For Quick Alerts
ALLOW NOTIFICATIONS  
For Daily Alerts

ಕೊರೊನಾ ವಿರುದ್ಧದ ಹೋರಾಟಕ್ಕೆ ದೇಶದ ಬೆನ್ನಿಗೆ ನಿಂತ ಟಾಟಾ: 'ದಿಸ್ ಈಸ್ ಟಾಟಾ'

|

ದೇಶದಲ್ಲಿ ಕೊರೊನಾವೈರಸ್‌ನಿಂದಾಗಿ ಆಗಿರುವ ಡ್ಯಾಮೇಜ್ ಅಷ್ಟಿಷ್ಟಲ್ಲ. ಮೇ 3ರವರೆಗೆ ಲಾಕ್‌ಡೌನ್‌ನಿಂದಾಗಿ ಭಾರತದ ಬಹುತೇಕ ಉದ್ಯಮಗಳೆಲ್ಲಾ ನೆಲಕಚ್ಚಿ ಹೋಗಿವೆ. ಕೋಟ್ಯಾಂತರ ಸಂಖ್ಯೆಯಲ್ಲಿ ಜನರು ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಈಗಾಗಲೇ ಲಕ್ಷಾಂತರ ಸಂಖ್ಯೆಯಲ್ಲಿ ಉದ್ಯೋಗಿಗಳ ವೇತನ ಕಡಿತಗೊಂಡಿದೆ. ಇನ್ನು ಲೆಕ್ಕವಿಲ್ಲದಷ್ಟು ಜನರು ಒಪ್ಪತ್ತಿನ ಊಟಕ್ಕಾಗಿ ಪರದಾಡುತ್ತಿದ್ದಾರೆ.

ವಿಶ್ವದೆಲ್ಲೆಡೆ ಹಬ್ಬರಿರುವ ಕೊರೊನಾವೈರಸ್ ಸೋಂಕು ಭಾರತವನ್ನು ಬೆಂಬಿಡದೆ ಕಾಡುತ್ತಿದೆ. ಲಾಕ್‌ಡೌನ್‌ನಿಂದಾಗಿ ಕೇಂದ್ರ ಸರ್ಕಾರವು ಕೂಡ ಅನೇಕ ಯೋಜನೆಗಳನ್ನು ಜಾರಿಗೆ ತರುವುದರ ಜೊತೆಗೆ ಭಾರತೀಯರ ಉಳಿವಿಗಾಗಿ ಹೋರಾಟ ನಡೆಸುತ್ತಿದೆ. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಈಗಾಗಲೇ ಅನೇಕರು ಸರ್ಕಾರಕ್ಕೆ ಹಣವನ್ನು ದೇಣಿಗೆ ಮೂಲಕ ಗಮನಸೆಳೆದಿದ್ದಾರೆ.

ಅನೇಕ ಉದ್ಯಮಿಗಳು, ಚಿತ್ರನಟರು, ಕಂಪನಿಗಳು ಪ್ರಧಾನ ಮಂತ್ರಿ ನಿಧಿಗೆ ಹಣ ದೇಣಿಗೆ ನೀಡಿದ್ದಾರೆ. ಇದರಲ್ಲಿ ಪ್ರಮುಖವಾಗಿ ಗುರುತಿಸಿಕೊಂಡವರಲ್ಲಿ ಟಾಟಾ ಸಂಸ್ಥೆಯು ಒಂದು. ಕೇವಲ ಇಷ್ಟು ಅಷ್ಟು ಹಣ ಅಂತ ನೀಡದೆ ಅವಿರತ ಪ್ರಯತ್ನದೊಂದಿಗೆ ಸರ್ಕಾರದ ಸಹಾಯಕ್ಕೆ ನಿಂತಿರುವ ಟಾಟಾ ಸಮೂಹ, ಹಣವನ್ನಷ್ಟೇ ಅಲ್ಲದೆ ಸಹಾಯದ ಹಸ್ತ ಚಾಚಿದೆ. ಹಾಗಿದ್ದಾರೆ ರತನ್ ಟಾಟಾ ಮುಂದಾಳತ್ವದ ಟಾಟಾ ಸಮೂಹ ಇಲ್ಲಿಯವರೆಗೆ ಸಾವಿರಾರು ಕೋಟಿ ದೇಣಿಗೆ ನೀಡಿದ್ದಷ್ಟೇ ಅಲ್ಲದೆ ಏನೆಲ್ಲಾ ಸಹಾಯ ಮಾಡಿದೆ ಎಂಬುದರ ಕುರಿತು ಈ ಕೆಳಗೆ ತಿಳಿಸಲಾಗಿದೆ ಓದಿ

9 ಲಕ್ಷ ಪರ್ಸನಲ್ ಪ್ರೊಟೆಕ್ಟಿವ್‌ ಎಕ್ವಿಪ್‌ಮೆಂಟ್

9 ಲಕ್ಷ ಪರ್ಸನಲ್ ಪ್ರೊಟೆಕ್ಟಿವ್‌ ಎಕ್ವಿಪ್‌ಮೆಂಟ್

ಕೊರೊನಾವೈರಸ್ ವಿರುದ್ಧ ಹೋರಾಟಕ್ಕೆ ಒಗ್ಗಟ್ಟಿನಿಂದ ಮುನ್ನುಗ್ಗುತ್ತಿರುವ ದೇಶದ ಸಹಾಯಕ್ಕೆ ನಿಂತ ಟಾಟಾ ಸಮೂಹವು ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ವೈದ್ಯಕೀಯ ಸಿಬ್ಬಂದಿಗೆ ಅಗತ್ಯವಿರುವ 9 ಲಕ್ಷ ಪರ್ಸನಲ್ ಪ್ರೊಟೆಕ್ಟಿವ್‌ ಎಕ್ವಿಪ್‌ಮೆಂಟ್(ಪಿಪಿಇ) ಆರ್ಡರ್ ಮಾಡಿ ಈಗಾಗಲೇ ಈಗಾಗಲೇ ಪೂರೈಸಿದೆ.

