For Quick Alerts
ALLOW NOTIFICATIONS  
For Daily Alerts

ಟಿಸಿಎಸ್‌ ತ್ರೈಮಾಸಿಕ ಲಾಭ ಏರಿಕೆ: 9,246 ಕೋಟಿ ರೂಪಾಯಿ

|

ಭಾರತದ ಅತಿದೊಡ್ಡ ಐಟಿ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್‌) ನಾಲ್ಕನೇ ತ್ರೈಮಾಸಿಕ ವರದಿಯನ್ನು ಪ್ರಕಟಿಸಿದ್ದು, ನಿವ್ವಳ ಲಾಭ ಶೇಕಡಾ 6.3ರಷ್ಟು ಹೆಚ್ಚಾಗಿದೆ.

 

ಮಾರ್ಚ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ಆದಾಯ ಮತ್ತು ನಿರ್ವಹಣಾ ಆದಾಯದಲ್ಲಿ ನಿರೀಕ್ಷೆಗಿಂತ ಉತ್ತಮ ಬೆಳವಣಿಗೆ ಕಂಡಿದ್ದು, 9,246 ಕೋಟಿ ರೂಪಾಯಿಗೆ ತಲುಪಿದೆ. ಕಂಪನಿಯ ಸಮಗ್ರ ಆದಾಯವು ಶೇಕಡಾ 4ರಷ್ಟು ಹೆಚ್ಚಳವಾಗಿ ಕಳೆದ ಹಣಕಾಸು ವರ್ಷದ 39,946 ಕೋಟಿಯಿಂದ 43,705 ಕೋಟಿಗೆ ತಲುಪಿದೆ.

ಟಿಸಿಎಸ್‌ ತ್ರೈಮಾಸಿಕ ಲಾಭ ಏರಿಕೆ: 9,246 ಕೋಟಿ ರೂಪಾಯಿ

ಕಳೆದ ಸಾಲಿನ ತ್ರೈಮಾಸಿಕಕ್ಕೆ ಹೋಲಿಸಿದರೆ ಕರೆನ್ಸಿಗಳ ಮೌಲ್ಯದಲ್ಲಿನ ವ್ಯತ್ಯಾಸ , ಬೇಡಿಕೆಯಲ್ಲಿನ ಚೇತರಿಕೆ ಹಾಗೂ ದೊಡ್ಡ ವ್ಯವಹಾರಗಳು ಈ ಬೆಳವಣಿಗೆಗೆ ಕಾರಣವಾಗಿದೆ.

ಷೇರುಪೇಟೆಯಲ್ಲಿ ಕರಡಿ ಕುಣಿತ: ಸೆನ್ಸೆಕ್ಸ್‌ 1,700 ಪಾಯಿಂಟ್ಸ್ ಕುಸಿತ

ಇನ್ನು ಮಾರ್ಚ್‌ ತ್ರೈಮಾಸಿಕದ ಲಾಭವನ್ನು ಡಾಲರ್ ಲೆಕ್ಕಚಾರದಲ್ಲಿ ಹೇಳುವುದಾದರೆ ಆದಾಯವು ಶೇಕಡಾ 5ರಷ್ಟು ಏರಿಕೆಗೊಂಡು 5,989 ಮಿಲಿಯನ್ ಅಮೆರಿಕನ್ ಡಾಲರ್‌ಗೆ ಏರಿಕೆಗೊಂಡಿದೆ.

ತ್ರೈಮಾಸಿಕ ಲಾಭದ ಜೊತೆಗೆ 2020-21ರ ನಾಲ್ಕನೇ ತ್ರೈಮಾಸಿಕದಲ್ಲಿ ಕಂಪನಿಗೆ 19,388 ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ. ಇದು ತ್ರೈಮಾಸಿಕ ಆಧಾರದಲ್ಲಿ ಅತಿ ಹೆಚ್ಚಿನ ಉದ್ಯೋಗಿಗಳ ಸೇರ್ಪಡೆಯಾಗಿದೆ.

English summary

TCS Q4 Result: Profit Jumps 6.3 Percent

India's Top IT Company TCS, on April 12, has reported a 6.3 percent sequential growth in March quarter consolidated profit at Rs 9,246 crore
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X