For Quick Alerts
ALLOW NOTIFICATIONS  
For Daily Alerts

ಟಾಟಾ ಮೋಟಾರ್ಸ್ ಬಗ್ಗೆ ಶಾಕಿಂಗ್ ವರದಿ ನೀಡಿದ CLSA ಬ್ರೋಕರೇಜ್ ಸಂಸ್ಥೆ

By ಅನಿಲ್ ಆಚಾರ್
|

ಕೊರೊನಾಗೆ ಸಂಬಂಧಿಸಿದಂತೆ ಇರುವ ಅಡೆ- ತಡೆಗಳು, ಪ್ರಯಾಣಿಕರ ಹಾಗೂ ವಾಣಿಜ್ಯ ವಾಹನಗಳಿಗೆ ಬೇಡಿಕೆ ಮತ್ತೆ ಚಿಗಿತುಕೊಳ್ಳುವ ಭರವಸೆ ಇಲ್ಲದಿರುವುದು ಹಾಗೂ ಹೆಚ್ಚುತ್ತಿರುವ ಸಾಲದ ಮಟ್ಟದಿಂದ ಟಾಟಾ ಮೋಟಾರ್ಸ್ ಗೆ ಯಾವುದೇ ಈಕ್ವಿಟಿ ಮೌಲ್ಯ ಇಲ್ಲ ಎಂದು CLSA ಬ್ರೋಕರೇಜ್ ಸಂಸ್ಥೆ ವರದಿ ನೀಡಿದೆ.

"ನಾವು ಟಾಟಾ ಮೋಟಾರ್ಸ್ ನ ಭಾರತದ ವ್ಯವಹಾರಕ್ಕೆ ಈಕ್ವಿಟಿಗೆ ಸೊನ್ನೆ ಮೌಲ್ಯ ನೀಡ್ತೀವಿ" ಎಂದು ಆ ಸಂಸ್ಥೆ ತಿಳಿಸಿದೆ. ಇನ್ನು ವಾಹನ ವಲಯದ ತಜ್ಞರ ಪ್ರಕಾರ, ಕೊರೊನಾದ ಕಾರಣಕ್ಕೆ ಈ ಆರ್ಥಿಕ ವರ್ಷದಲ್ಲಿ ಜಿಡಿಪಿ ಕುಸಿತವಾದಲ್ಲಿ 40 ಪರ್ಸೆಂಟ್ ವಾಹನ ಮಾರಾಟ ಪ್ರಮಾಣ ಇಳಿಕೆ ಕಾಣುತ್ತದೆ.

