For Quick Alerts
ALLOW NOTIFICATIONS  
For Daily Alerts

ಬಜೆಟ್ ವೇಳೆ ಬಳಸುವ ಬ್ರೀಫ್‌ಕೇಸ್‌ ಸಂಸ್ಕೃತಿ ಹೇಗೆ ಬಂತು ಗೊತ್ತಾ?

|

ಕೇಂದ್ರ ಬಜೆಟ್ ಅಂದಾಕ್ಷಣ ಈ ಬಾರಿ ಏನೆಲ್ಲಾ ಇರಲಿವೆ. ಯಾವ ಕ್ಷೇತ್ರಕ್ಕೆ ಎಷ್ಟು ಹಣ, ಏನೆಲ್ಲಾ ಲಾಭ ಆಗಲಿದೆ ಎಂದು ಜನರಲ್ಲಿ ಕುತೂಹಲ ಸಹಜ. ಕೇಂದ್ರ ಬಜೆಟ್ ಹಿಂದೆ ದೊಡ್ಡ ಇತಿಹಾಸವೇ ಇದೆ. ಅನೇಕ ಸಂಪ್ರದಾಯಗಳಿಂದ ಕೂಡಿದೆ. ಹಲ್ವಾ ತಯಾರಿಕೆಯಂತಹ ಸಂಪ್ರದಾಯದಿಂದ ಹಿಡಿದು ಬ್ರೀಫ್‌ಕೇಸ್‌ವರೆಗೂ ಇತಿಹಾಸವಿದೆ.

ಪ್ರತಿ ಬಾರಿ ಬಜೆಟ್ ಮಂಡನೆ ಮಾಡುವಾಗ ಹಣಕಾಸು ಸಚಿವರು ತಮ್ಮ ಭಾಷಣವನ್ನು ಮಾಡಲು ತೆರಳುವ ಮುನ್ನ ಚರ್ಮದ (ಲೆದರ್) ಬ್ರೀಫ್‌ಕೇಸ್‌ನೊಂದಿಗೆ ಪೋಸ್ ನೀಡುತ್ತಾರೆ. ಈ ಸಂಪ್ರದಾಯವೂ ಕಳೆದ ಕೆಲವು ವರ್ಷಗಳದ್ದಾಗಿಲ್ಲ. ಈ ಸಂಪ್ರದಾಯದ ಮೂಲವು ಇಂಗ್ಲೆಂಡ್‌ನ 18ನೇ ಶತಮಾನಕ್ಕೆ ಸೇರಿದೆ. ಭಾರತವು ಈ ಬ್ರಿಟೀಷ್ ಸಂಪ್ರದಾಯದಿಂದ ಪ್ರಭಾವಿತವಾಗಿದೆ.

ಬಜೆಟ್ ಬ್ರೀಫ್‌ಕೇಸ್‌ ಇತಿಹಾಸ

ಬಜೆಟ್ ಬ್ರೀಫ್‌ಕೇಸ್‌ ಇತಿಹಾಸ

ಮೊದಲ ಬಾರಿಗೆ ಬಜೆಟ್ ಬ್ರೀಫ್‌ಕೇಸ್‌ನ್ನು 1860ರಲ್ಲಿ ಇಂಗ್ಲೆಂಡ್‌ನ ಕುಲಪತಿಗಾಗಿ ವಿನ್ಯಾಸಗೊಳಿಸಲಾಯಿತು. ವಿಲಿಯಂ ಎವಾರ್ಟ್ ಗ್ಲ್ಯಾಡ್‌ಸ್ಟೋನ್ ಅವರು ಮೊದಲು ಮರದ ಪೆಟ್ಟಿಗೆಯನ್ನು ನಿಯೋಜಿಸಿದರು. ಈ ಬ್ರೀಫ್‌ಕೇಸ್ ಕಪ್ಪು ಸ್ಯಾಟಿನ್ ಮತ್ತು ಕಡುಗೆಂಪು ಚರ್ಮದಿಂದ ಮುಚ್ಚಲಾಗಿತ್ತು.

