For Quick Alerts
ALLOW NOTIFICATIONS  
For Daily Alerts

ಭಾರತದಲ್ಲಿ ಕ್ರಿಪ್ಟೋ ಮೇಲೆ ಟಿಡಿಎಸ್: ಮಾರ್ಗಸೂಚಿ ಹೀಗಿದೆ

|

ಜುಲೈ 1, 2022 ರಿಂದ ಜಾರಿಗೆ ಬರಲಿರುವ ಹೊಸ ಸೆಕ್ಷನ್ 194S ಗೆ ಸಂಬಂಧಿಸಿದಂತೆ ಕೆಲವು ಸಮಸ್ಯೆಗಳನ್ನು ತೊಡೆದು ಹಾಕಲು ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟಾಕ್ಸಸ್ (ಸಿಬಿಡಿಟಿ) ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

 

ಹಣಕಾಸು ಕಾಯಿದೆ 2022 ರ ಮೂಲಕ ಆದಾಯ ತೆರಿಗೆ ಕಾಯಿದೆಯಲ್ಲಿ ವಿಭಾಗ 194S ಅನ್ನು ಸೇರಿಸಲಾಯಿತು. ಇದು ಕ್ರಿಪ್ಟೋ ಮತ್ತು ಇತರ ವರ್ಚುವಲ್ ಡಿಜಿಟಲ್ ಸ್ವತ್ತುಗಳ ವರ್ಗಾವಣೆಯ ಮೇಲೆ ಶೇಕಡ ಒಂದು ಟಿಡಿಎಸ್ ಅನ್ನು ಕಡಿತಗೊಳಿಸುವುದು ಕಡ್ಡಾಯವಾಗಿದೆ.

ನಕಲಿ ಕ್ರಿಪ್ಟೋಕರೆನ್ಸಿ ವಿನಿಮಯ ಜಾಲಕ್ಕೆ 1000 ಕೋಟಿ ರು ನಷ್ಟ

ದೇಶದಲ್ಲಿ ಕ್ರಿಪ್ಟೋ ಕರೆನ್ಸಿಯನ್ನು ನಿಷೇಧ ಮಾಡಲಾಗುತ್ತದೆಯೇ ಎಂಬ ಬಗ್ಗೆ ಇತ್ತೀಚೆಗೆ ಸುದ್ದಿಯಾಗಿತ್ತು. ಈ ನಡುವೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ. ಭಾರತದಲ್ಲಿ ಕ್ರಿಪ್ಟೋ ಖರೀದಿದಾರರು ಮತ್ತು ಮಾರಾಟಗಾರರಿಗೆ ಸಹಾಯ ಮಾಡಬಹುದಾದ ವಿವರವಾದ ಸುತ್ತೋಲೆಯ ಕೆಲವು ಪ್ರಮುಖ ಸ್ಪಷ್ಟೀಕರಣವನ್ನು ನಾವು ಇಲ್ಲಿ ವಿವರಿಸಿದ್ದೇವೆ. ಮುಂದೆ ಓದಿ....

 ವಿನಿಮಯದ ಮೂಲಕ ಕ್ರಿಪ್ಟೋ ವರ್ಗಾವಣೆ ಟಿಡಿಎಸ್ ಕಡಿತವಾಗುತ್ತಾ?

ವಿನಿಮಯದ ಮೂಲಕ ಕ್ರಿಪ್ಟೋ ವರ್ಗಾವಣೆ ಟಿಡಿಎಸ್ ಕಡಿತವಾಗುತ್ತಾ?

ಸುತ್ತೋಲೆಯ ಪ್ರಕಾರ, ಈ ಸಂದರ್ಭದಲ್ಲಿ ವಿನಿಮಯದ ವೇಳೆ ಟಿಡಿಎಸ್ ಅನ್ನು ಕಡಿತ ಮಾಡಲಾಗುತ್ತದೆ. "ಮಾರಾಟಗಾರರಿಗೆ ಕ್ರೆಡಿಟ್ ಮಾಡುವ ಅಥವಾ ಪಾವತಿ ಮಾಡುವ ವಿನಿಮಯದ ಮೊತ್ತದಿಂದ ಮಾತ್ರ ತೆರಿಗೆಯನ್ನು ಕಡಿತ ಮಾಡಬಹುದು," ಎಂದು ಸುತ್ತೋಲೆ ಹೇಳುತ್ತದೆ. "ಬ್ರೋಕರ್ ವಿಡಿಎ ಅನ್ನು ಹೊಂದಿದ್ದರೆ ಅವರೇ ಮಾರಾಟಗಾರರಾಗಿರುತ್ತಾರೆ. ಎಕ್ಸ್‌ಚೇಂಜ್‌ನಿಂದ ಬ್ರೋಕರ್‌ಗೆ ಪಾವತಿ ಮಾಡುವ ಮೊತ್ತವು ಕೂಡಾ ತೆರಿಗೆಗೆ ಒಳಪಡುತ್ತದೆ," ಎಂದು ಸುತ್ತೋಲೆ ಉಲ್ಲೇಖ ಮಾಡಿದೆ.