ಟಾಟಾ ಮೊಟಾರ್ಸ್ ವ್ಯವಹಾರದಲ್ಲಿ ಜೆಎಲ್ ಆರ್ ಪಾಲು 79 ಪರ್ಸೆಂಟ್

ಟಾಟಾ ಮೊಟಾರ್ಸ್ ವ್ಯವಹಾರದಲ್ಲಿ ಜೆಎಲ್ ಆರ್ ಪಾಲು 79 ಪರ್ಸೆಂಟ್

ಟಾಟಾ ಮೋಟಾರ್ಸ್ ಕಂಪೆನಿಯ ಪಾಲಿಗೆ ಮೌಲ್ಯ ಅಂತಿದ್ದಲ್ಲಿ, ಅದರ ವಿಲಾಸಿ ಕಾರು ಸೆಗ್ಮೆಂಟ್ ಆದ ಜಾಗ್ವಾರ್ ಲ್ಯಾಂಡ್ ರೋವರ್ (JLR) ಘಟಕಕ್ಕೆ ಮಾತ್ರ ಎಂದು ವರದಿಯಲ್ಲಿ ಹೇಳಲಾಗಿದೆ. ಆರ್ಥಿಕ ವರ್ಷ 2020ರಲ್ಲಿ ಮೊದಲ ಮೂರು ತ್ರೈ ಮಾಸಿಕದಲ್ಲಿ ಟಾಟಾ ಮೋಟಾರ್ಸ್ ನ ಒಟ್ಟಾರೆ ವ್ಯವಹಾರದಲ್ಲಿ ಜಾಗ್ವಾರ್ ನ ಪಾಲು 79 ಪರ್ಸೆಂಟ್. ಇದು ಕಂಪೆನಿಯ ಹಣಕಾಸು ವರದಿಯಲ್ಲಿ ಗೊತ್ತಾಗುತ್ತದೆ. ಟಾಟಾ ಮೋಟಾರ್ಸ್ ನಿಂದ ವರ್ಷದ ಕೊನೆ ತ್ರೈ ಮಾಸಿಕವಾದ ಮಾರ್ಚ್ ಅಂತ್ಯದ ಫಲಿತಾಂಶ ಬರಬೇಕಿದೆ. ಚೀನಾದಲ್ಲಿ ಕೊರೊನಾ ಕಾಣಿಸಿಕೊಂಡಿದ್ದರಿಂದ ಜಾಗ್ವಾರ್ ನಲ್ಲಿ ಆಗಬೇಕಿದ್ದ ಬದಲಾವಣೆಗೆ ಬ್ರೇಕ್ ಬಿತ್ತು. ಇಲ್ಲದಿದ್ದಲ್ಲಿ ಬ್ರಿಟಿಷ್ ಕಾರು ತಯಾರಿಕಾ ಕಂಪೆನಿ ಹಾಗೂ ಚೀನಾದ ಸಹಯೋಗದಲ್ಲಿ ಚೆರಿ ಜಾಗ್ವಾರ್ ಲ್ಯಾಂಡ್ ರೋವರ್ ಆಟೋಮೋಟಿವ್ ಕಂಪೆನಿ ಆರಂಭವಾಗಬೇಕಿತ್ತು. ಅದು ಈಗಾಗಲೇ 75 ಪರ್ಸೆಂಟ್ ನಷ್ಟು ಬಜೆಟ್ ಉತ್ಪಾದನೆ ಆರಂಭಿಸಿದೆ.

ಕಮರ್ಷಿಯಲ್ ವೆಹಿಕಲ್ ಸೆಗ್ಮೆಂಟ್ ಗೆ ದೊಡ್ಡ ಪೆಟ್ಟು

ಕಮರ್ಷಿಯಲ್ ವೆಹಿಕಲ್ ಸೆಗ್ಮೆಂಟ್ ಗೆ ದೊಡ್ಡ ಪೆಟ್ಟು

ಇನ್ನು ಟಾಟಾ ಮೋಟಾರ್ಸ್ ವಾಣಿಜ್ಯ ವಾಹನಗಳ ಮಾರಾಟಕ್ಕೆ ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ಪೆಟ್ಟು ಬಿದ್ದಿದೆ. ಕಳೆದ ವರ್ಷಕ್ಕೆ ಇದೇ ಅವಧಿಗೆ ಹೋಲಿಸಿದಲ್ಲಿ ಈ ಬಾರಿ 32 ಪರ್ಸೆಂಟ್ ಮಾರಾಟ ಕುಸಿದಿದೆ. ಒಟ್ಟಾರೆ ಆ ಕಮರ್ಷಿಯಲ್ ವಾಹನ ಕ್ಷೇತ್ರದ ನಷ್ಟವು ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷಕ್ಕೆ 29 ಪರ್ಸೆಂಟ್ ಕುಸಿದಿದೆ. ಇನ್ನು ಪ್ರಯಾಣಿಕರ ವಾಹನ ಸೆಗ್ಮೆಂಟ್ ನಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಟಾಟಾ ಕಂಪೆನಿಯದು 40 ಪರ್ಸೆಂಟ್ ಮಾರಾಟ ಕುಸಿದಿದೆ. ಇನ್ನು ಇಡೀ ವಾಹನೋದ್ಯಮದ ಲೆಕ್ಕ ಹೇಳಬೇಕೆಂದರೆ, ಕಳೆದ ವರ್ಷಕ್ಕೆ ಹೋಲಿಸಿದರೆ 18 ಪರ್ಸೆಂಟ್ ಕುಸಿದಿದೆ. ಟಾಟಾ ಮೋಟಾರ್ಸ್ ನ ವಾಣಿಜ್ಯ ವಾಹನಗಳ ಮಾರಾಟ ಕಡಿಮೆಯಾದರೂ ಜಾಗ್ವಾರ್ ಲ್ಯಾಂಡ್ ರೋವರ್ ನಿಂದ ಬಂದ ಲಾಭವು ಸರಿತೂಗಿಸಿತು ಎಂದು ಈ ಹಿಂದೆ ಮಾಧ್ಯಮಗಳೇ ವರದಿ ಮಾಡಿದ್ದವು.

