For Quick Alerts
ALLOW NOTIFICATIONS  
For Daily Alerts

2020-21ಕ್ಕೆ ಸಬ್ಸಿಡಿಗಾಗಿ ಮೀಸಲಿಟ್ಟ ಅಂದಾಜು ಮೊತ್ತ 2.27 ಲಕ್ಷ ಕೋಟಿ

|

ಆಹಾರ, ಇಂಧನ ಹಾಗೂ ಗೊಬ್ಬರಕ್ಕೆ ನೀಡುವ ಸರ್ಕಾರದ ಸಬ್ಸಿಡಿ ಮೊತ್ತ ಈ ಬಜೆಟ್ ನಲ್ಲಿ 0.23 ಪರ್ಸೆಂಟ್ ಏರಿಕೆ ಮಾಡಿದ್ದು, 2,27,793.89 ಕೋಟಿ ಮೊತ್ತಕ್ಕೆ ಹೆಚ್ಚಿಸಲಾಗಿದೆ. ಪ್ರಸಕ್ತ ಆರ್ಥಿಕ ವರ್ಷಕ್ಕೆ ಪರಿಷ್ಕೃತ ಅಂದಾಜು 2,27,255 ಕೋಟಿಗೂ ಹೆಚ್ಚು ಮೀಸಲಿಡಲಾಗಿದೆ.

 

ಮುಂದಿನ ಆರ್ಥಿಕ ವರ್ಷಕ್ಕೆ ಅಂದಾಜು ಮಾಡಿರುವ ಒಟ್ಟಾರೆ ಸಬ್ಸಿಡಿಯಲ್ಲಿ ಗರಿಷ್ಠ ಮೊತ್ತ ಮೀಸಲಾಗಿರುವುದು ಆಹಾರಕ್ಕೆ. ಆ ನಂತರ ಗೊಬ್ಬರ ಮತ್ತು ಇಂಧನಕ್ಕೆ. 2020-21ನೇ ಸಾಲಿಗೆ ಸಾರ್ವ್ಜಜನಿಕ ವಿತರಣೆ ವ್ಯವಸ್ಥೆ ಮತ್ತು ಕಲ್ಯಾಣ ಯೋಜನೆ ಅಡಿಯಲ್ಲಿ ಸಬ್ಸಿಡಿ ಸಹಿತ ಆಹಾರ ಧಾನ್ಯಗಳನ್ನು ಪೂರೈಸಲು 1,15,569.68 ಕೋಟಿ ಮೀಸಲಿರಿಸಲಾಗಿದೆ.

 

ಪ್ರಸ್ಸಕ್ತ ವರ್ಷದ ಪರಿಷ್ಕೃತ ಅಂದಾಜು 1,08,688.35 ಕೋಟಿಯಿಂದ 6.33 ಪರ್ಸೆಂಟ್ ಏರಿಕೆ ಮಾಡಲಾಗಿದೆ. ಸಬ್ಸಿಡಿ ಸಹಿತ ಇಂಧನ ಪೂರೈಕೆಗಾಗಿ, ಅದರಲ್ಲೂ ಎಲ್ ಪಿಜಿ ಮತ್ತು ಸೀಮೆ ಎಣ್ಣೆಗಾಗಿ ಈ ಆರ್ಥಿಕ ವರ್ಷಕ್ಕಿಂತ 6 ಪರ್ಸೆಂಟ್ ಹೆಚ್ಚು ಮೊತ್ತ, 40,915.21 ಕೋಟಿ ಮೀಸಲಿಡಲಾಗಿದೆ. ಈ ಆರ್ಥಿಕ ವರ್ಷದಲ್ಲಿ ಪರಿಷ್ಕೃತ ಅಂದಾಜಿನ ಪ್ರಕಾರ ಇಂಧನ ಸಬ್ಸಿಡಿಗಾಗಿ 38,568.86 ಕೋಟಿ ಮೀಸಲಿಡಲಾಗಿತ್ತು.

2020-21ಕ್ಕೆ ಸಬ್ಸಿಡಿಗಾಗಿ ಮೀಸಲಿಟ್ಟ ಅಂದಾಜು ಮೊತ್ತ 2.27 ಲಕ್ಷ ಕೋಟಿ

ಇನ್ನು ಎಲ್ ಪಿಜಿ ಸಬ್ಸಿಡಿಯನ್ನು ಮುಂದಿನ ಅರ್ಥಿಕ ವರ್ಷಕ್ಕೆ 37,256.21 ಕೋಟಿ ಎತ್ತಿಡಲಾಗಿದೆ. ಪ್ರಸಕ್ತ ವರ್ಷದ ಪರಿಷ್ಕೃತ ಅಂದಾಜು 34,085.86 ಕೋಟಿ ಇದೆ. ಆದರೆ ಸೀಮೆ ಎಣ್ಣೆ ಸಬ್ಸಿಡಿಯನ್ನು 3,659 ಕೋಟಿ ರುಪಾಯಿಗೆ ಇಳಿಸಲಾಗಿದೆ. ಈ ವರ್ಷದಲ್ಲಿ ಪರಿಷ್ಕೃತ ಅಂದಾಜು 4,483 ಕೋಟಿ ಇಡಲಾಗಿತ್ತು.

ಇನ್ನು ಗೊಬ್ಬರಕ್ಕಾಗಿ 2020-21ನೇ ಸಾಲಿನಲ್ಲಿ 11 ಪರ್ಸೆಂಟ್ ಸಬ್ಸಿಡಿ ಕಡಿಮೆ ಮಾಡಲಾಗಿದೆ. ಮುಂದಿನ ಆರ್ಥಿಕ ವರ್ಷಕ್ಕೆ 71,309 ಕೋಟಿ ಮೀಸಲಿಟ್ಟರೆ, ಈ ವರ್ಷದ ಪರಿಷ್ಕೃತ ಅಂದಾಜು 79,997.85 ಕೋಟಿ ಎತ್ತಿಡಲಾಗಿದೆ.

English summary

Subsidy Bill For FY21 Projected At Rs 2.27 Lakh Crore

The union government’s food, fuel and fertilizer subsidy bill has been pegged marginally higher by 0.23 percent at Rs 2,27,793.89 crore for the 2020-21 fiscal year.
Story first published: Sunday, February 2, 2020, 10:02 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X