For Quick Alerts
ALLOW NOTIFICATIONS  
For Daily Alerts

ಯೆಸ್ ಬ್ಯಾಂಕ್ ಬಿಕ್ಕಟ್ಟಲ್ಲಿ ಹಣ ಕಳೆದುಕೊಂಡವ ಕಾರು ಕಳುವಿನ ಕಥೆ ಕಟ್ಟಿದ

|

ಯೆಸ್ ಬ್ಯಾಂಕ್ ಈಗೇನೋ (ಮಾರ್ಚ್ 18, 2020) ಸ್ವಲ್ಪ ಮಟ್ಟಿಗೆ ಚೇತರಿಕೆ ಕಂಡಿದೆ. ಆದರೆ ಅದರ ಬಿಕ್ಕಟ್ಟಿನಲ್ಲಿ ಸಿಲುಕಿಕೊಂಡು, ಹಣ ಕಳೆದುಕೊಂಡ ಸ್ಟಾಕ್ ಬ್ರೋಕರ್ (ಷೇರು ದಲ್ಲಾಳಿ) ಅನ್ನು ಆತನ ಸಂಬಂಧಿ, ಸ್ನೇಹಿತರ ಜತೆಗೆ ಬಂಧಿಸಲಾಗಿದೆ. ಅದು ಏಕೆ ಗೊತ್ತಾ? ಅವರಿಬ್ಬರ ಜತೆ ಸೇರಿದ ಈ ಷೇರು ದಲ್ಲಾಳಿ, ತನ್ನದೇ ಬಿಎಂಡಬ್ಲ್ಯು ಕಾರು ನೋಯ್ಡಾದಿಂದ ಕಳುವಾಗಿದೆ ಎಂದು ನಾಟಕಾವಾಡಿದ್ದು, ಈಗ ಪೊಲೀಸರು ಬಂಧಿಸಿದ್ದಾರೆ.

 

ಈ ಬಗ್ಗೆ ಬುಧವಾರ ಪೊಲೀಸರು ಮಾಹಿತಿ ನೀಡಿದ್ದಾರೆ. ರಿಷಭ್ ಅರೋರಾ ಸ್ಟಾಕ್ ಬ್ರೋಕರ್. ಕಳೆದ ಭಾನುವಾರ ಆತ ದೂರು ನೀಡಿದ್ದ. ರಸ್ತೆ ಬದಿಯಲ್ಲಿ ಬಿಎಂಡಬ್ಲ್ಯು ಕಾರು ನಿಲ್ಲಿಸಿ, ಮೂತ್ರ ವಿಸರ್ಜನೆಗೆ ತೆರಳಿದ್ದಾಗ ಅಪರಿಚಿತ ದುಷ್ಕರ್ಮಿಗಳು ಬಿಎಂಡಬ್ಲ್ಯು ಕಾರು ಕದ್ದೊಯ್ದಿದ್ದಾರೆ ಎಂದು ತಿಳಿಸಿದ್ದ.

 
Yes ಬ್ಯಾಂಕ್ ಬಿಕ್ಕಟ್ಟಲ್ಲಿ ಹಣ ಕಳೆದುಕೊಂಡು ಕಾರು ಕಳುವು ಕಥೆ ಕಟ್ಟಿದ

ಸೆಕ್ಟರ್ 90, ಫೇಸ್ 2 ಪೊಲೀಸ್ ಠಾಣೆ ಮಿತಿಯಲ್ಲಿ ಈ ಘಟನೆ ನಡೆದಿದ್ದಾಗಿ ಆತ ತಿಳಿಸಿದ್ದ. ಶನಿವಾರ ರಾತ್ರಿ ಪಾರ್ಟಿ ಮುಗಿಸಿಕೊಂಡು ಬರುತ್ತಿದ್ದಾಗ ಕಳುವಾಗಿದ್ದಾಗಿ ತಿಳಿಸಿದ್ದ. ಆದರೆ ಪೊಲೀಸರು ತಿಳಿಸಿರುವ ಪ್ರಕಾರ, ಆ ಕಾರು ಅರೋರಾ ಸಂಬಂಧಿಗೆ ಸೇರಿದ್ದು, ಕಾರಿನ ಮೇಲೆ 40 ಲಕ್ಷ ರುಪಾಯಿ ಸಾಲ ಬಾಕಿ ಇದೆ.

English summary

Stock Broker Arrested For Make Up Story About Lost BMW

A stock broker in Noida, who lost money in Yes Bank crisis, was arrested along with his brother-in-law, friend for allegedly making up story about robbery of his BMW car.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X