ಇದಕ್ಕೂ ಮುನ್ನ ಕುಲಪತಿಗಳು (ಚಾನ್ಸಲರ್) ಹಣಕಾಸಿನ ನೀತಿಯ ಹೇಳಿಕೆಗಳನ್ನು ಚರ್ಮದ ಚೀಲಗಳಲ್ಲಿ ಹೌಸ್ ಆಫ್ ಕಾಮನ್ಸ್‌ಗೆ ಕೊಂಡೊಯ್ಯುತ್ತಿದ್ದರು. ಗ್ಲ್ಯಾಡ್‌ಸ್ಟೋನ್ ಸುದೀಘವಾದ ಭಾಷಣವನ್ನು ಮಾಡುವ ಹಿನ್ನೆಲೆಯಲ್ಲಿ ಪೆಟ್ಟಿಗೆಯನ್ನು ಕೇಳಿದ್ದರು. ಮತ್ತು ಅವರ ಪತ್ರಿಗೆಗಳನ್ನು ಇಡಲು ಪೆಟ್ಟಿಗೆಯು ಅಗತ್ಯವಾಗಿತ್ತು ಎಂದೇ ಹೇಳಲಾಗುತ್ತದೆ. ಹೀಗಾಗಿ ಈ ಬಾಕ್ಸ್‌ ಗ್ಲ್ಯಾಡ್‌ಸ್ಟೋನ್ ಬಾಕ್ಸ್ ಎಂದೇ ಫೇಮಸ್

 

ಬಜೆಟ್ ಹೆಸರು ಎಲ್ಲಿಂದ ಬಂತು?

ಬಜೆಟ್ ಹೆಸರು ಎಲ್ಲಿಂದ ಬಂತು?

ಬಜೆಟ್ ಎಂಬ ಪದವು ಫ್ರೆಂಚ್ ಭಾಷೆಯ 'ಬೌಗೆಟ್' ನಿಂದ ಬಂದಿದೆ. ಇದರರ್ಥ "ಸಣ್ಣ ಚೀಲ". ಇದನ್ನು ಯುಕೆ ನಲ್ಲಿ ಬಜೆಟ್ ಬಾಕ್ಸ್‌ ಎಂದು ಕರೆಯಲಾಗುತ್ತದೆ, ಆದರೆ ಭಾರತದಲ್ಲಿ ಇದು ಬ್ರೀಫ್‌ಕೇಸ್ ಆಗಿದೆ.

ಬ್ರೀಫ್‌ಕೇಸ್‌ನ ಬಣ್ಣ

ಬ್ರೀಫ್‌ಕೇಸ್‌ನ ಬಣ್ಣ

ಇಂಗ್ಲೆಂಡ್ ನಲ್ಲಿ ಪ್ರತಿ ವರ್ಷ ಮುಂದಿನ ಕುಲಪತಿಗೆ ಕೆಂಪು ಪೆಟ್ಟಿಗೆಯನ್ನು ಹಸ್ತಾಂತರಿಸುವ ಸಂಪ್ರದಾಯವನ್ನು ಅನುಸರಿಸುತ್ತಿದೆ. ಬಾಕ್ಸ್ ತುಂಬಾ ಹಳೆಯದು ಮತ್ತು ಕಳಪೆಯಾಗಿರುವುದರಿಂದ ಇದನ್ನು 2011 ರಲ್ಲಿ ಜಾರ್ಜ್ ಓಸ್ಬೋರ್ನ್ ಹೊಸ ಪೆಟ್ಟಿಗೆಯಾಗಿ ಬದಲಾಯಿಸಿದರು. ಆದಾಗ್ಯೂ, ಭಾರತದಲ್ಲಿ, ಹಣಕಾಸು ಮಂತ್ರಿಗಳು ಕೆಂಪು, ಕಪ್ಪು ಮತ್ತು ಕಂದು ಬಣ್ಣದ್ದಾಗಿರುವ ಬ್ರೀಫ್‌ಕೇಸ್‌ಗಳನ್ನು ಬಳಸಿದ್ದಾರೆ. ಬ್ರೀಫ್‌ಕೇಸ್‌ನಲ್ಲಿ ಭಾರತದ ಮುಂದಿನ ಹಣಕಾಸು ಮಂತ್ರಿಗೆ ರವಾನಿಸುವ ಸಂಪ್ರದಾಯ ಅಥವಾ ಬಣ್ಣದಲ್ಲಿ ಯಾವುದೇ ವಿಶೇಷತೆಗಳಿಲ್ಲ.

