For Quick Alerts
ALLOW NOTIFICATIONS  
For Daily Alerts

2025ರ ಹೊತ್ತಿಗೆ ಕಚೇರಿಯಲ್ಲಿ ಉದ್ಯೋಗಿಗಳ ಕೆಲಸ 25% ಮಾತ್ರ :ಟಿಸಿಎಸ್

|

ಭಾರತದ ಅತಿದೊಡ್ಡ ಐಟಿ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಮುಂದಿನ ಐದು ವರ್ಷಗಳಲ್ಲಿ ತನ್ನ ನೌಕರರು ಕಚೇರಿಯಲ್ಲಿ ಕೆಲಸ ಮಾಡುವ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡುವ ಗುರಿಯನ್ನು ಹೊಂದಿದೆ ಎಂದು ಕಂಪನಿಯ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ. ಕೊರೊನಾವೈರಸ್‌ನಿಂದಾಗಿ ಎದುರಿಸಿದ ಸವಾಲುಗಳು ಈ ನಿರ್ಧಾರವನ್ನು ತೆಗೆದುಕೊಳ್ಳಲು ಉತ್ತೇಜಿಸಿದೆ ಎಂದು ಕಂಪನಿ ಹೇಳಿದೆ.

 

"ಎಲ್ಲಾ 100 ರಷ್ಟು ಕಾರ್ಯ ಸಾಧನೆಗೆ 25 ಪರ್ಸೆಂಟ್‌ ಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದುವ ಅಗತ್ಯವಿಲ್ಲ" ಎಂದು ಕಂಪನಿಯು ನಂಬಿದೆ ಎಂದು ಟಿಸಿಎಸ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್ ಗಣಪತಿ ಸುಬ್ರಮಣ್ಯಂ ಹೇಳಿದರು. 'ಉದ್ಯೋಗಿಗಳು ತಮ್ಮ ಕಚೇರಿಯಲ್ಲಿ 25 ಪರ್ಸೆಂಟ್ ಸಮಯವನ್ನು ಕಳೆಯುವುದು ಸಾಕು ಎಂದು ನಾನು ಭಾವಿಸುತ್ತೇನೆ" ಎಂದು ಹೇಳಿದ ಅವರು, ಎಲ್ಲಾ ಸಮಯದಲ್ಲೂ ಪ್ರತಿಯೊಬ್ಬ ಉದ್ಯೋಗಿಗಳು ಕಚೇರಿಯಲ್ಲಿ ಇರಬೇಕಾಗಿಲ್ಲ ಎಂದಿದ್ದಾರೆ.

2025ರ ಹೊತ್ತಿಗೆ ಕಚೇರಿಯಲ್ಲಿ ಉದ್ಯೋಗಿಗಳ ಕೆಲಸ 25% ಮಾತ್ರ :ಟಿಸಿಎಸ್

ಐಟಿ ಕಂಪನಿಗಳು ಈ ಹಿಂದೆ ಉದ್ಯೋಗಿಗಳಿಗೆ ಮನೆಯಿಂದ ಸೀಮಿತ ದಿನಗಳವರೆಗೆ ಮಾತ್ರ ಕೆಲಸ ಮಾಡುವ ಆಯ್ಕೆಯನ್ನು ನೀಡಿದ್ದವು, ಆದರೆ ಕೊರೊನಾವೈರಸ್ ಸೋಂಕಿನಿಂದಾಗಿ ಶಾಶ್ವತ ವರ್ಕ್‌ ಫ್ರಮ್ ಹೋಮ್ ಕಡೆಗೆ ಕಂಪನಿಗಳು ಮುಖ ಮಾಡುತ್ತಿವೆ.

ಮಾರ್ಚ್‌ನಿಂದ, ಭಾರತದ ಸುಮಾರು ನಾಲ್ಕು ಮಿಲಿಯನ್ ಐಟಿ ಉದ್ಯೋಗಿಗಳಲ್ಲಿ 80 ಪರ್ಸೆಂಟ್‌ನಷ್ಟು ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುವುದಕ್ಕೆ ಸ್ಥಳಾಂತರಗೊಂಡಿದ್ದಾರೆ ಮತ್ತು ಜಾಗತಿಕವಾಗಿ ಗ್ರಾಹಕರಿಗೆ ಸೇವೆಗಳನ್ನು ತಲುಪಿಸುತ್ತಿದ್ದಾರೆ ಎಂದು ಟಿಸಿಎಸ್ ಸಿಇಒ ರಾಜೇಶ್ ಗೋಪಿನಾಥನ್ ಮುಂಬೈ ಪ್ರಧಾನ ಕಚೇರಿಯಲ್ಲಿ ತಿಳಿಸಿದರು. ಇದು "2025 ರ ವೇಳೆಗೆ 25/25 ಮಾದರಿಯನ್ನು ಪಡೆಯಬಹುದು ಮತ್ತು, ಭವಿಷ್ಯದಲ್ಲಿ ಎಂದಿಗೂ ಮತ್ತೆ ನೂರರಷ್ಟು ಉದ್ಯೋಗಿಗಳು ಕಚೇರಿಯಿಂದ ಕೆಲಸ ಮಾಡುವುದಿಲ್ಲ ಎಂದಿದ್ದಾರೆ. ಮಾರ್ಚ್ ಅಂತ್ಯದಲ್ಲಿ ಟಿಸಿಎಸ್ 4,48,464 ಜನರಿಗೆ ಉದ್ಯೋಗ ನೀಡಿದೆ.

English summary

TCS Aims To Have 25 Percent Of Its Workforce In Office by 2025

TCS Aims To Have 25 Percent Of Its Workforce In Office by 2025
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X