For Quick Alerts
ALLOW NOTIFICATIONS  
For Daily Alerts

350 ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲು ನಿರ್ಧಾರ ಮಾಡಿದ ಸ್ವಿಗ್ಗಿ

|

ಕಳೆದ ಮೇ ತಿಂಗಳಲ್ಲಿ ವಿವಿಧ ನಗರಗಳಲ್ಲಿ 1100 ಸಿಬ್ಬಂದಿಯನ್ನು ಉದ್ಯೋಗದಿಂದ ತೆಗೆದಿದ್ದ ಸ್ವಿಗ್ಗಿ ಇದೀಗ 350 ಉದ್ಯೋಗಿಗಳನ್ನು ತೆಗೆಯಲು ನಿರ್ಧಾರ ಮಾಡಿದೆ. ಇದು ಎರಡನೇ ಹಂತದ ಉದ್ಯೋಗ ಕಡಿತ ಎನ್ನಲಾಗುತ್ತಿದೆ. ಸ್ವಿಗ್ಗಿ ಹೇಳುವ ಪ್ರಕಾರ, ಕೊರೊನಾ ಬಿಕ್ಕಟ್ಟಿನಿಂದ ಶೀಘ್ರವಾಗಿ ಚಿಗಿತುಕೊಳ್ಳುವ ನಿರೀಕ್ಷೆ ಇತ್ತು. ಆದರೆ ಶೇಕಡಾ ಐವತ್ತರಷ್ಟು ಮಾತ್ರ ಆಹಾರ ತಂತ್ರಜ್ಞಾನ ಕೈಗಾರಿಕೆ ಚೇತರಿಸಿಕೊಂಡಿದೆ.

ಯಾವ ಪ್ರದೇಶದಲ್ಲಿ ಹೆಚ್ಚಿನ ಸಾಮರ್ಥ್ಯ ಇದೆಯೋ ಅಲ್ಲಿಗೆ ಸಂಪನ್ಮೂಲ ಸೃಷ್ಟಿಸಲು ಕಳೆದ ಮೇ ತಿಂಗಳಲ್ಲಿ ಪ್ರಯತ್ನ ಆರಂಭಿಸಿದೆವು. ಆದರೆ ಶೇಕಡಾ ಐವತ್ತರಷ್ಟು ಮಾತ್ರ ಸುಧಾರಿಸಿಕೊಂಡಿದೆ. ಆದ್ದರಿಂದ ಮತ್ತೆ ಈ ಅಂತಿಮ ಪ್ರಯತ್ನ ಶುರು ಮಾಡಬೇಕಾಯಿತು. ಅದರ ಫಲಿತವಾಗಿ 350 ಉದ್ಯೋಗ ನಷ್ಟವಾಗಿದೆ ಎಂದು ಹೇಳಿಕೆಯಲ್ಲಿ ಸ್ವಿಗ್ಗಿ ತಿಳಿಸಿದೆ.

Swiggyಯಲ್ಲಿ 2019ರಲ್ಲಿ ಅತಿ ಹೆಚ್ಚು ಆರ್ಡರ್ ಮಾಡಿದ್ದು ಚಿಕನ್ ಬಿರಿಯಾನಿSwiggyಯಲ್ಲಿ 2019ರಲ್ಲಿ ಅತಿ ಹೆಚ್ಚು ಆರ್ಡರ್ ಮಾಡಿದ್ದು ಚಿಕನ್ ಬಿರಿಯಾನಿ

ಇದೇ ಅಂತಿಮವಾದ ಉದ್ಯೋಗ ಕಡಿತ. ಮುಂಬರುವ ತಿಂಗಳಲ್ಲಿ ಯಾರನ್ನೂ ಕೆಲಸದಿಂದ ತೆಗೆಯುವುದಿಲ್ಲ ಎಂದು ಸ್ವಿಗ್ಗಿಯ ವಕ್ತಾರರು ತಿಳಿಸಿದ್ದಾರೆ. ಈಗ ಉದ್ಯೋಗದಿಂದ ತೆಗೆಯುವ ಸಿಬ್ಬಂದಿಗೆ ಕನಿಷ್ಠ ಮೂರರಿಂದ ಎಂಟು ತಿಂಗಳು ವೇತನ, ನೋಟಿಸ್ ಅವಧಿಯಲ್ಲಿನ ವೇತನದ ಜತೆಗೆ ಈಗಾಗಲೇ ಪೂರ್ತಿ ಮಾಡಿರುವ ಸೇವೆಗೆ ಹೆಚ್ಚುವರಿಯಾಗಿ ತಿಂಗಳು ಎಕ್ಸ್ ಗ್ರೇಷಿಯಾ ನೀಡಲಾಗುವುದು ಎಂದು ತಿಳಿಸಲಾಗಿದೆ.

350 ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲು ನಿರ್ಧಾರ ಮಾಡಿದ ಸ್ವಿಗ್ಗಿ

ಈ ಹಿಂದೆ ಅನ್ವಯಿಸಿದಂತೆಯೇ ಈಗಲೂ ಉದ್ಯೋಗದಿಂದ ಹೊರಬೀಳುವ ಸಿಬ್ಬಂದಿಗೆ ಈ ವರ್ಷದ ಕೊನೆ ತನಕ ಆಕ್ಸಿಡೆಂಟ್ ಮತ್ತು ಟರ್ಮ್ ಇನ್ಷೂರೆನ್ಸ್ ದೊರೆಯುತ್ತದೆ. ಇನ್ನು ಕಳೆದ ಮೇ ತಿಂಗಳಲ್ಲಿ ಎಲ್ಲೆಲ್ಲಿ ಲಾಭದ ಪ್ರಮಾಣ ಕಡಿಮೆ ಆಗಿತ್ತೋ ಅಂಥ ಕ್ಲೌಡ್ ಅಡುಗೆ ಮನೆಗಳನ್ನು ಬದಲಾಯಿಸಿಕೊಳ್ಳಲಾಗಿತ್ತು. ಜತೆಗೆ ಅಲ್ಲಿನ ಐನೂರು ಸಿಬ್ಬಂದಿಯನ್ನು ಕೆಲಸದಿಂದ ತೆಗೆಯಲಾಗಿತ್ತು. ಅದರಲ್ಲಿ ಗುತ್ತಿಗೆ ಸಿಬ್ಬಂದಿ ಕೂಡ ಇದ್ದರು.

English summary

Swiggy Has Decided To Lay Off Another 350 Employees

Food delivery platform decided to lay off another 350 employees as a final restructure plan.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X