 ಬ್ರೋಕರ್ ಮೂಲಕ ಕ್ರಿಪ್ಟೋ ವರ್ಗಾವಣೆಗೆ ಟಿಡಿಎಸ್?

ಬ್ರೋಕರ್ ಮೂಲಕ ಕ್ರಿಪ್ಟೋ ವರ್ಗಾವಣೆಗೆ ಟಿಡಿಎಸ್?

ಎಕ್ಸ್‌ಚೇಂಜ್ ಮತ್ತು ಮಾರಾಟಗಾರರ ನಡುವಿನ ಕ್ರೆಡಿಟ್/ಪಾವತಿಯು ಬ್ರೋಕರ್ ಮೂಲಕ ನಡೆದಾಗ ಎಕ್ಸ್‌ಚೇಂಜ್ ಸಂದರ್ಭದಲ್ಲಿ ತೆರಿಗೆ ವಿಧಿಸಲಾಗುತ್ತದೆ. ಎಕ್ಸ್‌ಚೇಂಜರ್ ಮತ್ತು ಬ್ರೋಕರ್ ನಡುವೆ ಒಪ್ಪಂದವಿದ್ದರೆ ಬ್ರೋಕರ್‌ ತೆರಿಗೆಯನ್ನು ಕಡಿತಗೊಳಿಸಬಹುದು ಎಂದು ಸುತ್ತೋಲೆ ಹೇಳಿದೆ. ಆದರೆ ಗಡುವಿನ ದಿನಾಂಕದಂದು ಅಥವಾ ಮೊದಲು ತ್ರೈಮಾಸಿಕದ ಎಲ್ಲಾ ವಹಿವಾಟುಗಳಿಗೆ ತ್ರೈಮಾಸಿಕ ಹೇಳಿಕೆ (ಫಾರ್ಮ್ ಸಂಖ್ಯೆ 26QF ನಲ್ಲಿ) ಒದಗಿಸುವ ಅಗತ್ಯವಿದೆ.

 ಸ್ವತ್ತಿನ ಮಾಲೀಕರೇ ವಿನಿಮಯ ಮಾಡಿದಾಗ ಟಿಡಿಎಸ್ ಯಾರು ಕಡಿತ ಮಾಡುವುದು?
 

ಸ್ವತ್ತಿನ ಮಾಲೀಕರೇ ವಿನಿಮಯ ಮಾಡಿದಾಗ ಟಿಡಿಎಸ್ ಯಾರು ಕಡಿತ ಮಾಡುವುದು?

ಈ ಸಂದರ್ಭದಲ್ಲಿ ಖರೀದಿದಾರರು ಟಿಡಿಎಸ್ ಅನ್ನು ಕಡಿತ ಮಾಡಬೇಕಾಗುತ್ತದೆ. ಎಕ್ಸ್‌ಚೇಂಜರ್ ಆಸ್ತಿಯ ಮಾಲೀಕರೇ ಅಥವಾ ಇಲ್ಲವೇ ಎಂದು ಖರೀದಿದಾರರಿಗೆ ತಿಳಿದಿಲ್ಲದೆ ಇರಬಹುದು. ಈ ಸಂದರ್ಭದಲ್ಲಿ ಯಾವುದೇ ಗೊಂದಲವನ್ನು ತೆಗೆದುಹಾಕಲು, ಸುತ್ತೋಲೆಯು ಪರ್ಯಾಯವಾಗಿ, "ಎಲ್ಲಾ ವಹಿವಾಟುಗಳಿಗೆ ಸಂಬಂಧಿಸಿದಂತೆ ಎಕ್ಸ್‌ಚೇಂಜರ್ ಖರೀದಿದಾರ ಅಥವಾ ಅವನ ಬ್ರೋಕರ್‌ನೊಂದಿಗೆ ಲಿಖಿತ ಒಪ್ಪಂದವನ್ನು ಮಾಡಿಕೊಳ್ಳಬಹುದು." ಆದಾಯ ತೆರಿಗೆ ರಿಟರ್ನ್ ಮತ್ತು ಈ ಎಲ್ಲಾ ವಹಿವಾಟುಗಳನ್ನು ಅಂತಹ ರಿಟರ್ನ್‌ನಲ್ಲಿ ಸೇರಿಸಬೇಕು.

 ಮತ್ತೊಂದು ಕ್ರಿಪ್ಟೋಕರೆನ್ಸಿಗೆ ಕ್ರಿಪ್ಟೋ ವರ್ಗಾವಣೆ ವೇಳೆ ಟಿಡಿಎಸ್ ಹೇಗೆ ವರ್ಗಾವಣೆ?

ಮತ್ತೊಂದು ಕ್ರಿಪ್ಟೋಕರೆನ್ಸಿಗೆ ಕ್ರಿಪ್ಟೋ ವರ್ಗಾವಣೆ ವೇಳೆ ಟಿಡಿಎಸ್ ಹೇಗೆ ವರ್ಗಾವಣೆ?