ಇದರ ಜೊತೆಗೆ ಕೊರೊನಾ ಸೋಂಕು ಪರೀಕ್ಷೆಗೆ ಅತ್ಯಗತ್ಯವಾಗಿರುವ ಟೆಸ್ಟಿಂಗ್ ಕಿಟ್‌ಗಳನ್ನು ಭಾರತವು ವಿದೇಶದಿಂದ ಆಮದು ಮಾಡಿಕೊಳ್ಳುತ್ತಿದೆ. ಈ ಸಂದರ್ಭದಲ್ಲಿ 2.80 ಲಕ್ಷ ಟೆಸ್ಟಿಂಗ್ ಕಿಟ್‌ಗಳನ್ನು ಖರೀದಿಸಿ ಶೇಖರಿಸಿದೆ.

 

ಐಸೋಲೇಶನ್‌ಗಾಗಿ ಆಸ್ಪತ್ರೆಗಳಿಗೆ ಬೆಡ್‌ಗಳ ವಿತರಣೆ

ಐಸೋಲೇಶನ್‌ಗಾಗಿ ಆಸ್ಪತ್ರೆಗಳಿಗೆ ಬೆಡ್‌ಗಳ ವಿತರಣೆ

ಕೊರೊನಾ ಸೋಂಕಿತರ ಸುರಕ್ಷತೆ ಮತ್ತು ಸಹಾಯಕ್ಕೆ ಆಸ್ಪತ್ರೆಗಳಿಗೆ 1,100ಕ್ಕೂ ಹೆಚ್ಚು ಬೆಡ್‌ಗಳನ್ನು ಈಗಾಗಲೇ ವಿತರಿಸಲಾಗಿದೆ. 24 ರಾಜ್ಯಗಳಲ್ಲಿ ಈ ಸಹಾಯದ ಜೊತೆಗೆ ಪ್ರತಿದಿನ ಇದರ ಪ್ರಮಾಣವು ಏರಿಕೆಯಾಗುತ್ತಿದೆ.

35,000 ಲೀಟರ್ ಸ್ಯಾನಿಟೈಸರ್
 

35,000 ಲೀಟರ್ ಸ್ಯಾನಿಟೈಸರ್

ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಅತ್ಯಗತ್ಯವಾಗಿರುವ ಹ್ಯಾಂಡ್ ಸ್ಯಾನಿಟೈಸರ್ ಕೂಡ ಖರೀದಿಸಲಾಗಿದೆ. 35,000 ಲೀಟರ್ ಹ್ಯಾಂಡ್ ಸ್ಯಾನಿಟೈಸರ್ ಖರೀದಿ ಮಾಡಿ ಪೂರೈಸಿದ್ದಷ್ಟೇ ಅಲ್ಲದೆ, 1.4 ಮಿಲಿಯನ್ ಲೀಟರ್‌ನಷ್ಟು ಸೋಂಕು ಹರಡುದಂತೆ ಅನುಕೂಲವಾಗು ಕೆಮಿಕಲ್ ಅನ್ನು ವಿವಿಧ ರಾಜ್ಯಗಳಿಗೆ ಪೂರೈಕೆ ಮಾಡಲಾಗಿದೆ.

ಬ್ರಿಟಿಷರ ವಿರುದ್ಧ ಸೆಟೆದು ನಿಂತು ಅದ್ಭುತ ಸಂಸ್ಥೆಗಳ ಕಟ್ಟಿದ ಜಮ್ಷೆಡ್ ಜೀ ಗೊತ್ತೆ?ಬ್ರಿಟಿಷರ ವಿರುದ್ಧ ಸೆಟೆದು ನಿಂತು ಅದ್ಭುತ ಸಂಸ್ಥೆಗಳ ಕಟ್ಟಿದ ಜಮ್ಷೆಡ್ ಜೀ ಗೊತ್ತೆ?

20 ಲಕ್ಷ ಊಟ ವಿತರಣೆ

20 ಲಕ್ಷ ಊಟ ವಿತರಣೆ

ಕೊರೊನಾವಿರುದ್ಧದ ವಾರಿಯರ್ಸ್‌ಗಳಾದ ವೈದ್ಯಕೀಯ ಸಿಬ್ಬಂದಿಗಳು, ಮೆಡಿಕಲ್ ಸಿಬ್ಬಂದಿ, ವಲಸಿಗರು ಹಾಗೂ ದಿನಗೂಲಿ ನೌಕರರಿಗೆ ಸುಮಾರು 20 ಲಕ್ಷ ಊಟವನ್ನು ಟಾಟಾ ಸಮೂಹವು ವಿತರಿಸಿದೆ. ಇದರ ಜೊತೆಗೆ ನಿರ್ಗತಿಕರು, ದಿನಗೂಲಿ ನೌಕರರು ಹಾಗೂ ವಲಸಿಗರಿಗೆ 5 ಲಕ್ಷ ಕೆಜಿ ಆಹಾರ ಧಾನ್ಯಗಳನ್ನು ನೀಡಲಾಗಿದೆ. ಇಷ್ಟೇ ಅಲ್ಲದೆ ಇದರ ಪ್ರಮಾಣವು ದಿನದಿಂದ ದಿನಕ್ಕೆ ಹೆಚ್ಚಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ.

English summary

Tata Group Commitment Against Covid-19 Fight

In this article explained how tata group committed to help against covid-19 outbreak in india
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X