ಭಾರತದಲ್ಲಿ ಅನೇಕ ಹಣಕಾಸು ಮಂತ್ರಿಗಳು ಬ್ರೀಫ್‌ಕೇಸ್ ಬಳಸಿದರು

ಭಾರತದಲ್ಲಿ ಅನೇಕ ಹಣಕಾಸು ಮಂತ್ರಿಗಳು ಬ್ರೀಫ್‌ಕೇಸ್ ಬಳಸಿದರು

ಭಾರತದಲ್ಲಿ ವಿವಿಧ ವರ್ಷಗಳಲ್ಲಿ ಹಣಕಾಸು ಮಂತ್ರಿಗಳು ಸ್ವಲ್ಪ ವಿಭಿನ್ನ ಬ್ರೀಫ್‌ಕೇಸ್‌ ಬಳಸಿದರು. ಯಶ್ವಂತ್ ಸಿಂಗ್ ಅವರ ಬ್ರೀಫ್‌ಕೇಸ್ ಬಕಲ್ ಮತ್ತು ಪಟ್ಟಿಗಳನ್ನು ಹೊಂದಿತ್ತು, ಆದರೆ ಮನಮೋಹನ್ ಸಿಂಗ್ ಗ್ಲ್ಯಾಡ್‌ಸ್ಟೋನ್ ಪೆಟ್ಟಿಗೆಯಂತೆಯೇ ಬ್ರೀಫ್‌ಕೇಸ್ ಅನ್ನು ಕಪ್ಪು ಬಣ್ಣದಲ್ಲಿ ಸಾಗಿಸಿದರು.

ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರು ಬ್ರಿಟಿಷರಂತೆಯೇ ಕಡುಗೆಂಪು ಚರ್ಮದ ಬ್ರೀಫ್‌ಕೇಸ್‌ನೊಂದಿಗೆ ಕಾಣಿಸಿಕೊಂಡರು. ಇನ್ನು ದಿವಂಗತ ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು 2015 ರಲ್ಲಿ ಕಂದುಬಣ್ಣದ ಬ್ರೀಫ್ಕೇಸ್ ಅನ್ನು ಹೊಂದಿದ್ದರು. ಆದರೆ ಕಳೆದ ಬಾರಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಯಾವುದೇ ಬ್ರೀಫ್‌ಕೇಸ್ ಬಳಸದೇ ಹೊಸ ಅಧ್ಯಾಯ ಆರಂಭಿಸಿದರು.

ಬ್ರೀಫ್‌ಕೇಸ್ ಏನು ಒಳಗೊಂಡಿದೆ?

ಬ್ರೀಫ್‌ಕೇಸ್ ಏನು ಒಳಗೊಂಡಿದೆ?

ಬ್ರೀಫ್‌ಕೇಸ್‌ನೊಳಗೆ ಅತಿ ದೊಡ್ಡ ರಹಸ್ಯವೇನು ಅಡಗಿರುವುದಿಲ್ಲ. ಇದು ಹಣಕಾಸು ಸಚಿವರ ಬಜೆಟ್ ಭಾಷಣವನ್ನು ಹೊಂದಿದೆ.

English summary

Story Of Union Budget Briefcase

This is the story of union budget briefcase. why FM uses briefcase? what is the history?
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X