ಒಬ್ಬ ವ್ಯಕ್ತಿಯು ಒಂದು ಕ್ರಿಪ್ಟೋ ಬದಲಿಗೆ ಇನ್ನೊಂದು ಕ್ರಿಪ್ಟೋವನ್ನು ವಿನಿಮಯ ಮಾಡುವುದಾದರೆ ಇಬ್ಬರೂ ಕೂಡಾ ಖರೀದಿದಾರರು ಹಾಗೂ ಮಾರಾಟಗಾರರು ಆಗುತ್ತಾರೆ. ಈ ಸಂದರ್ಭದಲ್ಲಿ ಇಬ್ಬರೂ ತೆರಿಗೆ ಪಾವತಿ ಮಾಡಬೇಕಾಗುತ್ತದೆ. ಹಾಗೆಯೇ ವರ್ಚುವಲ್ ಡಿಜಿಟಲ್ ಆಸ್ತಿಗಳ ವಿನಿಮಯಕ್ಕೆ ಸಾಕ್ಷ್ಯವನ್ನು ತೋರಿಸಬೇಕು. "ವಿಡಿಎ "ಎ" ಅನ್ನು ಮತ್ತೊಂದು ವಿಡಿಎ "ಬಿ" ನೊಂದಿಗೆ ವಿನಿಮಯ ಮಾಡಿಕೊಳ್ಳುವ ಸಂದರ್ಭದಲ್ಲಿ ಇಬ್ಬರೂ ಖರೀದಿದಾರರು ಮತ್ತು ಮಾರಾಟಗಾರರಾಗುತ್ತಾರೆ.

 ಪಾವತಿ ಗೇಟ್‌ವೇಗಳು ಕ್ರಿಪ್ಟೋ ವರ್ಗಾವಣೆಗಳಲ್ಲಿ ಟಿಡಿಎಸ್ ಅನ್ನು ಕಡಿತಗೊಳಿಸಬಹುದೆ?

ಪಾವತಿ ಗೇಟ್‌ವೇಗಳು ಕ್ರಿಪ್ಟೋ ವರ್ಗಾವಣೆಗಳಲ್ಲಿ ಟಿಡಿಎಸ್ ಅನ್ನು ಕಡಿತಗೊಳಿಸಬಹುದೆ?

ಪಾವತಿ ಗೇಟ್‌ವೇಗಳ ಮೂಲಕ ಪಾವತಿ ಮಾಡಿದರೆ ತೆರಿಗೆಯನ್ನು ಎರಡು ಬಾರಿ ಕಡಿತಗೊಳ್ಳಬಹುದಾದ ಸಾಧ್ಯತೆಗಳು ಇದೆ. ಈ ತೊಂದರೆಯನ್ನು ತೆಗೆದುಹಾಕಲು ಪಾವತಿ ಗೇಟ್‌ವೇ ವಹಿವಾಟಿನ ಸಂದರ್ಭದಲ್ಲಿ ಕಾಯಿದೆಯ ಸೆಕ್ಷನ್ 194S ಅಡಿಯಲ್ಲಿ ತೆರಿಗೆಯನ್ನು ಕಡಿತಗೊಳಿಸುವ ಅಗತ್ಯವಿಲ್ಲ.

 ಕ್ರಿಪ್ಟೋ ಮೌಲ್ಯ ರೂ 50,000 ಅಥವಾ ರೂ 10,000 ಕ್ಕಿಂತ ಹೆಚ್ಚಿದ್ದಾಗ?

ಕ್ರಿಪ್ಟೋ ಮೌಲ್ಯ ರೂ 50,000 ಅಥವಾ ರೂ 10,000 ಕ್ಕಿಂತ ಹೆಚ್ಚಿದ್ದಾಗ?

ಸೆಕ್ಷನ್ 194S ಪ್ರಕಾರ, ಕ್ರಿಪ್ಟೋ ಮೌಲ್ಯ 50,000 ರೂಪಾಯಿಗಿಂತ ಅಧಿಕವಾಗಿದ್ದಾಗ ಇತರ ಸಂದರ್ಭಗಳಲ್ಲಿ ಹತ್ತು ಸಾವಿರ ರೂಪಾಯಿಗಳನ್ನು ಮೀರಿದಾಗ ಮಾತ್ರ ತೆರಿಗೆಯನ್ನು ಕಡಿತಗೊಳಿಸುವ ಹೊಣೆಗಾರಿಕೆ ಇದೆ. ರೂ 50,000 ಅಥವಾ ರೂ 10,000 ರ ಮಿತಿಯನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ ಎಂಬುದನ್ನು ಸುತ್ತೋಲೆ ಸ್ಪಷ್ಟಪಡಿಸುತ್ತದೆ.

English summary

TDS on Crypto in India: Income Tax Guidelines For Cryptocurrency Transactions Explained in Kannada

TDS on Crypto Transactions in India: Here we explained about the new Income Tax Guidelines, Circular, FAQs, Rules that will apply on cryptocurrency transactions from July 1. Read on.
Story first published: Friday, June 24, 2022, 13:43 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X