For Quick Alerts
ALLOW NOTIFICATIONS  
For Daily Alerts

ದೇಶದ ಎಂಟು ಪ್ರಮುಖ ವಲಯಗಳ ಉತ್ಪಾದನೆ ಶೇ 23.4 ರಷ್ಟು ಕುಸಿತ

|

ಬೆಂಗಳೂರು: ಕೊರೊನಾವೈರಸ್ ಲಾಕ್‌ಡೌನ್‌ನಿಂದಾಗಿ ಮೇ ತಿಂಗಳಲ್ಲಿ ದೇಶದ ಎಂಟು ಪ್ರಮುಖ ವಲಯಗಳ ಉತ್ಪಾದನೆಯು ಶೇಕಡಾ 23.4 ರಷ್ಟು ಕುಗ್ಗಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಮಂಗಳವಾರ ಬಿಡುಗಡೆ ಮಾಡಿದ ಅಂಕಿ ಅಂಶಗಳು ತಿಳಿಸಿವೆ.

 

ರಸಗೊಬ್ಬರವನ್ನು ಹೊರತುಪಡಿಸಿ, ಕಲ್ಲಿದ್ದಲು, ಕಚ್ಚಾ ತೈಲ, ನೈಸರ್ಗಿಕ ಅನಿಲ, ಸಂಸ್ಕರಣಾ ಉತ್ಪನ್ನಗಳು, ಉಕ್ಕು, ಸಿಮೆಂಟ್ ಮತ್ತು ವಿದ್ಯುತ್ ಈ ಎಲ್ಲಾ ಏಳು ವಲಯಗಳು ಮೇ ತಿಂಗಳಲ್ಲಿ ನಕಾರಾತ್ಮಕ ಬೆಳವಣಿಗೆಯನ್ನು ದಾಖಲಿಸಿವೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಹೇಳಿದೆ.

 

ಭಾರತ ಮತ್ತು ಭೂತಾನ್ ಜಂಟಿ ಜಲ ವಿದ್ಯುತ್ ಯೋಜನೆಗೆ ಸಹಿಭಾರತ ಮತ್ತು ಭೂತಾನ್ ಜಂಟಿ ಜಲ ವಿದ್ಯುತ್ ಯೋಜನೆಗೆ ಸಹಿ

ಆದರೆ 2019 ರ ಮೇ ತಿಂಗಳಲ್ಲಿ ಶೇಕಡಾ 3.8 ರಷ್ಟು ಈ ಕ್ಷೇತ್ರಗಳು ಬೆಳವಣಿಗೆ ಸಾಧಿಸಿದ್ದವು.ಕೊರೊನಾ ಲಾಕ್‌ಡೌನ್ ಪ್ರಭಾವದಿಂದಾಗಿಯೇ ಶೇಕಡಾ 23.4 ರಷ್ಟು ಉತ್ಪಾದನೆ ಕುಗ್ಗಿ ಹೋಗಿದೆ. ಏಪ್ರಿಲ್-ಮೇ 2020-21ರ ಅವಧಿಯಲ್ಲಿ, ಈ ಕ್ಷೇತ್ರಗಳ ಉತ್ಪಾದನೆಯು ಶೇಕಡಾ 30 ರಷ್ಟು ಕುಸಿದಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಇದು 4.5 ಪ್ರತಿಶತದಷ್ಟು ಕುಸಿತ ಕಂಡು ಬಂದಿತ್ತು. ಈಗ ಅದು ನಾಲ್ಕು ಪಟ್ಟು ಹೆಚ್ಚಳವಾಗಿದೆ.

ದೇಶದ ಎಂಟು ಪ್ರಮುಖ ವಲಯಗಳ ಉತ್ಪಾದನೆ ಶೇ 23.4 ರಷ್ಟು ಕುಸಿತ

2020 ರ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ದೇಶಾದ್ಯಂತ ಲಾಕ್‌ಡೌನ್‌ನಿಂದ, ಕಲ್ಲಿದ್ದಲು, ಸಿಮೆಂಟ್, ಉಕ್ಕು, ನೈಸರ್ಗಿಕ ಅನಿಲ, ಸಂಸ್ಕರಣಾಗಾರ, ಕಚ್ಚಾ ತೈಲ ಇತ್ಯಾದಿ ಉತ್ಪಾದನೆಗಳು ಗಣನೀಯ ಪ್ರಮಾಣದ ಉತ್ಪಾದನಾ ನಷ್ಟವನ್ನು ಅನುಭವಿಸಿವೆ ಕೈಗಾರಿಕಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಕೈಗಾರಿಕಾ ಉತ್ಪಾದನಾ ಸೂಚ್ಯಂಕದಲ್ಲಿ (ಐಐಪಿ) ಈ ಎಂಟು ವಲಯಗಳ ಕೊಡುಗೆ ಶೇ 40.27 ರಷ್ಟಿದೆ.

English summary

The India's Eight Core Sectors Production 23.4 Per Cent Decline

The India's Eight Core Sectors Production 23.4 Per Cent Decline
Story first published: Wednesday, July 1, 2020, 13:39 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X