For Quick Alerts
ALLOW NOTIFICATIONS  
For Daily Alerts

ಟಾಟಾ ಸ್ಟೀಲ್ ಜೂನ್ ತ್ರೈಮಾಸಿಕ ನಷ್ಟ 4,648 ಕೋಟಿ ರುಪಾಯಿ

|

ಭಾರತದ ಅತಿ ದೊಡ್ಡ ಖಾಸಗಿ ಉಕ್ಕು ತಯಾರಿಕೆ ಕಂಪೆನಿ ಟಾಟಾ ಸ್ಟೀಲ್ 2020ರ ಏಪ್ರಿಲ್ ನಿಂದ ಜೂನ್ ತ್ರೈಮಾಸಿಕದಲ್ಲಿ 4,648 ಕೋಟಿ ರುಪಾಯಿ ನಿವ್ವಳ ನಷ್ಟ (ನೆಟ್ ಲಾಸ್) ದಾಖಲಿಸಿದೆ. ದೇಶೀಯ ಹಾಗೂ ಯುರೋಪಿಯನ್ ಮಾರುಕಟ್ಟೆಯಲ್ಲಿ ಉತ್ಪಾದನೆ ಮತ್ತು ಮಾರಾಟ ಕಡಿಮೆಯಾದ ಹಿನ್ನೆಲೆಯಲ್ಲಿ ನಷ್ಟವಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಟಾಟಾ ಸ್ಟೀಲ್ 714 ಕೋಟಿ ರುಪಾಯಿ ಲಾಭ ಗಳಿಸಿತ್ತು.

ಕಾರ್ಯ ನಿರ್ವಹಣೆ ಆದಾಯ ಕಳೆದ ವರ್ಷಕ್ಕೆ ಹೋಲಿಸಿದಲ್ಲಿ 32% ಇಳಿಕೆಯಾಗಿ, 23,812 ಕೋಟಿ ರುಪಾಯಿ ಮುಟ್ಟಿದೆ. ಜಾಗತಿಕವಾಗಿ 22% ಮಾರಾಟ ಕಡಿಮೆ ಆಗಿದೆ. ಈ ತ್ರೈಮಾಸಿಕದಲ್ಲಿ ಜಾಗತಿಕ ಮಾರಾಟ ಪ್ರಮಾಣವು 6.34 ಮಿಲಿಯನ್ ಟನ್ (mt)ನಿಂದ 4.93 ಮಿಲಿಯನ್ ಟನ್ ಗೆ(mt) ಇಳಿಕೆಯಾಗಿದೆ.

ಟಾಟಾ ಸ್ಟೀಲ್ ಜೂನ್ ತ್ರೈಮಾಸಿಕ ನಷ್ಟ 4,648 ಕೋಟಿ ರುಪಾಯಿ

ಕಳೆದ ವರ್ಷಕ್ಕಿಂತ ಈ ವರ್ಷ ಕಾರ್ಯ ನಿರ್ವಹಣೆ ವೆಚ್ಚವನ್ನು 19% ಕಡಿಮೆ ಆಗಿದ್ದು, 27,892 ಕೋಟಿಗೆ ಇಳಿದಿದೆ. ಮಾರುಕಟ್ಟೆ ನಿರೀಕ್ಷೆ ಮಾಡಿದ್ದಕ್ಕಿಂತ ಎರಡು ಪಟ್ಟು ಹೆಚ್ಚು ನಷ್ಟವಾಗಿದೆ. ಉತ್ಪಾದನೆ ಪ್ರಮಾಣ ಜೂನ್ ಕೊನೆ ಹೊತ್ತಿಗೆ 90% ಶುರುವಾದರೆ, ಆ ನಂತರ 95% ರಷ್ಟು ಬಂದಿದೆ.

English summary

Tata Steel Q1 results: Tata Steel FY21 June Quarter Net Loss 4648 Crore

India's largest steel producer Tata steel FY21 June quarter recorded net loss 4648 crore rupees.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X