For Quick Alerts
ALLOW NOTIFICATIONS  
For Daily Alerts

ಐಟಿ ರಿಟರ್ನ್ಸ್ ಸಲ್ಲಿಸದ ಕಾರಣ: 1.63 ಲಕ್ಷ ಸಂಸ್ಥೆಗಳ GST ನೋಂದಣಿ ರದ್ದು

|

ಐಟಿ ರಿಟರ್ನ್ಸ್ ಸಲ್ಲಿಸದ ಕಾರಣದಿಂದಾಗಿ ತೆರಿಗೆ ಅಧಿಕಾರಿಗಳು ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿನಲ್ಲಿ 1.63 ಲಕ್ಷ ಸಂಸ್ಥೆಗಳ ಜಿಎಸ್‌ಟಿ ನೋಂದಣಿಯನ್ನು ರದ್ದುಗೊಳಿಸಿವೆ ಎಂದು ಮೂಲಗಳು ತಿಳಿಸಿವೆ. ಜೊತೆಗೆ ದೇಶಾದ್ಯಂತ 4,586 ಕ್ಕೂ ಹೆಚ್ಚು ನಕಲಿ ಜಿಎಸ್‌ಟಿಐನ್ ಘಟಕಗಳ ವಿರುದ್ಧ 1,430 ಪ್ರಕರಣಗಳನ್ನು ದಾಖಲಿಸಲಾಗಿದೆ.

ಐಟಿ ರಿಟರ್ನ್ಸ್ ಜೊತೆಗೆ ಆಗಸ್ಟ್ 21, 2020 ರಿಂದ ನವೆಂಬರ್ 16, 2020 ರ ನಡುವೆ ಆಧಾರ್ ದೃಢೀಕರಣಗೊಳಿಸದ 720 ಡೀಮ್ಡ್ ನೋಂದಣಿಗಳನ್ನು ಗುರುತಿಸಿದ್ದು, ಅದರಲ್ಲಿ 55 ವ್ಯತ್ಯಾಸ ಕಂಡುಬಂದಿರುವ ನೋಂದಣಿ ರದ್ದತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಈ ಮೇಲಿನ ಬೆಳವಣಿಗೆಯು ನಕಲಿ ಸಂಸ್ಥೆಗಳು, ಫ್ಲೈ-ಬೈ-ನೈಟ್ ಆಪರೇಟರ್‌ಗಳು ಮತ್ತು ನಕಲಿ ವ್ಯಾಪಾರ ಘಟಕದ ಭೀತಿಯನ್ನು ನಿಭಾಯಿಸಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

IT ರಿಟರ್ನ್ಸ್ ಸಲ್ಲಿಸಿಲ್ಲ: 1.63 ಲಕ್ಷ ಸಂಸ್ಥೆಗಳ GST ನೋಂದಣಿ ರದ್ದು

ಐಟಿ ಅಧಿಕಾರಿಗಳು ಈ ವರ್ಷ ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ 1,63,042 ಜಿಎಸ್‌ಟಿ ನೋಂದಣಿಗಳನ್ನು ರದ್ದುಗೊಳಿಸಿವೆ. ಏಕೆಂದರೆ ಆರು ತಿಂಗಳಿಗಿಂತ ಹೆಚ್ಚು ಕಾಲ ತಮ್ಮ ಜಿಎಸ್‌ಟಿಆರ್ -3 ಬಿ ರಿಟರ್ನ್ಸ್ ಸಲ್ಲಿಸದ ಈ ಎಲ್ಲಾ ಜಿಎಸ್‌ಟಿಐಎನ್ ಘಟಕಗಳಿಗೆ ಮೊದಲು ರದ್ದತಿ ನೋಟಿಸ್ ನೀಡಲಾಗಿದೆ ಮತ್ತು ನಂತರ ಪ್ರಮಾಣಿತ ಕಾರ್ಯಾಚರಣಾ ವಿಧಾನದ ಪ್ರಕಾರ ಅವರ ನೋಂದಣಿಗಳನ್ನು ರದ್ದುಪಡಿಸಲಾಗಿದೆ ಎಂದು ಕಂದಾಯ ಇಲಾಖೆ ಮೂಲಗಳು ತಿಳಿಸಿವೆ.

ಇದಲ್ಲದೆ, 2020 ರ ಡಿಸೆಂಬರ್ 1 ರವರೆಗೆ ಆರು ತಿಂಗಳಿಗಿಂತ ಹೆಚ್ಚು ಕಾಲ ತಮ್ಮ ಜಿಎಸ್‌ಟಿಆರ್ -3 ಬಿ ರಿಟರ್ನ್ಸ್ ಸಲ್ಲಿಸದ 28,635 ತೆರಿಗೆದಾರರನ್ನು ಗುರುತಿಸಲಾಗಿದೆ ಮತ್ತು ಈ ಪ್ರಕರಣಗಳಲ್ಲಿ ಸು-ಮೋಟೋ ರದ್ದತಿ ಪ್ರಕ್ರಿಯೆಯನ್ನು ಪ್ರಾರಂಭಿಸಲು ಎಲ್ಲಾ ಜಿಎಸ್‌ಟಿ ಆಯುಕ್ತರಿಗೆ ನಿರ್ದೇಶಿಸಲಾಗಿದೆ.

ಇದರ ಜೊತೆಗೆ ನಕಲಿ ಇನ್‌ವಾಯ್ಸ್ ವಂಚನೆಗಳ ವಿರುದ್ಧ ನವೆಂಬರ್ ಎರಡನೇ ವಾರದಲ್ಲಿ ರಾಷ್ಟ್ರವ್ಯಾಪಿ ಚಾಲನೆ ನೀಡಿದ ಒಂದು ತಿಂಗಳೊಳಗೆ, ಜಿಎಸ್‌ಟಿ ಗುಪ್ತಚರ ನಿರ್ದೇಶನಾಲಯ (ಡಿಜಿಜಿಐ) ಮತ್ತು ಕೇಂದ್ರ ಜಿಎಸ್‌ಟಿ ಕಮಿಷನರೇಟ್‌ಗಳು ಈವರೆಗೆ ನಾಲ್ಕು ಚಾರ್ಟರ್ಡ್ ಅಕೌಂಟೆಂಟ್‌ಗಳು ಮತ್ತು ಓರ್ವ ಮಹಿಳೆ ಸೇರಿದಂತೆ 132 ಜನರನ್ನು ಬಂಧಿಸಿವೆ.

English summary

Tax Officers Have Cancelled Over 1.63 Lakh GST Registrations In 2 Months

Tax officers have cancelled GST registrations of over 1.63 lakh entities in October and November for non-filing of returns, sources said.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X