For Quick Alerts
ALLOW NOTIFICATIONS  
For Daily Alerts

ಈ ಇಬ್ಬರು ಎಕ್ಸ್ ಕ್ಯೂಟಿವ್ ಗಳು ಪಡೆಯುವ ವೇತನ ತಲಾ 87.50 ಕೋಟಿ

|

ಭಾರತದಲ್ಲೇ ಅತಿ ಹೆಚ್ಚು ವೇತನ ಪಡೆಯುವ ಎಕ್ಸ್ ಕ್ಯೂಟಿವ್ ಗಳು ಯಾರು ಮತ್ತು ಅಷ್ಟು ವೇತನ ನೀಡುವ ಸಂಸ್ಥೆ ಯಾವುದು ಗೊತ್ತಾ? ರಿಲಯನ್ಸ್ ಅಥವಾ ಟಾಟಾ ಸಂಸ್ಥೆಯೋ ಹಾಗೂ ಮುಕೇಶ್ ಅಂಬಾನಿಯೋ ರತನ್ ಟಾಟಾ ಇವರ್ಯಾರೂ ಅಲ್ಲ. ಸನ್ ಟಿವಿ ಪ್ರವರ್ತಕರಾದ ಕಲಾನಿಧಿ ಮಾರನ್ ಮತ್ತು ಅವರ ಪತ್ನಿ ಕಾವೇರಿ 2019- 20ನೇ ಸಾಲಿನಲ್ಲಿ ಅತಿ ಹೆಚ್ಚು ವೇತನ ಪಡೆದವರ ಸಾಲಿನಲ್ಲಿ ಮೊದಲ ಸ್ಥಾನದಲ್ಲಿ ಇದ್ದಾರೆ.

ಇನ್ಫೋಸಿಸ್ ಸಿಬ್ಬಂದಿಯಲ್ಲಿ ಕೋಟ್ಯಧಿಪತಿಗಳ ಸಂಖ್ಯೆ 74ಇನ್ಫೋಸಿಸ್ ಸಿಬ್ಬಂದಿಯಲ್ಲಿ ಕೋಟ್ಯಧಿಪತಿಗಳ ಸಂಖ್ಯೆ 74

ಈ ದಂಪತಿ 175 ಕೋಟಿ ರುಪಾಯಿ ಪಡೆದುಕೊಂಡಿದ್ದಾರೆ. ಸನ್ ಟಿವಿಯ ಸ್ಥಾಪಕರು ಕಲಾನಿಧಿ ಮಾರನ್. 1993ರಲ್ಲಿ ಸ್ಥಾಪಿಸಿದರು. ಅವರು ಸನ್ ಟಿವಿಯ ಕಾರ್ಯ ನಿರ್ವಾಹಕ ಮುಖ್ಯಸ್ಥರು. ಇನ್ನು ಅವರ ಪತ್ನಿ ಕಾವೇರಿ ಕಾರ್ಯ ನಿರ್ವಾಹಕ ನಿರ್ದೇಶಕಿ ಆಗಿದ್ದಾರೆ. ಈ ದಂಪತಿ ಸಂಬಳ ರೂಪದಲ್ಲಿ ಪಡೆಯುವುದು 13.87 ಕೋಟಿ ರುಪಾಯಿ. ಇನ್ನು ಎಕ್ಸ್ ಗ್ರೇಷಿಯಾ/ ಬೋನಸ್ ಆಗಿ, 2019- 20ನೇ ಸಾಲಿನಲ್ಲಿ ತಲಾ 73.63 ಕೋಟಿ ಪಡೆದಿದ್ದಾರೆ.

