For Quick Alerts
ALLOW NOTIFICATIONS  
For Daily Alerts

ಗುಡ್‌ನ್ಯೂಸ್: 40,000 ಉದ್ಯೋಗಿಗಳನ್ನ ನೇಮಕ ಮಾಡಿಕೊಳ್ಳಲಿದೆ ಟಿಸಿಎಸ್‌

|

ಇತ್ತೀಚೆಗಷ್ಟೇ 5 ಲಕ್ಷ ಉದ್ಯೋಗಿಗಳ ಗಡಿ ದಾಟಿದ ದೇಶದ ಅತಿದೊಡ್ಡ ಐಟಿ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಉದ್ಯೋಗಾಕಾಂಕ್ಷಿಗಳಿಗೆ ಗುಡ್‌ನ್ಯೂಸ್ ನೀಡಿದೆ. ಹಣಕಾಸು ವರ್ಷ 2022-23ರಲ್ಲಿ ಟಿಸಿಎಸ್‌ ಬರೋಬ್ಬರಿ 40,000 ಹೊಸ ಉದ್ಯೋಗಿಗಳನ್ನ ನೇಮಕ ಮಾಡಿಕೊಳ್ಳಲಿದೆ.

ಹೌದು ಟಿಸಿಎಸ್ 2021-22ರ ಆರ್ಥಿಕ ವರ್ಷದಲ್ಲಿ ಭಾರತದ ಕ್ಯಾಂಪಸ್‌ಗಳಿಂದ 40,000 ಕ್ಕೂ ಹೆಚ್ಚು ಫ್ರೆಶರ್‌ಗಳನ್ನು ನೇಮಿಸಿಕೊಳ್ಳಲಿದೆ. 2020ರಲ್ಲಿ 40,000 ಪದವೀಧರರನ್ನು ಕ್ಯಾಂಪಸ್‌ಗಳಿಂದ ನೇಮಕ ಮಾಡಿಕೊಂಡಿದ್ದ ಟಿಸಿಎಸ್, ಅಷ್ಟೇ ಪ್ರಮಾಣದಲ್ಲಿ ಉದ್ಯೋಗಗಳ ನೇಮಕಾತಿಗೆ ಮುಂದಾಗಿದೆ.

40,000 ಉದ್ಯೋಗಿಗಳನ್ನ ನೇಮಕ ಮಾಡಿಕೊಳ್ಳಲಿದೆ ಟಿಸಿಎಸ್‌

ಕೊರೊನಾವೈರಸ್ ಸಾಂಕ್ರಾಮಿಕ ನಿರ್ಬಂಧಗಳ ನಡುವೆ ನೇಮಕಾತಿಯಲ್ಲಿ ಯಾವುದೇ ತೊಂದರೆಗಳನ್ನುಂಟು ಮಾಡುವುದಿಲ್ಲ ಎಂದು ಕಂಪನಿಯ ಜಾಗತಿಕ ಮಾನವ ಸಂಪನ್ಮೂಲ ಮುಖ್ಯಸ್ಥ ಮಿಲಿಂದ್ ಲಕ್ಕಾಡ್ ಹೇಳಿದ್ದಾರೆ. ಕಳೆದ ವರ್ಷ 40,000 ನೇಮಕಾತಿಗೆ ಒಟ್ಟು 3.60 ಲಕ್ಷ ಫ್ರೆಶರ್‌ಗಳು ಪ್ರವೇಶ ಪರೀಕ್ಷೆಗೆ ಹಾಜರಾಗಿದ್ದರು.

ದೇಶದಲ್ಲಿ ಪ್ರತಿಭೆ ಪೂರೈಕೆಯಲ್ಲಿ ಯಾವುದೇ ಕೊರತೆಯಿಲ್ಲ , ಆದರೆ ಅದರ ವೆಚ್ಚದ ಬಗ್ಗೆ ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್. ಗಣಪತಿ ಸುಬ್ರಮಣ್ಯಂ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಅವರು ಭಾರತೀಯ ಪ್ರತಿಭೆಗಳನ್ನು ಅವರ ಕೌಶಲ್ಯ ಮತ್ತು ಕೆಲಸದ ಸಂಸ್ಕೃತಿಯನ್ನು ಗಮನದಲ್ಲಿಟ್ಟುಕೊಂಡು ಅದ್ಭುತ ಎಂದು ಕರೆದಿದ್ದಾರೆ.

English summary

TCS To Hire 40,000 Freshers From Campuses In FY22

India's biggest IT services company TCS will be hiring over 40,000 freshers from campuses in India in the fiscal year 2021-22.
Story first published: Saturday, July 10, 2021, 10:37 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X