ರೋಬೋಟ್ ಮೂಲಕ ಉದ್ಯೋಗಿಗಳನ್ನು ನೇಮಿಸಿಕೊಳ್ಳುತ್ತಿದೆ ಈ ಬ್ಯಾಂಕ್
ಫೆಡರಲ್ ಬ್ಯಾಂಕ್ ತನ್ನ ಸಾಂಪ್ರದಾಯಿಕ ಮಾನವ ಸಂಪನ್ಮೂಲ(HR) ವಿಭಾಗದ ಮೂಲಕ ಉದ್ಯೋಗಿಗಳನ್ನು ನೇಮಿಸಿಕೊಳ್ಳುವ ಪ್ರಕಿಯೆ ಪರಿವರ್ತನೆಗೆ ಮುಂದಾಗಿದೆ. ಕೃತಕ ಬುದ್ಧಿವಂತಿಕೆ(artificial intelligence) ಮೂಲಕ ಉದ್ಯೋಗಿಗಳನ್ನು ಸಂದರ್ಶಿಸುತ್ತಿರುವುದು ದೇಶೀಯ ಬ್ಯಾಂಕಿಂಗ್ ವಲಯದಲ್ಲಿ ಇದೇ ಮೊದಲು.
ಕೊಚ್ಚಿ ಮೂಲದ ಖಾಸಗಿ ವಲಯದ ಮಾನವ ಸಂಪನ್ಮೂಲ ಸಾಧನವಾದ ಫೆಡ್‌ಕ್ರೂಟ್(FedRecruit), ಮಾನವ ಸಂಪನ್ಮೂಲ ಕಾರ್ಯವನ್ನು ಪೂರ್ಣವಾಗಿ ನಿಭಾಯಿಸುವ ತಂತ್ರಜ್ಙಾನ ಹೊಂದಿದೆ. ಇದರ ಅಡಿಯಲ್ಲಿ ಅನೇಕ ಹಂತದ ನೇಮಕಾತಿ ಪ್ರಕ್ರಿಯೆಯು ನಡೆಯುತ್ತದೆ.
ಅಂತಿಮ ಸುತ್ತಿನಲ್ಲಿ ಮಾತ್ರ ಉನ್ನತ ಮಾನವ ಸಂಪನ್ಮೂಲ ಅಧಿಕಾರಿಗಳು ಸಂದರ್ಶನಕ್ಕೆ ಬಂದಿದ್ದ ಹೊಸ ನೇಮಕಾತಿಗಳೊಂದಿಗೆ(New Recruits) ಭೇಟಿಯಾಗುತ್ತಾರೆ.
ಫೆಡರಲ್ ಬ್ಯಾಂಕ್ ಉದ್ಯೋಗಿಗಳ ನೇಮಕಾತಿ ಪ್ರಕ್ರಿಯೆಗೆ ತಂತ್ರಜ್ಞಾನಕ್ಕೆ ಸಂಪೂರ್ಣವಾಗಿ ಬದಲಾದ ದೇಶೀಯ ಮೊದಲ ಬ್ಯಾಂಕ್ ಆಗಿದೆ. ಹೆಚ್‌ಡಿಎಫ್‌ಸಿ ಬ್ಯಾಂಕಿನಲ್ಲೂ ಸಾಕಷ್ಟು ತಂತ್ರಜ್ಞಾನವನ್ನು ಬಳಸಲಾಗುತ್ತಿದ್ದು, ಪ್ರಾಥಮಿಕ ಸಂದರ್ಶನ ಪ್ರಕ್ರಿಯೆಯಲ್ಲಿ ಮಾತ್ರ ಕೃತಕ ಬುದ್ಧಿವಂತಿಕೆ(artificial intelligence)ಬಳಸಲಾಗುತ್ತದೆ.
'ಫೆಡ್‌ಕ್ರೂಟ್(FedRecruit) ಡೇಟಾ ಪಾಯಿಂಟ್‌ಗಳ ಸರಣಿಯನ್ನು ಅವಲಂಬಿಸಿದೆ ಮತ್ತು ಅಭ್ಯರ್ಥಿಯನ್ನು ಎಲ್ಲಾ ರೀತಿಯ ವಿಭಾಗದಲ್ಲಿ ಸಂದರ್ಶಿಸುತ್ತದೆ. ರೊಬೊಟಿಕ್ ಸಂದರ್ಶನಗಳು, ಸೈಕೋಮೆಟ್ರಿಕ್ ಮತ್ತು ಆಟದ ಆಧಾರಿತ ಮೌಲ್ಯಮಾಪನ ಪ್ರಕ್ರಿಯೆಗಳು ಇತ್ಯಾದಿಗಳ ಮೂಲಕ ಡೇಟಾ ಪಾಯಿಂಟ್‌ಗಳನ್ನು ಸಂಗ್ರಹಿಸಲಾಗುತ್ತದೆ ಎಂದು ಫೆಡರಲ್ ಬ್ಯಾಂಕ್ ಮಾನವ ಸಂಪನ್ಮೂಲ ಮುಖ್ಯಸ್ಥ ಅಜಿತ್ ಕುಮಾರ್ ಕೆ.ಕೆ ಪಿಟಿಐಗೆ ತಿಳಿಸಿದ್ದಾರೆ.