ಸಾಲದ ಮೊತ್ತ  68,100 ಕೋಟಿ ರುಪಾಯಿ ಆಗಬಹುದು

ಸಾಲದ ಮೊತ್ತ 68,100 ಕೋಟಿ ರುಪಾಯಿ ಆಗಬಹುದು

ಟಾಟಾ ಮೋಟಾರ್ಸ್ ಗ್ರೂಪ್ ಸಿಎಫ್ ಒ (ಚೀಫ್ ಫೈನಾನ್ಷಿಯಲ್ ಆಫೀಸರ್) ಪಿ.ಬಿ. ಬಾಲಾಜಿ ಮಾತನಾಡಿ, ಈ ವರ್ಷ ಕಂಪೆನಿಯು ಸಕಾರಾತ್ಮಕ ಮುಕ್ತ ಹಣಕಾಸು ಹರಿವು (FCF) 2400 ಕೋಟಿ ರುಪಾಯಿಯನ್ನು ಡಿಸೆಂಬರ್ 2019ರ ಅಂತ್ಯಕ್ಕೆ ದಾಖಲಿಸಿದೆ. ವರ್ಕಿಂಗ್ ಕ್ಯಾಪಿಟಲ್ (ಕೆಲಸ ನಿರ್ವಹಿಸಲು ಬೇಕಾದ ಬಂಡವಾಳ) ಹಾಗೂ ದಾಸ್ತಾನಿನ ಮೇಲೆ ಕಠಿಣ ಕಣ್ಗಾವಲು ಇಡುವ ಮೂಲಕ ಇದನ್ನು ಸಾಧಿಸಲಾಗಿದೆ ಎಂದು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ಆದರೂ CLSA ವರದಿ ಪ್ರಕಾರ, ಟಾಟಾ ಕಂಪೆನಿಯ ಒಟ್ಟಾರೆ ನಿವ್ವಳ ಸಾಲವು 2019ರ ಆರ್ಥಿಕ ವರ್ಷದಲ್ಲಿ 28,400 ಕೋಟಿ ರುಪಾಯಿ ಇದ್ದದ್ದು 2022ರ ಆರ್ಥಿಕ ವರ್ಷದ ಹೊತ್ತಿಗೆ 68,100 ಕೋಟಿ ರುಪಾಯಿ ಆಗಬಹುದು. ಇನ್ನು ಮುಂದೆ ಈಕ್ವಿಟಿಗೆ ಏನೇ ಸೇರ್ಪಡೆಯಾದರೂ ಅದು ನಷ್ಟವನ್ನು ತುಂಬಿಕೊಳ್ಳಲು ಬಳಸಲಾಗುತ್ತದೆ. ಆದ್ದರಿಂದ ಭಾರತದ ವ್ಯವಹಾರಕ್ಕೆ ಯಾವುದೇ ಈಕ್ವಿಟಿ ಮೌಲ್ಯವನ್ನು ನಾವು ಕಟ್ಟುವುದಿಲ್ಲ ಎಂದು ಸಂಸ್ಥೆಯು ಹೇಳಿದೆ. ಜಾಗ್ವಾರ್ ಲ್ಯಾಂಡ್ ರೋವರ್ ಮತ್ತು ಭಾರತದ ವಾಣಿಜ್ಯ ವಾಹನಗಳ ವ್ಯವಹಾರವು 2022ರ ಆರ್ಥಿಕ ವರ್ಷದಲ್ಲಿ ಚೇತರಿಸಿಕೊಳ್ಳಬಹುದು, ಜತೆಗೆ ಪ್ರಯಾಣಿಕರ ವಾಹನಗಳ ಮಾರಾಟದ ಹಿನ್ನಡೆ ಮುಂದುವರಿಯಲಿದೆ ಎನ್ನಲಾಗಿದೆ.

English summary

Tata Motors India Business Hold Zero Equity Value: Report

CLSA brokerage firm reported that, Tata motors India business hold zero equity value. Here is the details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X