For Quick Alerts
ALLOW NOTIFICATIONS  
For Daily Alerts

ಫೋರ್ಡ್‌, ಜನರಲ್‌ ಮೋಟಾರ್ಸ್ ಹಿಂದಿಕ್ಕಿದ ಟೆಸ್ಲಾ ಮಾರುಕಟ್ಟೆ ಮೌಲ್ಯ

|

ಆಟೋಮೊಬೈಲ್ ಕ್ಷೇತ್ರದಲ್ಲಿ ಹೊಸ ಸಂಚಲನವನ್ನೇ ಸೃಷ್ಠಿಸಿರುವ ಎಲೆಕ್ಟ್ರಾನಿಕ್ ಕಾರು ತಯಾರಿಕಾ ಕಂಪನಿ ಟೆಸ್ಲಾ ಕಂಪನಿಯ ಷೇರುಗಳು ಬುಧವಾರ 5 ಪರ್ಸೆಂಟ್ ಏರಿಕೆಯಾಗಿದ್ದು, ಇದರ ಮಾರುಕಟ್ಟೆಯ ಮೌಲ್ಯವು ಜನರಲ್ ಮೋಟಾರ್ಸ್ ಹಾಗೂ ಫೋರ್ಡ್‌ ಕಂಪನಿಯ ಷೇರುಗಳಿಗಿಂತಲೂ ಹೆಚ್ಚಾಗಿದೆ.

ಟೆಸ್ಲಾ ಸೈಬರ್‌ಟ್ರಕ್ ಖರೀದಿಗೆ ಮುಗಿಬಿದ್ದ ಜನರು, 4 ದಿನದಲ್ಲಿ 1.87 ಲಕ್ಷ ಬುಕ್ಕಿಂಗ್ಟೆಸ್ಲಾ ಸೈಬರ್‌ಟ್ರಕ್ ಖರೀದಿಗೆ ಮುಗಿಬಿದ್ದ ಜನರು, 4 ದಿನದಲ್ಲಿ 1.87 ಲಕ್ಷ ಬುಕ್ಕಿಂಗ್

ಬುಧವಾರ ಷೇರು ಮಾರುಕಟ್ಟೆಯಲ್ಲಿ 5 ಪರ್ಸೆಂಟ್ ಹೆಚ್ಚಾದ ಟೆಸ್ಲಾ ಕಂಪನಿಯ ಪ್ರತಿ ಷೇರಿನ ಬೆಲೆ 492.14 ಅಮೆರಿಕನ್ ಡಾಲರ್ ಮುಟ್ಟಿದೆ. ಈ ಮೂಲಕ ಟೆಸ್ಲಾ ಮಾರುಕಟ್ಟೆ ಮೌಲ್ಯವು 89 ಬಿಲಿಯನ್ ಅಮೆರಿಕನ್ ಡಾಲರ್‌ (67.9 ಬಿಲಿಯನ್ ಪೌಂಡ್ಸ್) ಗೆ ಮುಟ್ಟಿದೆ. ಇದು ಪೋರ್ಡ್ ಹಾಗೂ ಜನರಲ್ ಮೋಟಾರ್ಸ್‌ನ ಮಾರುಕಟ್ಟೆ ಮೌಲ್ಯಕ್ಕಿಂತ 2 ಬಿಲಿಯನ್ ಅಮೆರಿಕನ್ ಡಾಲರ್‌ ಹೆಚ್ಚಿದೆ.

ಫೋರ್ಡ್‌, ಜನರಲ್‌ ಮೋಟಾರ್ಸ್ ಹಿಂದಿಕ್ಕಿದ ಟೆಸ್ಲಾ ಮಾರುಕಟ್ಟೆ ಮೌಲ್ಯ

ಜನರಲ್ ಮೋಟಾರ್ಸ್‌ನ ಮಾರುಕಟ್ಟೆ ಮೌಲ್ಯವು 50 ಬಿಲಿಯನ್ ಅಮೆರಿಕನ್ ಡಾಲರ್ ಇದ್ದು, ಫೋರ್ಡ್‌ನ ಒಟ್ಟಾರೆ ಮಾರುಕಟ್ಟೆ ಮೌಲ್ಯ 37 ಬಿಲಿಯನ್‌ ಅಮೆರಿಕನ್ ಡಾಲರ್‌ನಷ್ಟಿದೆ. ಆದರೆ ಈ ಎರಡು ಕಂಪನಿಯ ಷೇರುಗಳ ಮಾರುಕಟ್ಟೆ ಮೌಲ್ಯಕ್ಕಿಂತ ಹೆಚ್ಚಿನದನ್ನು ಟೆಸ್ಲಾ ಸಂಪಾದಿಸಿದೆ.

 7,000 ರುಪಾಯಿ ಗುಜರಿ ಕಾರಿಗೆ 7 ಕೋಟಿ ಕೊಟ್ಟು ಖರೀದಿಸಿದ್ದ ಎಲಾನ್ ಮಸ್ಕ್ 7,000 ರುಪಾಯಿ ಗುಜರಿ ಕಾರಿಗೆ 7 ಕೋಟಿ ಕೊಟ್ಟು ಖರೀದಿಸಿದ್ದ ಎಲಾನ್ ಮಸ್ಕ್

2019-20ರ ಮೂರನೇ ತ್ರೈಮಾಸಿಕದಲ್ಲಿ ಲಾಭ ಹಾಗೂ ಚೀನಾದಲ್ಲಿ ಹೊಸ ಕಾರ್ಖಾನೆಗಳ ಸ್ಥಾಪನೆ ಜೊತೆಗೆ ನಾಲ್ಕನೇ ತ್ರೈಮಾಸಿಕದಲ್ಲಿ ನಿರೀಕ್ಷೆಗಿಂತ ಉತ್ತಮವಾಗಿ ಕಾರು ವಿತರಣೆಗೆ ಉತ್ತೇಜಿಸಲ್ಪಟ್ಟ ಟೆಸ್ಲಾ ಷೇರು, ಕಳೆದ ಮೂರು ತಿಂಗಳಲ್ಲಿ ದ್ವಿಗುಣಗೊಂಡಿದೆ. ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ ಟೆಸ್ಲಾ ಸಂಸ್ಥೆ ತನ್ನ ಪ್ರಪ್ರಥಮ ಎಲೆಕ್ಟ್ರಿಕ್ ಪಿಕಪ್ ಟ್ರಕ್ ಬಿಡುಗಡೆ ಮಾಡಿದ ನಾಲ್ಕೇ ದಿನದಲ್ಲಿ 1.87 ಲಕ್ಷ ಟ್ರಕ್ ಬುಕ್ಕಿಂಗ್ ಆಗುವ ಮೂಲಕ ದಾಖಲೆ ಮಾಡಿತ್ತು.

English summary

Tesla's Market Value Has Eclipsed Ford And General Motars

Electric car maker's stock jumped nearly 5% on Wednesday, tesla market capitalization larger than general motars and ford
Story first published: Thursday, January 9, 2020, 10:07 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X