ವೇತನ ಸರಾಸರಿ ತಲಾ 87.50 ಕೋಟಿ ರುಪಾಯಿ

ವೇತನ ಸರಾಸರಿ ತಲಾ 87.50 ಕೋಟಿ ರುಪಾಯಿ

ಆ ಮೂಲಕ ಇಬ್ಬರೂ ಸರಾಸರಿ ತಲಾ 87.50 ಕೋಟಿ ರುಪಾಯಿ ಪಡೆದಿದ್ದಾರೆ. ಮಾಲೀಕರೂ ಆಗಿರುವ ಇವರು ಇಷ್ಟು ವೇತನವನ್ನು ನಿಗದಿ ಮಾಡಿಕೊಂಡಿದ್ದು ಮೂರು ವರ್ಷಗಳ ಹಿಂದೆ. ಸನ್ ಟಿವಿಯಲ್ಲಿ ಕಾರ್ಯ ನಿರ್ವಾಹಕ ನಿರ್ದೇಶಕ ಆಗಿರುವ ಆರ್. ಮಹೇಶ್ ಗೆ ಸಂಬಳ 1.16 ಕೋಟಿ ಹಾಗೂ ಎಕ್ಸ್ ಗ್ರೇಷಿಯಾ/ ಬೋನಸ್ 62 ಲಕ್ಷ ಇದೆ.

2019- 20ನೇ ಸಾಲಿನಲ್ಲಿ 3,653.35 ಕೋಟಿ ಆದಾಯ

2019- 20ನೇ ಸಾಲಿನಲ್ಲಿ 3,653.35 ಕೋಟಿ ಆದಾಯ

ಆ ನಂತರ ಮಾರನ್ ಅವರ ಮಗಳು ಹಾಗೂ ಕಂಪೆನಿಯ ಕಾರ್ಯ ನಿರ್ವಾಹಕ ನಿರ್ದೇಶಕಿ ಕಾವ್ಯಾ ಸಂಬಳ 80 ಲಕ್ಶ ಹಾಗೂ ಎಕ್ಸ್ ಗ್ರೇಷಿಯಾ/ ಬೋನಸ್ 42 ಲಕ್ಷ ಇದೆ. ಸನ್ ಟಿವಿಯೊಂದರಿಂದಲೇ 2019- 20ನೇ ಸಾಲಿನಲ್ಲಿ 3,653.35 ಕೋಟಿ ಆದಾಯ ಬಂದಿದ್ದು, 1,797.88 ಕೋಟಿ ಲಾಭವಾಗಿದೆ.

ಡಿಟಿಎಚ್ ನಿಂದ ಅನುಕೂಲ ಆಗಿದೆ

ಡಿಟಿಎಚ್ ನಿಂದ ಅನುಕೂಲ ಆಗಿದೆ

ಕಂಪೆನಿ ಬಳಿ ನಿವ್ವಳ ನಗದು ಈ ವರ್ಷ ಮಾರ್ಚ್ ನಲ್ಲಿ 2800 ಕೋಟಿ ರುಪಾಯಿ ಇದ್ದದ್ದು, ಜೂನ್ ನಲ್ಲಿ 3000 ಕೋಟಿ ರುಪಾಯಿಗೆ ಏರಿಕೆ ಆಗಿದೆ. ಪ್ರಾದೇಶಿಕವಾಗಿ ಸನ್ ಟಿವಿ ಜಾಲ ವಿಸ್ತಾರವಾಗಿದೆ. ಡಿಟಿಎಚ್ ನ ಇತ್ತೀಚಿನ ಬೆಳವಣಿಗೆಯಿಂದ ಸನ್ ಟಿವಿಗೆ ದೊಡ್ಡ ಮಟ್ಟದ ಅನುಕೂಲ ಆಗಿದೆ. ಕೊರೊನಾ ಬಿಕ್ಕಟ್ಟಿನ ಕಾರಣದಿಂದ ಸನ್ ಟಿವಿ ಕಾರ್ಯ ನಿರ್ವಹಣೆಗೆ ಸ್ವಲ್ಪ ಮಟ್ಟಿಗೆ ಸಮಸ್ಯೆ ಆಗಿತ್ತು. ಆದರೆ ಈಗ ಕೊರೊನಾ ಹಿಂದಿನ ಸ್ಥಿತಿಗೆ ಮರಳುತ್ತಾ ಇದೆ ಎಂದು ತಿಳಿಸಲಾಗಿದೆ.

English summary

Sun TV's executives Kalanithi Maran, wife Kavery gets 87 Crore Salary

Sun TV founder Kalanithi Maran and his wife Kaveri highest paid executives in India. Each gets 87.50 crore as salary.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X