ್ ಇಂಡಿಯಾ ದರ ಪ್ರಕಟಿಸುತ್ತದೆ!

ರಿಸರ್ವ್‌ ಬ್ಯಾಂಕ್ ಇಂಡಿಯಾ ದರ ಪ್ರಕಟಿಸುತ್ತದೆ!

ಸವರನ್ ಗೋಲ್ಡ್ ಬಾಂಡ್ ಯೋಜನೆಯ ದರಗಳನ್ನು ರಿಸರ್ವ್‌ ಬ್ಯಾಂಕ್ ಇಂಡಿಯಾ (ಆರ್‌ಬಿಐ) ಪ್ರಕಟಿಸುತ್ತದೆ. ಇಂಡಿಯಾ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಶನ್‌ನ ವೆಬ್‌ಸೈಟ್‌ನಲ್ಲಿ ಕಳೆದ ವಾರ ಚಿನ್ನದ ದರದ ಆಧಾರದ ಮೇಲೆ ಆರ್‌ಬಿಐ ಸವರನ್‌ ಗೋಲ್ಡ್ ಬಾಂಡ್‌ ದರವನ್ನು ನಿಗದಿಪಡಿಸುತ್ತದೆ. ಆರ್‌ಬಿಐ ಈ ಬಾರಿ ಪ್ರತಿ ಗ್ರಾಂ ಚಿನ್ನಕ್ಕೆ 4,807 ರೂ. ಎಂದು ನಿಗದಿಪಡಿಸಿದೆ.

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವವರಿಗೆ ರಿಯಾಯಿತಿ

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವವರಿಗೆ ರಿಯಾಯಿತಿ

ಇನ್ನು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಹೂಡಿಕೆದಾರರಿಗೆ ನಾಮಮಾತ್ರ ಮೌಲ್ಯಕ್ಕಿಂತ ಪ್ರತಿ ಗ್ರಾಂಗೆ 50 ರೂಪಾಯಿ ರಿಯಾಯಿತಿ ನೀಡಲು ಸರ್ಕಾರ ನಿರ್ಧರಿಸಿದೆ ಮತ್ತು ಅರ್ಜಿಯ ವಿರುದ್ಧ ಪಾವತಿಯನ್ನು ಡಿಜಿಟಲ್ ಮೋಡ್ ಮೂಲಕ ಮಾಡಲಾಗುತ್ತದೆ.

ಚಿನ್ನದ ಬೆಲೆ ಮತ್ತಷ್ಟು ಹೆಚ್ಚಳ: ಜುಲೈ 09ರಂದು ಬೆಲೆ ಎಷ್ಟಿದೆ?

ಸವರನ್ ಗೋಲ್ಡ್ ಬಾಂಡ್ ಖರೀದಿ ಹೇಗೆ?
 

ಸವರನ್ ಗೋಲ್ಡ್ ಬಾಂಡ್ ಖರೀದಿ ಹೇಗೆ?

ಸವರನ್ ಗೋಲ್ಡ್‌ ಬಾಂಡ್‌ಗಳನ್ನು ಖರೀದಿಸಲು ನಿಮ್ಮ ಬ್ಯಾಂಕ್ ಅಥವಾ ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾವನ್ನು ನೀವು ಸಂಪರ್ಕಿಸಬಹುದು. ಇದಲ್ಲದೆ, ಆಯ್ದ ಅಂಚೆ ಕಚೇರಿಗಳ ಮೂಲಕವೂ ಸವರನ್ ಗೋಲ್ಡ್ ಬಾಂಡ್ಗಳಲ್ಲಿ ಹೂಡಿಕೆ ಮಾಡಬಹುದು. ಇದಲ್ಲದೆ ಇದನ್ನು ರಾಷ್ಟ್ರೀಯ ಸ್ಟಾಕ್ ಎಕ್ಸ್‌ಚೇಂಜ್‌ (ಎನ್ಎಸ್ಇ) ಮತ್ತು ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ (ಬಿಎಸ್ಇ) ಯಿಂದಲೂ ಖರೀದಿಸಬಹುದು.

ಸವರನ್ ಗೋಲ್ಡ್‌ ಬಾಂಡ್ ಶೇ. 2.5 ರಷ್ಟು ಬಡ್ಡಿ

ಸವರನ್ ಗೋಲ್ಡ್‌ ಬಾಂಡ್ ಶೇ. 2.5 ರಷ್ಟು ಬಡ್ಡಿ

ಸವರನ್ ಗೋಲ್ಡ್‌ ಬಾಂಡ್‌ಗಳಲ್ಲಿ ಶೇಕಡಾ 2.5 ರಷ್ಟು ಬಡ್ಡಿ ಲಭ್ಯವಿದೆ. ಇದರಲ್ಲಿ ಹೂಡಿಕೆ ಮಾಡುವವರಿಗೆ ವಾರ್ಷಿಕವಾಗಿ ಶೇಕಡಾ 2.5ರಷ್ಟು ಬಡ್ಡಿಯನ್ನು ಸಹ ನೀಡಲಾಗುತ್ತದೆ. ಅಂದರೆ, ಒಬ್ಬ ವ್ಯಕ್ತಿಯು ಸವರನ್ ಗೋಲ್ಡ್‌ ಬಾಂಡ್‌ನಲ್ಲಿ 1 ಲಕ್ಷ ರೂ. ಹೂಡಿಕೆ ಮಾಡಿದರೆ, ಅವನಿಗೆ ಪ್ರತಿ ವರ್ಷ 2500 ರೂ. ಬಡ್ಡಿ ಸಿಗಲಿದ್ದು, 8 ವರ್ಷಗಳವರೆಗೆ ಲಭ್ಯವಿದೆ. ಇನ್ನು ಸವರನ್ ಗೋಲ್ಡ್‌ ಬಾಂಡ್‌ನ ಮುಕ್ತಾಯ ಅವಧಿ 8 ವರ್ಷಗಳು ಮಾತ್ರ. ಆದಾಗ್ಯೂ, ಹೂಡಿಕೆದಾರರಿಗೆ 5 ವರ್ಷಗಳ ನಂತರ ಅದನ್ನು ಮಾರಾಟ ಮಾಡುವ ಸ್ವಾತಂತ್ರ್ಯವಿದೆ.

English summary

Sovereign Gold Bond Opens 12 July: Issue Price Fixed At Rs 4807 Per Gram

The issue price for Sovereign Gold Bond Scheme 2021-22, which will open for subscription for five days from 12 July, has been fixed at Rs 4,807 per gram
Story first published: Saturday, July 10, 2021, 12:52 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X