ನಾಲ್ಕು ಅಂತರರಾಷ್ಟ್ರೀಯ ಸೇವೆಯೂ ಸೇರಿದಂತೆ 62 ವಿಮಾನಗಳನ್ನು ಮಂಗಳವಾರ ಸ್ಪೈಸ್ ಜೆಟ್ ನಿಂದ ಪರಿಚಯಿಸಲಾಗಿದೆ. ಒಮನ್ ಜತೆಗೆ ಏರ್ ಬಬಲ್ ಒಪ್ಪಂದ ಮಾಡಿಕೊಂಡಿರುವ ಸ್ಪೈಸ್ ಜೆಟ್, ಅಕ್ಟೋಬರ್ 22ನೇ ತಾರೀಕಿನಿಂದ ಮಸ್ಕತ್- ದೆಹಲಿ ಹಾಗೂ ಮಸ್ಕತ್- ಅಹಮದಾಬಾದ್ ಹಾರಾಟ ಆರಂಭಿಸಲಿದೆ.
58 ದೇಶೀಯ ವಿಮಾನ ಹಾರಾಟ ಆರಂಭಿಸಲಿದೆ. ದೆಹಲಿ-ಕಾಂಡ್ಲಾ-ದೆಹಲಿ ವಲಯ, ಅಹಮದಾಬಾದ್-ಗೋವಾ-ಅಹಮದಾಬಾದ್, ಗೋವಾ-ಹೈದರಾಬಾದ್-ಗೋವಾ, ಮುಂಬೈ-ಗುವಾಹತಿ-ಮುಂಬೈ, ಅಹಮದಾಬಾದ್-ಕೋಲ್ಕತ್ತಾ-ಅಹಮದಾಬಾದ್, ದೆಹಲಿ-ದುರ್ಗಾಪುರ್-ದೆಹಲಿ, ಹೈದರಾಬಾದ್-ಮುಂಬೈ-ಹೈದರಾಬಾದ್, ಕೊಚ್ಚಿ-ಕೋಲ್ಕತ್ತಾ-ಕೊಚ್ಚಿ, ಪುಣೆ-ಚೆನ್ನೈ-ಪುಣೆ, ಮದುರೈ-ದೆಹಲಿ-ಮದುರೈ ಹಾಗೂ ಮಂಗಳೂರು-ದೆಹಲಿ-ಮಂಗಳೂರು ವಲಯದ್ದವು ಒಳಗೊಂಡಿವೆ.
ಈ ಮಾರ್ಗಗಳಲ್ಲಿ ಸ್ಪೈಸ್ ಜೆಟ್ ನ ಬೋಯಿಂಗ್ 737 ಹಾಗೂ ಬೊಂಬಾರ್ಡಿಯರ್ Q400 ವಿಮಾನಗಳು ಹಾರಾಟ ನಡೆಸುತ್ತವೆ. ಸ್ಪೈಸ ಜೆಟ್ ನಿಂದ ಇನ್ನಷ್ಟು ವಿಮಾನಗಳ ಕಾರ್ಯಾಚರಣೆ ಆರಂಭಿಸುವ ಬಗ್ಗೆ ತಿಳಿಸಲಾಗಿದೆ. ಅದರಲ್ಲಿ ಬೆಂಗಳೂರು- ಪಾಟ್ನಾ, ಬೆಂಗಳೂರು- ಕೋಲ್ಕತ್ತಾ ಮಾರ್ಗಗಳು ಒಳಗೊಂಡಿವೆ.

ಕಳೆದ ವಾರ ಹೇಳಿಕೆ ನೀಡಿರುವ ಸ್ಪೈಸ್ ಜೆಟ್, ಸಾವಿರಕ್ಕೂ ಹೆಚ್ಚು ಖಾಸಗಿ ವಿಮಾನಗಳ ಮೂಲಕ 1.75 ಲಕ್ಷ ವಲಸಿಗರನ್ನು ಕೊರೊನಾ ಬಿಕ್ಕಟ್ಟು ಆರಂಭವಾದಾಗಿನಿಂದ ಕರೆತರಲಾಗಿದೆ ಎಂದು ತಿಳಿಸಿದೆ. ಇದರಲ್ಲಿ ಲಂಡನ್, ಆಮ್ ಸ್ಟರ್ ಡಮ್, ಟೊರೊಂಟೊ, ರೋಮ್ ಮತ್ತಿತರ ಕಡೆಯಿಂದ ಕೂಡ ಪ್ರಯಾಣಿಕರನ್ನು ಕರೆತರಲಾಗಿದೆ.


Click it and Unblock the Notifications