For Quick Alerts
ALLOW NOTIFICATIONS  
For Daily Alerts

ಬಿಗ್‌ ಬಾಸ್ಕೆಟ್‌ನಲ್ಲಿ ಸುಮಾರು 9,500 ಕೋಟಿ ರೂಪಾಯಿ ಹೂಡಿಕೆ ಮಾಡಲಿರುವ ಟಾಟಾ ಗ್ರೂಪ್

|

ಆನ್‌ಲೈನ್ ಪ್ಲಾಟ್‌ಫಾರ್ಮ್ ಬಿಗ್‌ಬಾಸ್ಕೆಟ್‌ನಲ್ಲಿ, ಟಾಟಾ ಗ್ರೂಪ್ ಸುಮಾರು 9500 ಕೋಟಿ ರೂಪಾಯಿ ಹೂಡಿಕೆ ಮೂಲಕ ಶೇಕಡಾ 68ರಷ್ಟು ಪಾಲುದಾರಿಕೆಯನ್ನು ತನ್ನದಾಗಿಸಿಕೊಳ್ಳಲಿದೆ.

 

ಬಹುತೇಕ ಎಲ್ಲಾ ವಲಯಗಳ ಉದ್ಯಮಗಳಲ್ಲಿ ತೊಡಗಿಸಿಕೊಂಡಿರುವ ಟಾಟಾ ಗ್ರೂಪ್, ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಇ-ಕಾಮರ್ಸ್ ಬಿಗ್‌ಬಾಸ್ಕೆಟ್‌ನಲ್ಲಿ ಗರಿಷ್ಠ ಪಾಲುದಾರಿಕೆ ಪಡೆಯಲು ಮುಂದಾಗಿದೆ. ಬೆಂಗಳೂರು ಮೂಲದ ಸ್ಟಾರ್ಟ್‌ಅಪ್‌ ಬಿಗ್‌ಬಾಸ್ಕೆಟ್‌ನೊಂದಿಗೆ ಈ ಒಪ್ಪಂದಕ್ಕೆ ಬರಲಾಗಿದೆ.

 
ಬಿಗ್‌ ಬಾಸ್ಕೆಟ್‌ನಲ್ಲಿ 1.2 ಬಿಲಿಯನ್ ಡಾಲರ್ ಹೂಡಿಕೆ ಮಾಡಲಿರುವ ಟಾಟಾ

ಆನ್‌ಲೈನ್ ದಿನಸಿ ವಸ್ತುಗಳ ಪೂರೈಸುವ ಬಿಗ್‌ಬಾಸ್ಕೆಟ್‌ ಸುಮಾರು 13,500 ಕೋಟಿ ರೂ. (ಸುಮಾರು 1.85 ಬಿಲಿಯನ್ ಡಾಲರ್) ಮೌಲ್ಯವಿದೆ. ಹರಿ ಮೆನನ್ ನೇತೃತ್ವದ ಬೆಂಗಳೂರು ಕಂಪನಿಯು ಯುನಿಕಾರ್ನ್ ಕ್ಲಬ್‌ಗೆ ಪ್ರವೇಶಿಸಿದ ಸುಮಾರು 20 ತಿಂಗಳ ನಂತರ ಈ ಒಪ್ಪಂದಕ್ಕೆ ಬರಲಾಗಿದೆ.

ಭಾರತದ ಆರ್ಥಿಕತೆ ಚೇತರಿಕೆಯ ಹಾದಿಯಲ್ಲಿದೆ: ಎಸ್‌&ಪಿಭಾರತದ ಆರ್ಥಿಕತೆ ಚೇತರಿಕೆಯ ಹಾದಿಯಲ್ಲಿದೆ: ಎಸ್‌&ಪಿ

ಇನ್ನು ಟಾಟಾ ಗ್ರೂಪ್ ಹಾಗೂ ಬಿಗ್‌ ಬಾಸ್ಕೆಟ್‌ ನಡುವಿನ ಈ ಒಪ್ಪಂದದಿಂದಾಗಿ ಜಾಕ್‌ ಮಾ ನಿಯಂತ್ರಿತ ಅಲಿಬಾಬಾ ಸೇರಿದಂತೆ ಹಲವು ಹೂಡಿಕೆದಾರರು ಬಿಗ್‌ ಬಾಸ್ಕೆಟ್‌ನಿಂದ ಹೂಡಿಕೆಯನ್ನು ಹಿಂಪಡೆಯುವ ಪರಿಸ್ಥಿತಿ ಸೃಷ್ಟಿಯಾಗಿದೆ. ಈ ಬಗ್ಗೆ ಟಾಟಾ ಗ್ರೂಪ್, ಬಿಗ್‌ ಬಾಸ್ಕೆಟ್, ಅಲಿಬಾಬಾ ಗ್ರೂಪ್ ಪ್ರತಿಕ್ರಿಯೆಗೆ ನಿರಾಕರಿಸಿದೆ.

English summary

Tata To Buy 68% In BigBasket For Rs 9500 Crore Deal

Tata Group in the final stages of acquiring a majority stake of 68 per cent in Supermarket Grocery Supplies
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X