For Quick Alerts
ALLOW NOTIFICATIONS  
For Daily Alerts

SDR ಕರೆನ್ಸಿ ಬಗ್ಗೆ ಐಎಂಎಫ್ ಆರ್ಥಿಕ ತಜ್ಞೆ ಗೀತಾ ಗೋಪಿನಾಥ್ ಅಸಮಾಧಾನ

|

ಕೊರೊನಾವೈರಸ್ ಲಾಕ್‌ಡೌನ್ ಪರಿಣಾಮವಾಗಿ ಅನೇಕ ದೇಶಗಳಿಗೆ ಆರ್ಥಿಕ ಬಿಕ್ಕಟ್ಟು ಸಂಭವಿಸಿದೆ. ಹೀಗೆ ಉದ್ಭವಿಸಿರುವ ಆರ್ಥಿಕ ಬಿಕ್ಕಟ್ಟಿನ ನಿವಾರಣೆಗೆ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಕಡಿಮೆ ಆದಾಯದ ದೇಶಗಳಿಗೆ special drawing rights (SDR) currencies ನೀಡುವ ಪ್ರಸ್ತಾವನೆಯನ್ನು ಮುಂದಿಟ್ಟಿತ್ತು.

ಆದರೆ, ಈ ಪ್ರಸ್ತಾವನೆಯನ್ನು ಮುಂದುವರೆದ ದೇಶಗಳು ವಿರೋಧಿಸಿದ್ದವು. ಈ ಬಗ್ಗೆ ಹೇಳಿಕೆ ನೀಡಿರುವ ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಮುಖ್ಯ ಆರ್ಥಿಕ ತಜ್ಞೆ, ಭಾರತ ಮೂಲದ ಗೀತಾ ಗೋಪಿನಾಥ್ ಅವರು, ಎಸ್‌ಡಿಆರ್ ಹಂಚಿಕೆ ವಿಷಯದ ಬಗ್ಗೆ ಸದ್ಯ ಚರ್ಚಿಸಲಾಗುತ್ತಿದೆ ಮತ್ತು ಈ ಹಂತದಲ್ಲಿ ಯಾವುದೇ ಒಮ್ಮತವಿಲ್ಲ ಎಂದು ಹಣಕಾಸು ಸಂಸ್ಥೆಯ ವೆಬಿನಾರ್‌ ಒಂದರಲ್ಲಿ ಹೇಳಿದ್ದಾರೆ.

 ದೇಶದ ಜನತೆಗೆ ಶಾಕ್ ಕೊಟ್ಟ ಕೇಂದ್ರ ಹಣಕಾಸು ಸಚಿವಾಲಯ ದೇಶದ ಜನತೆಗೆ ಶಾಕ್ ಕೊಟ್ಟ ಕೇಂದ್ರ ಹಣಕಾಸು ಸಚಿವಾಲಯ

ಎಸ್‌ಡಿಆರ್‌ ಹಂಚಿಕೆ ಮಾಡುವುದು ಬಂದಾಗ ಕೋಟಾ ಅನುಪಾತದಡಿ ಆರ್ಥಿಕವಾಗಿ ಮುಂದುವರೆದ ರಾಷ್ಟ್ರಗಳಿಗೆ ಹೋಗುತ್ತದೆ. ಆದರೆ, ಕಡಿಮೆ ಆದಾಯದ ದೇಶಗಳಿಗೆ ಹಂಚಿಕೆ ಆಗುವುದಿಲ್ಲ. ಭಾರತವೂ ಸೇರಿದಂತೆ ಕೆಲ ಮುಂದುವರೆದ ರಾಷ್ಟ್ರಗಳು ಎಸ್‌ಡಿಆರ್ ಹಂಚಿಕೆಗೆ ಸಂಬಂಧಿಸಿದಂತೆ ವಿರೋಧ ವ್ಯಕ್ತಪಡಿಸಿವೆ. ಐಎಂಎಫ್ ತನ್ನ ಸದಸ್ಯ ರಾಷ್ಟ್ರಗಳೊಂದಿಗೆ ಪರ್ಯಾಯ ಕಾರ್ಯವಿಧಾನಗಳನ್ನು ಚರ್ಚಿಸುತ್ತಿದೆ ಎಂದು ಗೋಪಿನಾಥ್ ಹೇಳಿದ್ದಾರೆ.

SDR ಕರೆನ್ಸಿ ಬಗ್ಗೆ ಐಎಂಎಫ್ ಆರ್ಥಿಕ ತಜ್ಞೆ ಗೀತಾ ಗೋಪಿನಾಥ್ ಅಸಮಾಧಾನ

ತಮ್ಮ ಎಸ್‌ಡಿಆರ್ ಅಗತ್ಯವಿಲ್ಲದ ಶ್ರೀಮಂತ ರಾಷ್ಟ್ರಗಳು ಕಡಿಮೆ ಆದಾಯದ ದೇಶಗಳಿಗೆ ಸಾಲ ನೀಡಬಹುದು. ಎಸ್‌ಡಿಆರ್ ಎನ್ನುವುದು ಡಾಲರ್, ಯೂರೋ, ಯೆನ್, ಸ್ಟರ್ಲಿಂಗ್ ಮತ್ತು ಯುವಾನ್‌ಗಳನ್ನು ಒಳಗೊಂಡಿರುವ ಅಂತರರಾಷ್ಟ್ರೀಯ ಮೀಸಲು ಆಸ್ತಿಯಾಗಿದೆ. ಮತ್ತು ಐಎಂಎಫ್ ಸದಸ್ಯರಿಗೆ ಅವರ ಕೋಟಾ ಪ್ರಕಾರ ಹಂಚಿಕೆ ಮಾಡಲಾಗುತ್ತದೆ. ಭಾರತವು ತನ್ನ 2.76% ಕೋಟಾದ ಕಾರಣದಿಂದಾಗಿ 13,114 ಮಿಲಿಯನ್ ಡಾಲರ್ ಎಸ್‌ಡಿಆರ್‌ಗಳನ್ನು ಹೊಂದಿದ್ದರೆ, 17.45% ಕೋಟಾದ ಕಾರಣದಿಂದಾಗಿ ಅಮೆರಿಕ 82,994 ಮಿಲಿಯನ್ ಎಸ್‌ಡಿಆರ್‌ಗಳನ್ನು ಹೊಂದಿದೆ. 6.41% ಕೋಟಾ ಹೊಂದಿರುವ ಚೀನಾ ಐಎಂಎಫ್‌ನಲ್ಲಿ 30,483 ಮಿಲಿಯನ್ ಎಸ್‌ಡಿಆರ್‌ಗಳನ್ನು ಹೊಂದಿದೆ.

English summary

Special Drawing Rights Or SDR Currencies Distribute Issue Is Pending In IMF

Special Drawing Rights Or SDR Currencies Distubute Issue Is Pending In IMF Says IMF Chief Economist Geeta Gopinath
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X