For Quick Alerts
ALLOW NOTIFICATIONS  
For Daily Alerts

ಮೈಲೇಜ್ ವಿಚಾರದಲ್ಲಿ ಸುಳ್ಳು; 3.5 ಲಕ್ಷ ಪಾವತಿಗೆ ಟಾಟಾ ಮೋಟಾರ್ಸ್ ಗೆ ಸೂಚನೆ

|

ಟಾಟಾ ಇಂಡಿಗೋ ಮೈಲೇಜ್ ವಿಚಾರವಾಗಿ ದಾರಿ ತಪ್ಪಿಸುವಂಥ ಜಾಹೀರಾತು ನೀಡಿದ್ದಕ್ಕಾಗಿ 3.5 ಲಕ್ಷ ರುಪಾಯಿ ಪರಿಹಾರ ಪಾವತಿಸುವಂತೆ ಗ್ರಾಹಕ ಆಯೋಗದ ಸರ್ವೋನ್ನತ ಸಂಸ್ಥೆಯಾದ ಎನ್ ಸಿಡಿಆರ್ ಸಿಯಿಂದ ಟಾಟಾ ಮೋಟಾರ್ಸ್ ಗೆ ಕೇಳಲಾಗಿದೆ. ಜಾಹೀರಾತಿನಲ್ಲಿ ತೋರಿಸಿದ ಮೈಲೇಜ್ ವಿಚಾರವನ್ನೇ ನಂಬಿಕೊಂಡು ಗ್ರಾಹಕರು ಖರೀದಿ ಮಾಡಿದ್ದಾರೆ ಎಂಬ ಅಂಶವು ಆಯೋಗದ ಗಮನಕ್ಕೆ ಬಂದಿದೆ.

ಆದರೆ, ಎರಡು ಬೇರೆ ದಿನಗಳಲ್ಲಿ ನಡೆಸಿದ ಪರೀಕ್ಷಾರ್ಥ ಚಾಲನೆಯಲ್ಲಿಯೂ ಕಂಪೆನಿಯು ನೀಡಿದ ಭರವಸೆಯಷ್ಟು ಕಾರಿನ ಮೈಲೇಜ್ ಬಂದಿಲ್ಲ. ನ್ಯಾಷನಲ್ ಕನ್ಸ್ಯೂಮರ್ ಡಿಸ್ ಪ್ಯೂಟ್ಸ್ ರೀಡ್ರಸಲ್ ಕಮಿಷನ್ (ಎನ್ ಸಿಡಿಆರ್ ಸಿ)ನಿಂದ ಟಾಟಾ ಮೋಟಾರ್ಸ್ ಗೆ ಸೂಚನೆ ನೀಡಿದ್ದು, ಕೋಲ್ಕತ್ತಾದ ಪ್ರದೀಪ್ತ ಕುಂಡು ಅವರಿಗೆ ಎರಡು ಲಕ್ಷ ರುಪಾಯಿ ಪರಿಹಾರ ನೀಡಬೇಕು ಮತ್ತು ಗ್ರಾಹಕ ಕಲ್ಯಾಣ ನಿಧಿಗೆ 1.5 ಲಕ್ಷ ಪಾವತಿಸುವಂತೆ ಸೂಚಿಸಲಾಗಿದೆ.

ಟಾಟಾ ಮೋಟಾರ್ಸ್ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಎನ್ ಸಿಡಿಆರ್ ಸಿ ತಿರಸ್ಕರಿಸಿದ್ದು, ರಾಜ್ಯ ಆಯೋಗವು ನೀಡಿದ್ದ ಆದೇಶವನ್ನು ಎತ್ತಿ ಹಿಡಿದಿದೆ. ಜಾಹೀರಾತು ಮೂಲಕ ಗ್ರಾಹಕರ ದಿಕ್ಕು ತಪ್ಪಿಸಲಾಗಿದೆ ಎಂದು 3.5 ಲಕ್ಷ ರುಪಾಯಿ ಪಾವತಿಸಲು ತಿಳಿಸಲಾಗಿದೆ.

ಮೈಲೇಜ್ ಸುಳ್ಳು; 3.5 ಲಕ್ಷ ಪಾವತಿಗೆ ಟಾಟಾ ಮೋಟಾರ್ಸ್ ಗೆ ಸೂಚನೆ

ಪ್ರತಿ ಲೀಟರ್ ಗೆ 25 ಕಿ.ಮೀ. ಮೈಲೇಜ್ ನೀಡುತ್ತದೆ ಎಂದು ಜಾಹೀರಾತಿನಲ್ಲಿ ತೋರಿಸಿದ್ದನ್ನು ಕುಂಡು ಅವರು 2011ರಲ್ಲಿ ಟಾಟಾ ಇಂಡಿಗೋ ಖರೀದಿಸಿದ್ದರು. ಆದರೆ ಭರವಸೆ ನೀಡಿದಷ್ಟು ಮೈಲೇಜ್ ಬಂದಿರಲಿಲ್ಲ. "ಭಾರತದ ಅತ್ಯಂತ ಮಿತವ್ಯಯಿ ಇಂಧನದ ಕಾರು, ಈ ಕೊಡುಗೆ ಸೀಮಿತ ಅವಧಿಗೆ ಮಾತ್ರ" ಎಂದು ಜಾಹೀರಾತಿನಲ್ಲಿ ಹೇಳಲಾಗಿತ್ತು.

ಯಾವಾಗ ಕಾರು ಬದಲಿಸಿಕೊಡಲು ಕಂಪೆನಿ ನಿರಾಕರಿಸಿತ್ತೋ ಕುಂಡು ಜಿಲ್ಲಾ ಆಯೋಗದ ಮೊರೆ ಹೋಗಿದ್ದರು. ವಾಹನದ ವೆಚ್ಚ 4.8 ಲಕ್ಷ, ಪರಿಹಾರ 5 ಲಕ್ಷ ಮತ್ತು ವೆಚ್ಚ 10 ಸಾವಿರ ರುಪಾಯಿ ನೀಡುವಂತೆ ಟಾಟಾ ಮೋಟಾರ್ಸ್ ಗೆ ನಿರ್ದೇಶಿಸಲಾಗಿತ್ತು. ಆ ಆದೇಶದ ವಿರುದ್ಧವಾಗಿ ಅಲ್ಲಿಂದ ರಾಜ್ಯ ಆಯೋಗದ ಬಳಿ ಟಾಟಾ ಮೋಟಾರ್ಸ್ ಮೇಲ್ಮನವಿ ಸಲ್ಲಿಸಿತ್ತು.

English summary

Tata Motors Asked To Pay 3.5 Lakh Compensation By NCDRC

NCDRC asked Tata Motors to pay 3.5 lakh compensation for misleading advertisement about mileage.
Story first published: Thursday, March 5, 2020, 20:07 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X